Home ದಾವಣಗೆರೆ ಕಿವೀಸ್ ಬೌಲರ್ ಗಳ ಚೆಂಡಾಡಿದ ಅಭಿಷೇಕ್ ಶರ್ಮಾ, 45 ರನ್ ಗಳಿಸಿ ವೈಭವ್ ಸೂರ್ಯವಂಶಿ ಔಟ್: ಪವರ್ ಪ್ಲೇನಲ್ಲಿ 124 ರನ್ ಸಿಡಿಸಿ ದಾಖಲೆ, ರೆಕಾರ್ಡ್ ಮೇಲೆ ರೆಕಾರ್ಡ್!
ದಾವಣಗೆರೆಕ್ರೀಡೆಬೆಂಗಳೂರು

ಕಿವೀಸ್ ಬೌಲರ್ ಗಳ ಚೆಂಡಾಡಿದ ಅಭಿಷೇಕ್ ಶರ್ಮಾ, 45 ರನ್ ಗಳಿಸಿ ವೈಭವ್ ಸೂರ್ಯವಂಶಿ ಔಟ್: ಪವರ್ ಪ್ಲೇನಲ್ಲಿ 124 ರನ್ ಸಿಡಿಸಿ ದಾಖಲೆ, ರೆಕಾರ್ಡ್ ಮೇಲೆ ರೆಕಾರ್ಡ್!

Share
Share

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರರು ಅಕ್ಷರಶಃ ಅಬ್ಬರಿಸಿ ಬೊಗ್ಗಿಸಿದ್ದು, ವಿಶ್ವ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 45 ರನ್ ಗಳಿಸಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಅರ್ಧಶತಕದಿಂದ ವಂಚಿತರಾದರು.

ನ್ಯೂಜಿಲೆಂಡ್ ತಂಡವು ನೀಡಿದ ಕಠಿಣ 199 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ತಂಡವು, ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 6.ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 118 ರನ್ ಕಲೆಹಾಕಿ ಪವರ್ ಪ್ಲೇನಲ್ಲಿ ದಾಖಲೆ ಬರೆದಿದೆ.

ಕೇವಲ 21 ಎಸೆತಗಳಲ್ಲಿ ಅಜೇಯ 73 ರನ್ ಸಿಡಿಸಿದ ಅಭಿಷೇಕ್ ಶರ್ಮಾ ಮತ್ತು 17 ಎಸೆತಗಳಲ್ಲಿ 44 ರನ್ ಗಳಿಸಿದ ವೈಭವ್ ಸೂರ್ಯವಂಶಿ ಜೋಡಿ ಕಿವೀಸ್ ಬೌಲರ್‌ಗಳನ್ನು ಮೈದಾನದ ಮೂಲೆಮೂಲೆಗೂ ಅಟ್ಟಿತು.

ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಡೇರಿಲ್ ಮಿಚೆಲ್ ಅವರ ಭರ್ಜರಿ ಅಜೇಯ 89 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ಕಲೆಹಾಕಿತ್ತು. ಆದರೆ, ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತದ ಆರಂಭಿಕ ಜೋಡಿಯು ಮೊದಲ ಓವರ್‌ನಿಂದಲೇ ಮೈದಾನದಲ್ಲಿ ರನ್ ಮಳೆ ಹರಿಸಿತು. ಕೇವಲ 5 ಓವರ್‌ಗಳಲ್ಲೇ ಶತಕ ಪೂರೈಸಿದ ತಂಡವು, ಪವರ್‌ಪ್ಲೇ ಅಂತ್ಯಕ್ಕೆ ಬರೋಬ್ಬರಿ 124 ರನ್ ಕಲೆಹಾಕಿ ದಾಖಲೆ ನಿರ್ಮಿಸಿತು. ಪ್ರಸ್ತುತ ಭಾರತ ತಂಡವು ಪ್ರತಿ ಓವರ್‌ಗೆ 20 ಕ್ಕಿಂತ ಅಧಿಕ ರನ್ ರೇಟ್ ಕಾಯ್ದುಕೊಂಡಿದೆ. 133 ರನ್ ಗಳಿಸಿದ್ದು, ಗೆಲುವಿನ ಸನಿಹದಲ್ಲಿ ಭಾರತ ತಂಡವಿದೆ.

ದಾಖಲೆಯ ಪವರ್‌ಪ್ಲೇ ಸ್ಕೋರ್: ಭಾರತ ತಂಡವು ಕೇವಲ 6.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 124 ರನ್ ಸಿಡಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸಾಧಾರಣ ದಾಖಲೆ ಬರೆದಿದೆ.

ಅಭಿಷೇಕ್ ಶರ್ಮಾ ಸ್ಫೋಟಕ ಆಟ: ಅಭಿಷೇಕ್ ಶರ್ಮಾ ಕೇವಲ 21 ಎಸೆತಗಳಲ್ಲಿ 5 ಭರ್ಜರಿ ಬೌಂಡರಿ ಹಾಗೂ 6 ಸಿಕ್ಸರ್‌ಗಳೊಂದಿಗೆ 73* ರನ್ ಗಳಿಸಿ ಅಬ್ಬರಿಸಿದ್ದಾರೆ.

ವೈಭವ್ ಸೂರ್ಯವಂಶಿ ಸಾಥ್: ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ಅತ್ಯುತ್ಸಾಹದ ಬ್ಯಾಟಿಂಗ್ ನಡೆಸಿ 44 ರನ್ ಸಿಡಿಸಿ ಉತ್ತಮ ಬೆಂಬಲ ನೀಡಿದ್ದಾರೆ.

ಕಿವೀಸ್ ಬೌಲರ್‌ಗಳ ವಿಫಲತೆ: ಜೇಕಬ್ ಡಫಿ, ಮೈಕಲ್ ಬ್ರೇಸ್‌ವೆಲ್ ಸೇರಿದಂತೆ ಪ್ರಮುಖ ಬೌಲರ್‌ಗಳು ಭಾರತೀಯ ಆರಂಭಿಕರ ಆಕ್ರಮಣಕಾರಿ ಆಟದ ಮುಂದೆ ಸಂಪೂರ್ಣವಾಗಿ ಮಂಕಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles