ಲುಧಿಯಾನ (ಪಂಜಾಬ್): ಪಂಜಾಬ್ನ ಲುಧಿಯಾನದಲ್ಲಿ ವರದಕ್ಷಿಣೆಗಾಗಿ ಅಮಾನುಷವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹೀಂದ್ರಾ ಥಾರ್ ಎಸ್ಯುವಿ ಮತ್ತು ಬೈಕ್ ನೀಡುವಂತೆ ಪತ್ನಿ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದ ಪತಿಯೊಬ್ಬ, ಆಕೆ ಬೇಡಿಕೆಯನ್ನು ಈಡೇರಿಸಲು ನಿರಾಕರಿಸಿದಾಗ ಸಾರ್ವಜನಿಕ ರಸ್ತೆಯಲ್ಲೇ ಪತ್ನಿಯನ್ನು ಥಳಿಸಿ, ಕೂದಲನ್ನು ಹಿಡಿದು ಎಳೆದಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಲುಧಿಯಾನದ ಜಸ್ಸಿಯಾ ಗ್ರೀನ್ ಎನ್ಕ್ಲೇವ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ದಂಪತಿಯಲ್ಲಿ, ಪತಿ ರಿತೀಶ್ ಶರ್ಮಾ ಮದುವೆಯ ಮೂರೇ ತಿಂಗಳ ಬಳಿಕ ದುಬಾರಿ ವಾಹನಗಳಿಗಾಗಿ ಪತ್ನಿ ಟ್ವಿಂಕಲ್ ಮೇಲೆ ಕಿರುಕುಳ ಆರಂಭಿಸಿದ್ದನು. ಮೊದಲು ಅರ್ಜಿದಾರರ ಕಾರ್ಡ್ ಬಳಸಿ 50,000 ರೂ. ಸಾಲ ಮಾಡಿಕೊಂಡಿದ್ದಲ್ಲದೆ, ನಂತರ ಥಾರ್ ಗಾಡಿ ಹಾಗೂ ನವರಾತ್ರಿ ಸಂದರ್ಭದಲ್ಲಿ ಬೈಕ್ ತರುವಂತೆ ಪೀಡಿಸುತ್ತಿದ್ದನು. ಹಣಕಾಸಿನ ಬೇಡಿಕೆ ಈಡೇರದ ಕಾರಣ ಆಕೆಯನ್ನು ಮನೆಯೊಳಗೆ ಥಳಿಸಿ, ನಂತರ ರಸ್ತೆಗೆ ಎಳೆದು ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿದ್ದ ಕೆಲ ಅಕ್ಕಪಕ್ಕದ ನಿವಾಸಿಗಳು ಜಗಳ ಬಿಡಿಸಲು ಯತ್ನಿಸಿದರೂ ಆಕೆಯ ಮೇಲಿನ ದೌರ್ಜನ್ಯ ಮುಂದುವರೆದಿದೆ.
ಕ್ರೂರ ಹಲ್ಲೆ ಮತ್ತು ಸಿಸಿಟಿವಿ ದೃಶ್ಯ: ಪತ್ನಿಯ ಮೇಲೆ ಥಳಿಸಿ, ಒದ್ದು, ರಸ್ತೆ ಮಧ್ಯೆ ಕೂದಲ ಹಿಡಿದು ಎಳೆದಾಡಿದ ವೀಡಿಯೊ ಸಿಸಿಟಿವಿಯಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕುಟುಂಬದ ಮೇಲೂ ಹಲ್ಲೆ: ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮೃತಳ ಸಹೋದರ ಗೌರವ್ ಹಾಗೂ ತಂದೆಯ ಮೇಲೂ ಹಲ್ಲೆ ನಡೆಸಲಾಗಿದ್ದು, ಗೌರವ್ ತಲೆಗೆ ತೀವ್ರ ಪೆಟ್ಟಾಗಿ ಹಲವು ಹೊಲಿಕೆಗಳನ್ನು ಹಾಕಿಸಿಕೊಳ್ಳಬೇಕಾಯಿತು.
ಪೊಲೀಸರ ನಿರ್ಲಕ್ಷ್ಯದ ಆರೋಪ: ಸಂತ್ರಂತೆ ಟ್ವಿಂಕಲ್ ಹಾಗೂ ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದರೂ, ಆರಂಭದಲ್ಲಿ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.
ಪೊಲೀಸ್ ಸ್ಪಷ್ಟನೆ: ಜಗತ್ಪುರಿ ಪೊಲೀಸ್ ಔಟ್ಪೋಸ್ಟ್ ಅಧಿಕಾರಿ ಮಾತನಾಡಿ, ಸಂತ್ರತೆಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು ಹಾಗೂ ವೈದ್ಯಕೀಯ ವರದಿ ಬಂದಿರುವುದಾಗಿ ತಿಳಿಸಿದ್ದು, ಶೀಘ್ರದಲ್ಲೇ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಈ ಪ್ರಕರಣವು ರಾಜ್ಯದಲ್ಲಿ ಮಹಿಳಾ ಸುರಕ್ಷತೆ ಹಾಗೂ ವರದಕ್ಷಿಣೆ ಕಿರುಕುಳದ ಗಂಭೀರತೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.





Leave a comment