Home ದಾವಣಗೆರೆ ಕರೆಂಟ್ ಹೋಯ್ತಾ? ಸೆಲ್ಫಿ ಕೊಡಿ, ಉಚಿತವಾಗಿ ‘ಜೈಲರ್ 2’ ಸಿನಿಮಾ ನೋಡಿ: ಕೌನ್ಸಿಲರ್ ಕ್ರಿಯೇಟಿವ್ ಐಡಿಯಾ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯಸಿನಿಮಾ

ಕರೆಂಟ್ ಹೋಯ್ತಾ? ಸೆಲ್ಫಿ ಕೊಡಿ, ಉಚಿತವಾಗಿ ‘ಜೈಲರ್ 2’ ಸಿನಿಮಾ ನೋಡಿ: ಕೌನ್ಸಿಲರ್ ಕ್ರಿಯೇಟಿವ್ ಐಡಿಯಾ!

Share
ಜೈಲರ್ 2
Share

ಚೆನ್ನೈ/ತಿರುಪ್ಪೂರ್: ತಮಿಳುನಾಡಿನಲ್ಲಿ ಘೋಷಣೆ ಇಲ್ಲದೆ ಜಾರಿಯಾಗುತ್ತಿರುವ ವಿದ್ಯುತ್ ಕಡಿತದ ವಿರುದ್ಧ  ಸಾರ್ವಜನಿಕ ಗಮನ ಸೆಳೆಯಲು ಎಐಎಡಿಎಂಕೆ ಪಕ್ಷದ ಕೌನ್ಸಿಲರ್ ಒಬ್ಬರು ಅತ್ಯಂತ ವಿಶಿಷ್ಟವಾದ ಪ್ರತಿಭಟನಾ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಮನೆಗಳಲ್ಲಿ ಕರೆಂಟ್ ಹೋದಾಗ ಕತ್ತಲಲ್ಲಿ ಸೆಲ್ಫಿ ತೆಗೆದು ಕಳುಹಿಸಿದ ಸಾರ್ವಜನಿಕರಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾದ ಉಚಿತ ಟಿಕೆಟ್ ನೀಡುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ.

ಏನಿದು ವಿಶಿಷ್ಟ ಆಫರ್?

ತಮಿಳುನಾಡಿನ ತಿರುಪ್ಪೂರ್ ಮಹಾನಗರ ಪಾಲಿಕೆಯ 9ನೇ ವಾರ್ಡ್ ಎಐಎಡಿಎಂಕೆ ಕೌನ್ಸಿಲರ್, ತಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ಎದುರಾಗುತ್ತಿರುವ ವಿದ್ಯುತ್ ಅಭಾವ ಮತ್ತು ಕಡಿತವನ್ನು ಖಂಡಿಸಲು ವಾಟ್ಸಾಪ್ ಗ್ರೂಪ್ ಒಂದನ್ನು ವೇದಿಕೆಯನ್ನಾಗಿ ಮಾಡಿಕೊಂಡಿದ್ದರು. ತಮ್ಮ ವಾರ್ಡ್‌ನ ನಿವಾಸಿಗಳು ಮನೆಯಲ್ಲಿ ವಿದ್ಯುತ್ ಕೈಕೊಟ್ಟಾಗ ಆ ಕ್ಷಣದ ಸೆಲ್ಫಿ ಫೋಟೋಗಳನ್ನು ತಮಗೆ ಕಳುಹಿಸುವಂತೆ ಕೋರಿದ್ದರು. ಈ ಕ್ರಿಯೇಟಿವ್ ಕರೆಗೆ ನಿವಾಸಿಗಳಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ನೂರಾರು ಜನರು ಕತ್ತಲಿನಲ್ಲಿ ತೆಗೆದ ಸೆಲ್ಫಿಗಳನ್ನು ಕಳುಹಿಸಿಕೊಟ್ಟಿದ್ದರು.

125 ಜನರಿಗೆ ಉಚಿತ ಸಿನಿಮಾ ಪ್ರದರ್ಶನ:

ಸ್ವೀಕರಿಸಲಾದ ಫೋಟೋಗಳಲ್ಲಿ ಕೌನ್ಸಿಲರ್ ಒಟ್ಟು 55 ನಿವಾಸಿಗಳನ್ನು ಆಯ್ಕೆ ಮಾಡಿದ್ದು, ಅವರೊಂದಿಗೆ ಕುಟುಂಬದ ಒಬ್ಬ ಸದಸ್ಯ ಸೇರಿ 110 ಜನರಿಗೆ ಹಾಗೂ ಪಕ್ಷದ 15 ಪದಾಧಿಕಾರಿಗಳು ಸೇರಿದಂತೆ ಒಟ್ಟು 125 ಜನರಿಗೆ ಉಚಿತ ‘ಜೈಲರ್ 2’ ಟಿಕೆಟ್ ವಿತರಿಸಿದ್ದಾರೆ. ಎಐಎಡಿಎಂಕೆ ಪಕ್ಷದ 55ನೇ ಸಂಸ್ಥಾಪನಾ ದಿನಾಚರಣೆಯ ನೆನಪಿಗಾಗಿ ತಿರುಪ್ಪೂರ್‌ನ ಅಂಗೇರಿಪಾಳಯಂನಲ್ಲಿರುವ ಚಿತ್ರಮಂದಿರಕ್ಕೆ ಈ ಎಲ್ಲಾ 125 ಜನರನ್ನು ಕರೆದೊಯ್ದು ಉಚಿತ ಪ್ರದರ್ಶನ ಆಯೋಜಿಸಲಾಯಿತು.

ಅಘೋಷಿತ ವಿದ್ಯುತ್ ಕಡಿತದಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಲು ಮತ್ತು ರಾಜಕೀಯ ಪ್ರತಿಭಟನೆಯನ್ನು ಸೃಜನಶೀಲವಾಗಿ ದಾಖಲಿಸಲು ಈ ಸೆಲ್ಫಿ ಕ್ಯಾಂಪೇನ್ ಬಳಸಿಕೊಳ್ಳಲಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಜೈಲರ್ 2’:

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ, ರಜನಿಕಾಂತ್ ಮುಖ್ಯಭೂಮಿಕೆಯ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಪ್ರದರ್ಶನ ಕಾಣುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಮೋಹನ್‌ಲಾಲ್, ರಮ್ಯಾ ಕೃಷ್ಣನ್, ವಿದ್ಯಾ ಬಾಲನ್, ಎಸ್‌ಜೆ ಸೂರ್ಯ ಹಾಗೂ ಹೃತಿಕ್ ರೋಷನ್ ಸೇರಿದಂತೆ ದಂಡೇ ಅಭಿನಯಿಸಿರುವ ಈ ಚಿತ್ರ, ಬಿಡುಗಡೆಯಾದ 7 ನೇ ದಿನಕ್ಕೆ ಜಾಗತಿಕವಾಗಿ ₹582.45 ಕೋಟಿ ರೂಪಾಯಿ ಗಳಿಕೆ ಮಾಡಿದೆ.

Share

Leave a comment

Leave a Reply

Your email address will not be published. Required fields are marked *

Related Articles