ಬೆಂಗಳೂರು: ಟಾಲಿವುಡ್‌ನ ಜನಪ್ರಿಯ ಸ್ಟಾರ್ ದಂಪತಿಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಜನಪ್ರಿಯ ಚಾಟ್ ಶೋ ‘ಕಾಫಿ ವಿತ್ ಕರಣ್ ಸೀಸನ್ 9’ ಕಾರ್ಯಕ್ರಮದಲ್ಲಿ ಒಟ್ಟಾಗಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದ ಹಲವು ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಮದುವೆಯ ನಂತರ ಮೊದಲ ಬಾರಿಗೆ ಜಂಟಿಯಾಗಿ ಟಿವಿ ಶೋ ಒಂದರಲ್ಲಿ ಕಾಣಿಸಿಕೊಂಡಿರುವ ಈ ಜೋಡಿಯ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಸಂಬಂಧ ಪರೀಕ್ಷಿಸಲು ಬಯಸಿದ್ದೆ ಎಂದ ವಿಜಯ್:
ತಕ್ಷಣವೇ ಮದುವೆಗೆ ಒಪ್ಪಿಕೊಳ್ಳದೆ ಇರಲು ಕಾರಣವೇನೆಂಬುದನ್ನು ವಿವರಿಸಿದ ವಿಜಯ್ ದೇವರಕೊಂಡ, ಹಿಂದಿನ ಕೆಲವು ವೈಯಕ್ತಿಕ ನೋವುಗಳು ಹಾಗೂ ವೃತ್ತಿಜೀವನದ ಒತ್ತಡಗಳು ತನ್ನನ್ನು ಎಚ್ಚರಿಕೆ ವಹಿಸುವಂತೆ ಮಾಡಿದ್ದವು ಎಂದರು. “ನಾನು ತುಂಬಾ ಸಂವೇದನಾಶೀಲ ವ್ಯಕ್ತಿ. ಜೀವನದ ಏಳು-ಬೀಳುಗಳಲ್ಲಿ, ಖುಷಿ-ದುಃಖಗಳಲ್ಲಿ ಮತ್ತು ವೃತ್ತಿ ಜೀವನದ ಹೆಚ್ದಿನ ಒತ್ತಡದ ದಿನಗಳಲ್ಲಿ ನಮ್ಮ ಸಂಬಂಧ ಎಷ್ಟು ಗಟ್ಟಿಯಾಗಿ ನಿಲ್ಲುತ್ತದೆ ಎಂದು ಪರೀಕ್ಷಿಸಲು ಬಯಸಿದ್ದೆ. ಇದು ಕೇವಲ ಭಾವನೆಯಾವೇಶದಲ್ಲಿ ತೆಗೆದುಕೊಂಡ ತೀರ್ಮಾನವಾಗಬಾರದು ಎಂಬುದು ನನ್ನ ಯೋಚನೆಯಾಗಿತ್ತು” ಎಂದು ಸ್ಪಷ್ಟಪಡಿಸಿದರು.
ಫೆಬ್ರವರಿ 26, 2026ರಂದು ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾದ ಈ ಜೋಡಿ, ಇತ್ತೀಚೆಗಷ್ಟೇ ‘ರಾಣಾಬಾಳಿ’ ಸಿನಿಮಾದ ಮೂಲಕವೂ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕರಣ್ ಜೋಹರ್ ಶೋನಲ್ಲಿ ಇವರು ಹಂಚಿಕೊಂಡಿರುವ ಈ ಮದುವೆಯ ಕಥೆ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿದೆ.





Leave a comment