Home ಕ್ರೈಂ ನ್ಯೂಸ್ ರೈಹಾನ್ ವಾದ್ರಾ ‘ನೋ ಐಡಿಯಾ ಈಸ್ ಫೈನಲ್’ ಪ್ರದರ್ಶನದಿಂದ 70ಕ್ಕೂ ಹೆಚ್ಚು ಫೋಟೋಗಳು ಔಟ್: “ಇದು ಪ್ರಜಾಪ್ರಭುತ್ವವೇ ಅಲ್ಲ”ವೆಂದು ಪ್ರಿಯಾಂಕಾ ಗಾಂಧಿ ಕೆಂಡಾಮಂಡಲ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರೈಹಾನ್ ವಾದ್ರಾ ‘ನೋ ಐಡಿಯಾ ಈಸ್ ಫೈನಲ್’ ಪ್ರದರ್ಶನದಿಂದ 70ಕ್ಕೂ ಹೆಚ್ಚು ಫೋಟೋಗಳು ಔಟ್: “ಇದು ಪ್ರಜಾಪ್ರಭುತ್ವವೇ ಅಲ್ಲ”ವೆಂದು ಪ್ರಿಯಾಂಕಾ ಗಾಂಧಿ ಕೆಂಡಾಮಂಡಲ!

Share
ರೈಹಾನ್ ವಾದ್ರಾ
Share

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಬರ್ಟ್ ವಾದ್ರಾ ಅವರ ಪುತ್ರ, ಛಾಯಾಗ್ರಾಹಕ ರೈಹಾನ್ ವಾದ್ರಾ ಅವರ ಏಕವ್ಯಕ್ತಿ ಫೋಟೋ ಪ್ರದರ್ಶನ ಉದ್ಘಾಟನೆಗೂ ಕೆಲವೇ ಗಂಟೆಗಳ ಮೊದಲು ದೆಹಲಿಯ ಪ್ರತಿಭಟನೆಗಳ ಕುರಿತಾದ ಪ್ರಮುಖ ಛಾಯಾಚಿತ್ರಗಳನ್ನು ತೆರವುಗೊಳಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ದೆಹಲಿಯ ಬಿಕಾನೇರ್ ಹೌಸ್ ಆಡಳಿತ ಮಂಡಳಿಯು ಸುಮಾರು 70ಕ್ಕೂ ಹೆಚ್ಚು ಫೋಟೋಗಳನ್ನು ಬಲವಂತವಾಗಿ ತೆರವುಗೊಳಿಸಿದೆ ಎಂದು ರೈಹಾನ್ ಆರೋಪಿಸಿದ್ದು, ಇದಕ್ಕೆ ಪ್ರತಿಯಾಗಿ ಪ್ರಿಯಾಂಕಾ ಗಾಂಧಿ “ದೇಶದಲ್ಲಿ ಇನ್ಮುಂದೆ ಪ್ರಜಾಪ್ರಭುತ್ವ ಉಳಿದಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

ರೈಹಾನ್ ವಾದ್ರಾ ಅವರ ‘ನೋ ಐಡಿಯಾ ಈಸ್ ಫೈನಲ್’ (No Idea is Final) ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನವು ಬಿಕಾನೇರ್ ಹೌಸ್‌ನ ಸಿಎಸಿಎ ಕಟ್ಟಡದಲ್ಲಿ ಆಯೋಜನೆಯಾಗಿತ್ತು. ಪ್ರದರ್ಶನ ಆರಂಭಕ್ಕೆ ಮುನ್ನವೇ ಮಧ್ಯಾಹ್ನ 3:30ರ ಸುಮಾರಿಗೆ ಆಡಳಿತ ಮಂಡಳಿಯು ರಾಜಕೀಯ ಹಿನ್ನೆಲೆಯ ಫೋಟೋಗಳನ್ನು ಸಂಜೆ 5 ಗಂಟೆಯೊಳಗೆ ತೆರವುಗೊಳಿಸಬೇಕು, ಇಲ್ಲವಾದರೆ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದೆ ಎಂದು ಹೇಳಲಾಗಿದೆ. ಕಳೆದ ಆರು ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಯುವಜನರ ಪ್ರತಿಭಟನೆಗಳು ಹಾಗೂ ಚಳವಳಿಗಳನ್ನು ದಾಖಲಿಸುವ ಉದ್ದೇಶದಿಂದ ಈ ಫೋಟೋಗಳನ್ನು ಇಡಲಾಗಿತ್ತು.

70ಕ್ಕೂ ಹೆಚ್ಚು ಫೋಟೋಗಳ ತೆರವು: ಒಟ್ಟು 100ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ ಆಡಳಿತ ಮಂಡಳಿಯ ನಿರ್ಬಂಧದಿಂದಾಗಿ 70ಕ್ಕೂ ಹೆಚ್ಚು ಫೋಟೋಗಳನ್ನು ತೆಗೆದುಹಾಕಲಾಗಿದ್ದು, ಕೇವಲ 40 ಫೋಟೋಗಳು ಮಾತ್ರ ಬಾಕಿ ಉಳಿದಿವೆ.

ಖಾಲಿ ಬಿದ್ದ ಗೋಡೆಗಳು, ರಾಷ್ಟ್ರಧ್ವಜ: ಫೋಟೋಗಳನ್ನು ತೆರವುಗೊಳಿಸಿದ ನಂತರ ಗ್ಯಾಲರಿಯ ಎರಡು ದೊಡ್ಡ ಕೊಠಡಿಗಳ ಕೆಂಪು ಗೋಡೆಗಳು ಖಾಲಿಯಾಗಿದ್ದು, ಮೊಳೆಗಳು ಮಾತ್ರ ಕಾಣಿಸುತ್ತಿದ್ದವು. ಆ ಜಾಗದಲ್ಲಿ ಸಂವಿಧಾನದ ಪ್ರಸ್ತಾವನೆಯ ಪ್ರತಿಯನ್ನು ಇರಿಸಲಾಗಿತ್ತು. ಅಷ್ಟೇ ಅಲ್ಲದೆ, ಭಾರತದ ರಾಷ್ಟ್ರಧ್ವಜದ ಫೋಟೋವನ್ನೂ ಸಹ ಆಡಳಿತ ಮಂಡಳಿ ತೆರವುಗೊಳಿಸಿದೆ.

ಕಲೆಯ ಮೇಲಿನ ಕತ್ತರಿ: “ಕಲೆಯನ್ನು ರಾಜಕೀಯದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಪ್ರತಿಯೊಂದು ಕಲೆಯಲ್ಲೂ ರಾಜಕೀಯ ಇರುತ್ತದೆ. ಯುವ ಕಲಾವಿದರ ಧ್ವನಿಯನ್ನು ಅಡಗಿಸುವ ಕೆಲಸ ನಡೆಯುತ್ತಿದೆ” ಎಂದು ರೈಹಾನ್ ವಾದ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, “ಫೋಟೋಗಳಲ್ಲಿ ಯಾವುದೇ ಆಕ್ಷೇಪಾರ್ಹ ಸಂಗತಿ ಇರಲಿಲ್ಲ. ಅದು ಕೇವಲ ಘಟನೆಗಳ ದೃಶ್ಯ ದಾಖಲೆಯಾಗಿತ್ತು. ಇಂದು ನನ್ನ ಮಗನಿಗೆ ಈ ಸ್ಥಿತಿ ಬಂದಿದೆ, ನಾಳೆ ಮತ್ತೊಬ್ಬ ಕಲಾವಿದನಿಗೂ ಹೀಗೆಯೇ ಆಗಬಹುದು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ಬಿಕಾನೇರ್ ಹೌಸ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles