ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಇಷ್ಟೊಂದು ರೇಟ್ ಕಡಿಮೆಯಾಗಿ ಹೋಯ್ತಾ…? ಹೆಚ್ಚುತ್ತಲೇ ಇದೆ ಆತಂಕ, ಅಡಿಕೆ (Areca nut) ಬೆಳೆಗಾರರ ಮೊಗದಲ್ಲಿ ಮೂಡಿದ್ದ ಮಂದಹಾಸಕ್ಕೇನಾಯ್ತು ಗೊತ್ತಾ…?

On: September 23, 2023 1:25 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:22-09-2023

ದಾವಣಗೆರೆ: ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಅಡಿಕೆ (Areca nut) ಬೆಳೆಯಲಾಗುತ್ತದೆ. ಕಳೆದ ಎರಡು ತಿಂಗಳ ಹಿಂದೆ ಏರುಮುಖದಲ್ಲಿ ಸಾಗಿದ್ದ ಅಡಿಕೆ (Areca nut)ಧಾರಣೆ ಮತ್ತೆ ಕುಸಿತ ಕಂಡಿದೆ. ಒಂದು ವಾರದೊಳಗೆ ಬರೋಬ್ಬರಿ ನಾಲ್ಕು ಸಾವಿರ ರೂಪಾಯಿ ಕಡಿಮೆಯಾಗಿದ್ದು, ಅಡಿಕೆ (Areca nut) ಬೆಳೆಗಾರರ ಮೊಗದಲ್ಲಿ ಕಾರ್ಮೋಡ ಕವಿದಿದೆ. 57 ಸಾವಿರ ರೂಪಾಯಿ ಮುಟ್ಟಿದ್ದ ಒಂದು ಕ್ವಿಂಟಾಲ್ ಅಡಿಕೆ ರೇಟ್ ಈಗ 47 ಸಾವಿರ ರೂಪಾಯಿಗೆ ಇಳಿದಿದೆ. ಅಂದರೆ ಬರೋಬ್ಬರಿ 10 ಸಾವಿರ ರೂಪಾಯಿ ಕಡಿಮೆಯಾಗಿದೆ.

ಈ ಸುದ್ದಿಯನ್ನೂ ಓದಿ: 

ಭದ್ರಾ ಡ್ಯಾಂ (Bhadra Dam) ನೀರು ಹರಿಸಲು ಪಟ್ಟು, ಬೆಣ್ಣೆನಗರಿಯಲ್ಲಿ ಕಾವೇರಿದ ರೈತರ ಹೋರಾಟ: ರೈತ ಮುಖಂಡರೂ ಸೇರಿ ನೂರಾರು ರೈತರ ಬಂಧನ ಆಗಿದ್ದೇಕೆ…?

ಚನ್ನಗಿರಿಯೇ ಜಿಲ್ಲೆಯಲ್ಲಿ ಅಡಿಕೆ(Areca nut)ಯ ಪ್ರಮುಖ ಮಾರುಕಟ್ಟೆ. ಇಲ್ಲಿ ಪ್ರತಿ ಕ್ವಿಂಟಾಲ್ ಉತ್ತಮ ಹಳೆ ರಾಶಿ ಅಡಿಕೆಗೆ ಕನಿಷ್ಠ ಬೆಲೆ 40,231 ರೂಪಾಯಿ ಇದ್ದರೆ, ಗರಿಷ್ಠ 48,899 ರೂಪಾಯಿಗೆ ವಹಿವಾಟು ನಡೆಸಿದೆ. ಹೊಸ ರಾಶಿ ಅಡಿಕೆ(Areca nut)ಯು 42,510 ರೂಪಾಯಿಯಿಂದ 47,169 ರೂಪಾಯಿಗೆ ವಹಿವಾಟು ಮುಕ್ತಾಯಗೊಳಿಸಿದೆ.

ಹೊಸ ರಾಶಿ ಅಡಿಕೆ(Areca nut)ಯು ಸುಮಾರು ಮೂರು ಸಾವಿರ ರೂಪಾಯಿಯಷ್ಟು ಕುಸಿತ ಕಂಡಿದೆ. ಹಳೆ ಅಡಿಕೆ(Areca nut)ಗೆ ಸ್ವಲ್ಪ ಬೇಡಿಕೆ ಇದ್ದು, ಧಾರಣೆಯಲ್ಲಿಯೂ ಸ್ವಲ್ಪ ಏರಿಕೆ ಕಂಡಿದೆ. ಹೊಸ ರಾಶಿ ಅಡಿಕೆಯು 47,169 ರೂಪಾಯಿಗೆ ಕುಸಿದಿದೆ. ಹಳೆ ರಾಶಿ ಅಡಿಕೆ(Areca nut)ಯು ಸ್ವಲ್ಪ ಧಾರಣೆಯಲ್ಲಿ ಚೇತರಿಕೆ ಕಂಡಿದ್ದು, ಗರಿಷ್ಠ 48, 579 ರೂಪಾಯಿಯಿಂದ 49,899 ರೂಪಾಯಿಗೆ ಏರಿದೆ.

ಕಳೆದ ನಾಲ್ಕೈದು ತಿಂಗಳಿನಿಂದ ಅಡಿಕೆ (Areca nut)ಧಾರಣೆಯು ಹಾವು ಏಣಿ ಆಟದಂತಾಗಿದೆ. ಏಪ್ರಿಲ್ ನಲ್ಲಿ ಇದ್ದ ಧಾರಣೆಯೇ ಈಗ ಬಹುತೇಕ ಇದೆ. 48 ಸಾವಿರ ರೂಪಾಯಿ ಇದ್ದ ಅಡಿಕೆ ಧಾರಣೆ ಜುಲೈನಲ್ಲಿ ಗರಿಷ್ಠ ಮಟ್ಟಕ್ಕೆೇರಿತ್ತು. ಪ್ರತಿ ಕ್ವಿಂಟಾಲ್ ಅಡಿಕೆಯು 57 ಸಾವಿರ ಮುಟ್ಟಿತ್ತು. ಅಡಿಕೆ ಬೆಳೆಗಾರರು ಮತ್ತಷ್ಟು ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದ್ರೆ, ಎರಡು ತಿಂಗಳಿನಲ್ಲಿ ಬರೋಬ್ಬರಿ ಹತ್ತು ಸಾವಿರ ರೂಪಾಯಿಗೆ ಕುಸಿತ ಕಂಡಿದೆ. ಇದು ಅಡಿಕೆ ಬೆಳೆಗಾರರ ಆತಂಕಕ್ಕೂ ಕಾರಣವಾಗಿದೆ.

ಅಡಿಕೆ ಧಾರಣೆಯು ಕುಸಿತ ಕಾಣುತ್ತಿರುವುದು ರೈತರಿಗೆ ಆತಂಕ ತಂದಿದೆ. ಮತ್ತೆ ಅಡಿಕೆ (Areca nut) ರೇಟ್ ಹೆಚ್ಚಳವಾಗುತ್ತದೆಯೋ ಇಲ್ಲವೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಈಗಲೇ ಅಡಿಕೆಯನ್ನು ಮಾರುಕಟ್ಟೆಯಲ್ಲಿ ಬಿಡುವುದೋ ಅಥವಾ ಧಾರಣೆಯ ಏರುಪೇರು ನೋಡಿಕೊಂಡು ಬಿಡುವುದೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment