Home ದಾವಣಗೆರೆ ಹೆಂಡತಿ ಶಿರಚ್ಛೇದ ಮಾಡಿ ದೇವಸ್ಥಾನದ ಮುಂದೆ ತಲೆ ಇಟ್ಟ ಬಳಿಕ ತಂದೆಯನ್ನೂ ಹತ್ಯೆ ಮಾಡಿದ ಆರೋಪಿ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಹೆಂಡತಿ ಶಿರಚ್ಛೇದ ಮಾಡಿ ದೇವಸ್ಥಾನದ ಮುಂದೆ ತಲೆ ಇಟ್ಟ ಬಳಿಕ ತಂದೆಯನ್ನೂ ಹತ್ಯೆ ಮಾಡಿದ ಆರೋಪಿ!

Share
ಹೆಂಡತಿ
Share

ಬಾಕುರಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಬಾಕುರಾ ಜಿಲ್ಲೆಯಲ್ಲಿ ಅತ್ಯಂತ ಭೀಕರ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಹೆಂಡತಿ ಶಿರಚ್ಛೇದ ಮಾಡಿ, ತಂದೆಯನ್ನು ಹರಿತವಾದಾಯುಧದಿಂದ ಕೊಲೆಗೈದಿರುವ ದಾರುಣ ಘಟನೆ ವರದಿಯಾಗಿದೆ.

ಆರೋಪಿಯನ್ನು ಮಂಗಲ್ ಚೌಧರಿ ಎಂದು ಗುರುತಿಸಲಾಗಿದೆ. ಈತ ತನ್ನ 39 ವರ್ಷದ ಪತ್ನಿ ರೂಪಾ ಚೌಧರಿ ಅವರನ್ನು ಹತ್ಯೆ ಮಾಡಿ, ಮನೆಯೊಳಗಿದ್ದ ಪೂಜಾ ಸ್ಥಳದ ತ್ರಿಶೂಲದ ಮುಂದೆ ತುಂಡರಿಸಿದ ತಲೆಯನ್ನು ಇರಿಸಿದ್ದಾನೆ.

ಬಳಿಕ ತನ್ನ 60 ವರ್ಷದ ತಂದೆ ರಾಜೇಂದ್ರ ಚೌಧರಿ ಅವರನ್ನು ಮನೆಯಂಗಳದಲ್ಲೇ ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು, ಆರೋಪಿಯು ಕೈಯಲ್ಲಿ ಚಾಕುವಿನೊಂದಿಗೆ ಗ್ರಾಮದಲ್ಲಿ ಓಡಾಡಿದ್ದಾನೆ.

ಪೊಲೀಸ್ ತನಿಖೆ ಮತ್ತು ತಾಂತ್ರಿಕ ಆಚರಣೆಯ ಶಂಕೆ: ಮಾಹಿತಿ ತಿಳಿದ ಕೂಡಲೇ ಸೋನಮುಖಿ ಮತ್ತು ಕಂಸಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಇದು ಮಾಟ-ಮಂತ್ರ ಅಥವಾ ತಾಂತ್ರಿಕ ಆಚರಣೆಗಳಿಗೆ ಸಂಬಂಧಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ಪ್ರಕಾರ, ಆರೋಪಿ ಮನೆಯಲ್ಲಿ ಆಗಾಗ್ಗೆ ಪೂಜೆ-ಪುನಸ್ಕಾರಗಳನ್ನು ಮಾಡುತ್ತಿದ್ದನು. ಸದ್ಯ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *