Home ದಾವಣಗೆರೆ ಮಕ್ಕಳಿಗೆ ಇಂಟರ್ನೆಟ್ ಬಳಕೆಯು ಮೂಲಭೂತ ಹಕ್ಕು: ವಯಸ್ಸಿನ ಆಧಾರಿತ ನಿಷೇಧ ತಿರಸ್ಕರಿಸಿದ ಸುಪ್ರೀಂ ಕೋರ್ಟ್!
ದಾವಣಗೆರೆನವದೆಹಲಿಬೆಂಗಳೂರು

ಮಕ್ಕಳಿಗೆ ಇಂಟರ್ನೆಟ್ ಬಳಕೆಯು ಮೂಲಭೂತ ಹಕ್ಕು: ವಯಸ್ಸಿನ ಆಧಾರಿತ ನಿಷೇಧ ತಿರಸ್ಕರಿಸಿದ ಸುಪ್ರೀಂ ಕೋರ್ಟ್!

Share
ಸುಪ್ರೀಂ ಕೋರ್ಟ್
Share

ನವದೆಹಲಿ: ಮಕ್ಕಳಿಗೆ ಇಂಟರ್ನೆಟ್ ಬಳಕೆಯನ್ನು ವಯಸ್ಸಿನ ಆಧಾರದ ಮೇಲೆ ಸಂಪೂರ್ಣವಾಗಿ ನಿಷೇಧಿಸುವುದನ್ನು ಸುಪ್ರೀಂ ಕೋರ್ಟ್ ಬಲವಾಗಿ ತಿರಸ್ಕರಿಸಿದೆ. ಇಂಟರ್ನೆಟ್ ಸಂಪರ್ಕ ಮತ್ತು ಬಳಕೆ ಎಂಬುದು ಮಕ್ಕಳ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ಅವರ ಹಕ್ಕುಗಳನ್ನು ಕಸಿಯದೆ ಆನ್‌ಲೈನ್ ಲೈಂಗಿಕ ದೌರ್ಜನ್ಯಗಳಿಂದ ರಕ್ಷಿಸಲು ಕಟ್ಟುನಿಟ್ಟಿನ ವ್ಯವಸ್ಥೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಇಂಟರ್ನೆಟ್ ಬಳಕೆಯ ಸ್ವಾತಂತ್ರ್ಯ ಮತ್ತು ಮಕ್ಕಳ ಸುರಕ್ಷತೆ ಪರಸ್ಪರ ವಿರುದ್ಧವಲ್ಲ ಎಂದು ಅಭಿಪ್ರಾಯಪಟ್ಟಿರುವ ಪೀಠ, ಆನ್‌ಲೈನ್ ದೌರ್ಜನ್ಯ ತಡೆಯುವ ನೆಪದಲ್ಲಿ ಇಂಟರ್ನೆಟ್ ಪ್ರವೇಶ ಸಂಪೂರ್ಣವಾಗಿ ತಡೆಯುವುದು ಅಸಮಂಜಸ. ವಯಸ್ಸಿನ ಮಿತಿ ಅಥವಾ ನಿಷೇಧ ಹೇರಿದರೆ ಮಕ್ಕಳು ನಿಯಂತ್ರಣವಿಲ್ಲದ ಮತ್ತು ಹೆಚ್ಚು ಅಪಾಯಕಾರಿ ವೆಬ್‌ಸೈಟ್‌ಗಳತ್ತ ಮುಖ ಮಾಡಬಹುದು. ಅಲ್ಲದೆ, ಬೆದರಿಕೆಗೆ ಒಳಗಾದಾಗ ಶಿಕ್ಷೆಯ ಭಯದಿಂದ ಪೋಷಕರಿಗೆ ತಿಳಿಸಲು ಹಿಂಜರಿಯಬಹುದು ಎಂದು ಕೋರ್ಟ್ ಎಚ್ಚರಿಸಿದೆ.

ಮೂಲಭೂತ ಹಕ್ಕು: ಇಂಟರ್ನೆಟ್ ಬಳಕೆಯು ಮಕ್ಕಳ ಮೂಲಭೂತ ಹಕ್ಕಾಗಿದ್ದು, ವಯಸ್ಸಿನ ನಿಷೇಧ ಅಸಮಂಜಸ.

ರಾಷ್ಟ್ರೀಯ ಡೇಟಾಬೇಸ್ ಸೃಷ್ಟಿ: ಸಿಎಸ್‌ಎಎಮ್ (CSAM) ವಿಷಯಗಳನ್ನು ತಕ್ಷಣ ಗುರುತಿಸಿ ತೆಗೆದುಹಾಕಲು ಹ್ಯಾಶ್ ಮತ್ತು ಯುಆರ್‌ಎಲ್ (URL) ಗಳ ರಾಷ್ಟ್ರೀಯ ಡೇಟಾಬೇಸ್ ಮಾರ್ಗಸೂಚಿ ರೂಪಿಸಲು ಸೂಚನೆ.

ಕ್ರಾಸ್-ಪ್ಲಾಟ್‌ಫಾರ್ಮ್ ಕಾರ್ಯಾಚರಣೆ: ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಪತ್ತೆಯಾದ ಅಪರಾಧ ವಿಷಯವನ್ನು ಇತರ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲೂ ಸ್ವಯಂಚಾಲಿತವಾಗಿ ತೆಗೆದುಹಾಕುವ ಸಮಗ್ರ ವ್ಯವಸ್ಥೆಗೆ ಸೂಚನೆ.

ಪ್ರಾಥಮಿಕ ಶಾಲೆಯಿಂದಲೇ ಜಾಗೃತಿ: ಆನ್‌ಲೈನ್ ಅಪಾಯಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಲು ಪ್ರಾಥಮಿಕ ಶಾಲಾ ಹಂತದಿಂದಲೇ ಜಾಗೃತಿ ಹಾಗೂ ಸಂವೇದನಾ ಕಾರ್ಯಕ್ರಮಗಳ ಅಗತ್ಯತೆ.

ಇದೇ ವೇಳೆ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳು (CSAM) ಹರಡುವುದನ್ನು ತಡೆಯಲು ನಿಯಂತ್ರಣ ಪ್ರಾಧಿಕಾರಗಳು ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ವಿಳಂಬ ಧೋರಣೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತಖ್ತೀಸ್ ಮಾಡಿದೆ. ತಪ್ಪಾದ ದೂರುಗಳಿಂದ ನೈಜ ವಿಷಯಗಳು ಡಿಲೀಟ್ ಆಗದಂತೆ ದೂರು ಪರಿಹಾರ ವ್ಯವಸ್ಥೆ (Grievance Redressal Mechanism) ಸೇರಿ ಅಗತ್ಯ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳಲು ಪೀಠ ನಿರ್ದೇಶಿಸಿದೆ.

Share

Leave a comment

Leave a Reply

Your email address will not be published. Required fields are marked *