ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Job fair: ನಿರುದ್ಯೋಗಿ ಯುವಕ-ಯುವತಿಯರಿಗೆ “ಬೃಹತ್ ಉದ್ಯೋಗ ಮೇಳ…? ಎಲ್ಲಿ ನಡೆಯುತ್ತೆ…?

On: September 22, 2023 1:37 PM
Follow Us:
UDYOGA MELA IN DAVANAGERE
---Advertisement---

SUDDIKSHANA KANNADA NEWS/ DAVANAGERE/ DATE:22-09-2023

ದಾವಣಗೆರೆ: ವಿಕಲಚೇತನರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ, ಭಾರತ ಸರ್ಕಾರ, ಉದ್ಯೋಗ ಮಹಾ ನಿರ್ದೇಶನಾಲಯ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಪೀಣ್ಯ, ಬೆಂಗಳೂರು, ಅಮೇರಿಕಾ ಇಂಡಿಯಾ ಫೌಂಡೇಷನ್ ಮತ್ತು ಸರಕಾರಿ ಗಿರಿಧರ ರಾಮನಾರಾಯಣ ಇನ್‍ಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಪ್ರಾಕ್ಟಿಸ್, ಬೆಂಗಳೂರು ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ಸರಕಾರಿ ಗಿರಿಧರ ರಾಮನಾರಾಯಣ ಇನಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಪ್ರಾಕ್ಟಿಸ್, ಕೆ.ಆರ್. ಸರ್ಕಲ್, ಬೆಂಗಳೂರು ಈ ಆವರಣದಲ್ಲಿ ವಿಕಲಚೇತನ ನಿರುದ್ಯೋಗಿ ಯುವಕ-ಯುವತಿಯರಿಗೆ “ಬೃಹತ್ ಉದ್ಯೋಗ ಮೇಳ (Job fair) -2023 ಆಯೋಜಿಸಲಾಗಿದೆ.

Read Also This Story: 

ಭದ್ರಾಡ್ಯಾಂ (Bhadra Dam) ನೀರು ಹರಿಸುವಿಕೆಗೆ ಆಗ್ರಹಿಸಿ ಹೆದ್ದಾರಿ ತಡೆ ವೇಳೆ ಸಂಧಾನ, ಸಂಜೆ ಸಭೆಯಲ್ಲಿ ರೈತ ಮುಖಂಡರ ಅಸಮಾಧಾನ… ಡಿಸಿ, ಎಸ್ಪಿ ಯತ್ನ ವಿಫಲ.. ಬೆಣ್ಣೆನಗರಿಯಲ್ಲಿ ಮತ್ತೆ ಶುರುವಾಗಲಿದೆ ಹೋರಾಟ…!

ದಾವಣಗೆರೆ ಜಿಲ್ಲೆಯ ಅರ್ಹ ನಿರುದ್ಯೋಗ ವಿಕಲಚೇತನರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ. ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

ಉದ್ಯಮಶೀಲತಾ ತರಬೇತಿ ಶಿಬಿರ:

ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 26 ರಂದು ನಗರದ ದೇವರಾಜ ಅರಸು ಬಡಾವಣೆ ಎ. ಬ್ಲಾಕ್‍ನ #297 ಸ್ಪೂರ್ತಿ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯಲ್ಲಿ ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಬೆಂಗಳೂರು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಪ್ರಾಯೋಜಕತ್ವದಲ್ಲಿ  ಸಿಡಾಕ್ (ಕರ್ನಾಟಕ ಉದ್ಯಮಶೀಲತಾ ಕೇಂದ್ರ, ಧಾರವಾಡ) ಸಂಸ್ಥೆಯಿಂದ ಶಿಬಿರವನ್ನು ಆಯೋಜಿಸಲಾಗಿದ್ದು, ಸ್ವಂತ ಉದ್ಯೋಗವನ್ನು ಸ್ಥಾಪಿಸಲು ಇಚ್ಚಿಸುವ ಆಸಕ್ತರಿಗೆ ಪ್ರೇರಣೆ, ಸರ್ಕಾರ ಮತ್ತು ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು, ಪ್ರೋತ್ಸಾಹ ಹಾಗೂ ಮುಂದೆ ಕೈಗೊಳ್ಳಲಾಗುವ ಉದ್ಯಮಶೀಲತಾ ತರಬೇತಿ ಕುರಿತು ಶಿಬಿರದಲ್ಲಿ ಮಾಹಿತಿ ನೀಡಲಾಗುವುದು.

ಭಾಗವಹಿಸಲು ಇಚ್ಚಿಸುವವರು 18 ವರ್ಷ ಮೇಲ್ಪಟ್ಟವರಾಗಿದ್ದು, ಓದುವ ಮತ್ತು ಬರೆಯುವ ಸಾಮಥ್ರ್ಯವುಳ್ಳವರಾಗಿರಬೇಕು. ಆಸಕ್ತರು 2 ಪಾಸ್ ಪೋರ್ಟ್ ಅಳತೆಯ ಫೋಟೋ ಹಾಗೂ ಆಧಾರ್ ಕಾರ್ಡ್‍ದೊಂದಿಗೆ ಶಿಬಿರಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಸಿಡಾಕ್, ಪ್ಲಾಟ್ ನಂ.76ಎ-(ಪಿ1), ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ ರಸ್ತೆ, ದಾವಣಗೆರೆ, ದೂ.ಸಂ. ಹಾಗೂ ತರಬೇತುದಾರ ಬಸವರಾಜ ಜಿ.ಬಿ ಮೊ ನಂ. 9164742033 ಗೆ ಸಂಪರ್ಕಿಸಲು ಸಿಡಾಕ್‍ನ ಜಿಲ್ಲಾ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment