Home ಕ್ರೈಂ ನ್ಯೂಸ್ ದಾಂಡಿಯಾ, ಗರ್ಬಾ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಬೌನ್ಸರ್‌ಗಳಿಗೆ ಬಹಿಷ್ಕಾರ?: ರಾಜಕೀಯ ಸಂಘರ್ಷ ಮತ್ತು ಭದ್ರತಾ ಸಿಬ್ಬಂದಿಗಳ ಆಕ್ರೋಶ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ದಾಂಡಿಯಾ, ಗರ್ಬಾ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಬೌನ್ಸರ್‌ಗಳಿಗೆ ಬಹಿಷ್ಕಾರ?: ರಾಜಕೀಯ ಸಂಘರ್ಷ ಮತ್ತು ಭದ್ರತಾ ಸಿಬ್ಬಂದಿಗಳ ಆಕ್ರೋಶ!

Share
ದಾಂಡಿಯಾ
Share

ಹೈದರಾಬಾದ್: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಆಯೋಜಿಸಲಾಗುತ್ತಿರುವ ದಾಂಡಿಯಾ ಮತ್ತು ಗರ್ಬಾ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಬೌನ್ಸರ್‌ಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಸಂಘಟಕರು ನಿರಾಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯು ರಾಜ್ಯದಲ್ಲಿ ದೊಡ್ಡ ರಾಜಕೀಯ ಮತ್ತು ಸಾಮಾಜಿಕ ವಿವಾದಕ್ಕೆ ಕಾರಣವಾಗಿದ್ದು, ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಹಾಗೂ ಶಾಸಕ ಟಿ. ರಾಜಾಸಿಂಗ್ ನಡುವೆ ವಾಗ್ವಾದಕ್ಕೆ ಹಾದಿಮಾಡಿಕೊಟ್ಟಿದೆ.

ಮತ್ತೊಂದೆಡೆ, ಖಾಸಗಿ ಭದ್ರತಾ ಸಂಸ್ಥೆಗಳು ಮತ್ತು ಹಿಂದೂ-ಮುಸ್ಲಿಂ ಬೌನ್ಸರ್‌ಗಳ ಜಂಟಿ ಒಕ್ಕೂಟವು ಈ ತಾರತಮ್ಯವನ್ನು ತೀವ್ರವಾಗಿ ಖಂಡಿಸಿದೆ. ಹೈದರಾಬಾದ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಒಕ್ಕೂಟದ ಪ್ರತಿನಿಧಿ ಮೊಹಮ್ಮದ್ ಫಿರೋಜ್ (ಫಜಲ್), “ನಾವು ಧರ್ಮಕ್ಕಾಗಿ ಹೋರಾಡುತ್ತಿಲ್ಲ, ಜೀವನೋಪಾಯಕ್ಕಾಗಿ ಹೋರಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕಟಿತ ಆರೋಪಗಳ ಆಧಾರದ ಮೇಲೆ ಇಡೀ ಸಮುದಾಯಕ್ಕೆ ಉದ್ಯೋಗ ನಿರಾಕರಿಸುವುದು ಸರಿಯಲ್ಲ ಹಾಗೂ ಪ್ರತಿಯೊಬ್ಬರಿಗೂ ಸಮಾನ ಉದ್ಯೋಗಾವಕಾಶ ಸಿಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಉದ್ಯೋಗ ಹಕ್ಕು: ಧರ್ಮ ಅಥವಾ ಹೆಸರಿನ ಆಧಾರದ ಮೇಲೆ ಯಾರಿಗೂ ಉದ್ಯೋಗ ನಿರಾಕರಿಸಬಾರದು; ಅನುಭವ ಮತ್ತು ವೃತ್ತಿಪರತೆಯ ಆಧಾರದ ಮೇಲೆ ನೇಮಕಾತಿ ನಡೆಯಬೇಕು.

ಆರೋಪಗಳಿಗೆ ತರಸ್ಕರಿಸಿಕೆ: ಮುಸ್ಲಿಂ ಭದ್ರತಾ ಸಿಬ್ಬಂದಿ ಮೇಲಿನ ‘ಲವ್ ಜಿಹಾದ್’ ಆರೋಪಗಳನ್ನು ಒಕ್ಕೂಟ ತಳ್ಳಿಹಾಕಿದ್ದು, ತಮ್ಮ ಕೆಲಸ ಕೇವಲ ಭದ್ರತೆ ಮತ್ತು ಶಾಂತಿ ಪಾಲನೆಗೆ ಸೀಮಿತ ಎಂದು ಸ್ಪಷ್ಟಪಡಿಸಿದೆ.

ರಾಜಕೀಯ ಸಂಘರ್ಷ: ಮುಸ್ಲಿಂ ಬೌನ್ಸರ್‌ಗಳ ಬಹಿಷ್ಕಾರವನ್ನು ‘ವಿಷಕಾರಿ ತಾರತಮ್ಯ’ ಎಂದು ಒವೈಸಿ ಬಣ್ಣಿಸಿದ್ದರೆ, ಹಬ್ಬಗಳ ಸಮಯದಲ್ಲಿ ಹಿಂದೂ ಬೌನ್ಸರ್‌ಗಳನ್ನು ಮಾತ್ರ ನಿಯೋಜಿಸುವುದನ್ನು ಸಮರ್ಥಿಸಿಕೊಂಡ ರಾಜಾಸಿಂಗ್, ಇತರರನ್ನು ನೇಮಿಸಿದರೆ ಕಾರ್ಯಕ್ರಮ ತಡೆಯುವುದಾಗಿ ಎಚ್ಚರಿಸಿದ್ದಾರೆ.

ಸಾಮರಸ್ಯದಿಂದ ಕೆಲಸ ಮಾಡುತ್ತಿರುವ ವಿವಿಧ ಧರ್ಮಗಳ ಭದ್ರತಾ ಸಿಬ್ಬಂದಿಯ ಉದ್ಯೋಗ ಭದ್ರತೆಗೆ ಸರ್ಕಾರ ಹಾಗೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟ ಮನವಿ ಮಾಡಿದೆ.

Share

Leave a comment

Leave a Reply

Your email address will not be published. Required fields are marked *

Related Articles