Home ಕ್ರೈಂ ನ್ಯೂಸ್ ಸ್ಕೂಟಿಗೆ ಟ್ರಕ್ ಡಿಕ್ಕಿ: ಬಂಪರ್ ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡ ಗಟ್ಟಿಗಿತ್ತಿ ಯುವತಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸ್ಕೂಟಿಗೆ ಟ್ರಕ್ ಡಿಕ್ಕಿ: ಬಂಪರ್ ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡ ಗಟ್ಟಿಗಿತ್ತಿ ಯುವತಿ!

Share
ಯುವತಿ
Share

ಅಹಿಲ್ಯನಗರ (ಮಹಾರಾಷ್ಟ್ರ): ಮಹಾರಾಷ್ಟ್ರದ ಅಹಿಲ್ಯನಗರದಲ್ಲಿ ವೇಗವಾಗಿ ಬಂದ ಮರಳು ತುಂಬಿದ ಟ್ರಕ್ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಯುವತಿಯೊಬ್ಬಳು ಟ್ರಕ್‌ನ ಬಂಪರ್ ಅನ್ನು ಗಟ್ಟಿಯಾಗಿ ಹಿಡಿದು ಪ್ರಾಣಾಪಾಯದಿಂದ ಪಾರಾಗಿರುವ ರೋಚಕ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಲಾಪುರ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಟ್ರಕ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ 2 ನಿಮಿಷಗಳ ವೀಡಿಯೊದಲ್ಲಿ, ಮರಳು ತುಂಬಿದ ಟ್ರಕ್ ರಸ್ತೆಯಲ್ಲಿ ವೇಗವಾಗಿ ಬಂದು ಯಾವುದೇ ಸೂಚನೆ ನೀಡದೆ ಅಥವಾ ನಿಧಾನಗೊಳಿಸದೆ ಹಠಾತ್ ಬಲ ತಿರುವು ಪಡೆದುಕೊಂಡಿದೆ. ಈ ವೇಳೆ ಎದುರಿಗೆ ಬರುತ್ತಿದ್ದ ಸ್ಕೂಟಿಗೆ ಟ್ರಕ್ ನೇರವಾಗಿ ಡಿಕ್ಕಿ ಹೊಡೆದಿದೆ. ಟ್ರಕ್ ಬಡಿದ ರಭಸಕ್ಕೆ ಸ್ಕೂಟಿ ಸವಾರ ಯುವತಿ ಕೆಳಗೆ ಬಿದ್ದು ನಜ್ಜುಗುಜ್ಜಾಗುವುದನ್ನು ತಪ್ಪಿಸಲು ತಕ್ಷಣವೇ ಎಚ್ಚೆತ್ತುಕೊಂಡು ಟ್ರಕ್‌ನ ಬಂಪರ್ ಅನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಾಳೆ. ಇದರಿಂದ ಅವಳ ಪ್ರಾಣ ಉಳಿದಿದೆ. ನಂತರ ಆಕೆ ಎದ್ದು ನಿಂತು ಸ್ಥಳದಿಂದ ಸುರಕ್ಷಿತವಾಗಿ ನಡೆದಿದ್ದಾಳೆ.

ಚಾಲಕ ಪರಾರಿ: ಅಪಘಾತದ ನಂತರ ಸ್ಥಳದಲ್ಲಿ ಜನ ಸೇರುತ್ತಿದ್ದಂತೆ ಟ್ರಕ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ.

ನಂಬರ್ ಪ್ಲೇಟ್ ಇಲ್ಲದ ಟ್ರಕ್: ಅಪಘಾತಕ್ಕೆ ಕಾರಣವಾದ ಟ್ರಕ್ ಯಾವುದೇ ನಂಬರ್ ಪ್ಲೇಟ್ ಹೊಂದಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮರಳು ಮಾಫಿಯಾ ಹಾವಳಿ: ಈ ಟ್ರಕ್ ವೈಜಾಪುರದ ಮಹಳಗಾಂವ್ ಮರಳು ಹರಾಜಿಗೆ ಸಂಬಂಧಿಸಿದ್ದು ಎನ್ನಲಾಗಿದ್ದು, ಪ್ರದೇಶದಲ್ಲಿ ಪರವಾನಗಿ ಇಲ್ಲದೆ ಓಡಾಡುವ ಟ್ರಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಪಘಾತದ ಬಳಿಕ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಟ್ರಕ್ ಚಾಲಕನ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದ್ದು, ಕೂಡಲೇ ಪೊಲೀಸರು ಅಕ್ರಮ ಟ್ರಕ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *