Home ದಾವಣಗೆರೆ ಕಂಡಕ್ಟರ್ ಕೆಲಸ ಜೀವನದಲ್ಲಿ ಮರೆಯಲು ಅಸಾಧ್ಯ, ಸೂಪರ್ ಸ್ಟಾರ್ ಸೇರಿ ಬೇರೆ ಬೇರೆ ಹೆಸರಲ್ಲಿ ಕೊಂಡಾಡುವುದಕ್ಕಿಂತ ಆ ಕೆಲಸವೇ ಶ್ರೇಷ್ಠ: ರಜನೀಕಾಂತ್ ಸಿಂಪ್ಲಿಸಿಟಿ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಕಂಡಕ್ಟರ್ ಕೆಲಸ ಜೀವನದಲ್ಲಿ ಮರೆಯಲು ಅಸಾಧ್ಯ, ಸೂಪರ್ ಸ್ಟಾರ್ ಸೇರಿ ಬೇರೆ ಬೇರೆ ಹೆಸರಲ್ಲಿ ಕೊಂಡಾಡುವುದಕ್ಕಿಂತ ಆ ಕೆಲಸವೇ ಶ್ರೇಷ್ಠ: ರಜನೀಕಾಂತ್ ಸಿಂಪ್ಲಿಸಿಟಿ!

Share
ರಜನೀಕಾಂತ್
Share

ಬೆಂಗಳೂರು / ಚೆನ್ನೈ: ನಾನು ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಆಗಿದ್ದ ಜೀವನವೇ ಸ್ಮರಣೀಯ ಕ್ಷಣ. ಈಗ ಎಲ್ಲರೂ ಸೂಪರ್ ಸ್ಟಾರ್, ರಜನಿ, ರಜನೀಕಾಂತ್ ಸೇರಿದಂತೆ ಹಲವು ರೀತಿಯ ಬಿರುದಾಂಕಿತಗಳಿಂದ ಕರೆಯುತ್ತಾರೆ, ಗುರುತಿಸುತ್ತಾರೆ. ನನಗೆ ನಟನೆ ಎಂದರೆ ಪಂಚಪ್ರಾಣ. ಆದರೆ ನಾನು ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುವಾಗ ಸಿಗುತ್ತಿದ್ದ ಗೌರವ ಅವಿಸ್ಮರಣೀಯ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ.

ಮತ್ತೆ ರಜನೀಕಾಂತ್ ಅವರ ಸಿಂಪ್ಲಿಸಿಟಿ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದೆ.

ಜೈಲರ್ 2 ಸಿನಿಮಾದ ಪ್ರಮೋಷನ್ ಪ್ರೊಗ್ರಾಂನಲ್ಲಿ ಮಾತನಾಡಿದ ರಜನೀಕಾಂತ್ ಅವರು, ನಾನು ಈಗಲೂ ಬೆಂಗಳೂರಿಗೆ ಹೋಗುತ್ತೇನೆ. ಒಮ್ಮೊಮ್ಮೆ ಬಸ್ ಅನ್ನು ನೋಡುತ್ತೇನೆ. ಆಗ ನನ್ನ ಹಳೆಯ ದಿನಗಳು ನೆನಪಾಗುತ್ತವೆ. ಆ ದಿನಗಳನ್ನು ಮರೆತಿಲ್ಲ, ಇಂದಿನ ದಿನಗಳನ್ನೂ ಮರೆಯಲ್ಲ. ಆ ದಿನಗಳೇ ನನಗೆ ಹೆಚ್ಚು ಖುಷಿ ಕೊಡುತ್ತದೆ ಎಂದು ಹೇಳಿದ್ದಾರೆ.

ಸಿನಿಮಾ ರಂಗದಲ್ಲಿ ತಮ್ಮ ವಿಭಿನ್ನ ಹಾವಭಾವ ಹಾಗೂ ತೀವ್ರವಾದ ನಟನಾ ಶೈಲಿಯಿಂದಲೇ ಪ್ರತ್ಯಕ್ಷವಾಗಿ ಗುರುತಿಸಿಕೊಂಡಿರುವ ಜನಪ್ರಿಯ ನಟ ಎಸ್‌ಜೆ ಸೂರ್ಯ ಅವರ ನಟನಾ ಸಮರ್ಪಣೆ ಮತ್ತು ಪರಿಪೂರ್ಣತೆಯ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರಿಂದ ‘ಓಕೆ’ (OK) ಕಟ್ ಪಡೆಯುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿದ್ದು, ಅಂತಹದ್ದರಲ್ಲಿ ಎಸ್‌ಜೆ ಸೂರ್ಯ ತಮ್ಮ ಪಾತ್ರಕ್ಕೆ ಜೀವತುಂಬಲು ತೋರಿದ ಪರಿಶ್ರಮ ಎಲ್ಲರನ್ನೂ ನಿಬ್ಬೆರಗಾಗಿಸಿದೆ ಎಂದು ರಜನೀಕಾಂತ್ ಹೇಳಿದರು.

ನಿರ್ದೇಶಕರೇ ದೃಶ್ಯಕ್ಕೆ ಒಪ್ಪಿಗೆ ಸೂಚಿಸಿದರ ಸಹ, ಎಸ್‌ಜೆ ಸೂರ್ಯ ಅಲ್ಲಿಗೆ ಸುಮ್ಮನಾಗದೆ ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿಕೊಳ್ಳಲು ಮತ್ತೊಂದು ಟೇಕ್ ಕೇಳುತ್ತಿದ್ದರು ಎಂದು ಹೇಳಿದರು. 75 ವರ್ಷ ವಯಸ್ಸಿನ ಹಿರಿಯ ಕಲಾವಿದರಾಗಿಯೂ ತಾವೆಲ್ಲರೂ ದೃಶ್ಯಕ್ಕಾಗಿ ನಿಂತುಕೊಳ್ಳಬೇಕಾಯಿತು ಮತ್ತು ಎಸ್‌ಜೆ ಸೂರ್ಯ ಅವರದ್ದು ಅಸಾಧಾರಣ ಸಮರ್ಪಣಾ ಮನೋಭಾವ ಎಂದು ಅವರು ಕೊಂಡಾಡಿದ್ದಾರೆ.

ಕಠಿಣ ಪರಿಶ್ರಮ:

ನಿರ್ದೇಶಕ ನೆಲ್ಸನ್ ಅವರ ತೃಪ್ತಿಗೂ ಮೀರಿದ ಪರಿಪೂರ್ಣತೆಗಾಗಿ ಎಸ್‌ಜೆ ಸೂರ್ಯ ಸತತವಾಗಿ ಶ್ರಮಿಸಿದ್ದಾರೆ.

ನಟನಾ ಶೈಲಿ:

ಸಣ್ಣಪುಟ್ಟ ದೋಷಗಳನ್ನೂ ಬಿಡದೆ ತಿದ್ದಿಕೊಳ್ಳುವ ಸೂರ್ಯ ಅವರ ಬದ್ಧತೆ ಇಡೀ ಚಿತ್ರತಂಡಕ್ಕೆ ಸ್ಫೂರ್ತಿಯಾಗಿದೆ.

ಹಿರಿಯ ಕಲಾವಿದರ ಪ್ರಶಂಸೆ:

75 ವರ್ಷದ ಹಿರಿಯ ನಟರು ಸೇರಿದಂತೆ ರಮ್ಯಾಕೃಷ್ಣನ್ ಮತ್ತು ಇಡೀ ಸೆಟ್ ದೃಶ್ಯದ ಚಿತ್ರೀಕರಣಕ್ಕಾಗಿ ನಿಂತು ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದರೂ, ಸೂರ್ಯ ಅವರ ಸಮರ್ಪಣೆ ಅದ್ಭುತವಾಗಿತ್ತು.

ಕಲಾವಿದರೊಬ್ಬರು ವೃತ್ತಿಪರತೆಗೆ ನೀಡುವ ಗೌರವ ಮತ್ತು ಪಾತ್ರದ ಮೇಲೆ ಇಡುವ ಶ್ರದ್ಧೆ ಎಂತಹದ್ದು ಎಂಬುದಕ್ಕೆ ಎಸ್‌ಜೆ ಸೂರ್ಯ ಅವರ ಈ ನಟನಾ ಅನುಭವವು ಸಾಕ್ಷಿಯಾಗಿದೆ. ತೆರೆಮೇಲೆ ಅವರ ವಿಭಿನ್ನ ಅಭಿನಯಕ್ಕೆ ಮತ್ತೊಮ್ಮೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಕುರಿತ ಇತ್ತೀಚಿನ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Share

Leave a comment

Leave a Reply

Your email address will not be published. Required fields are marked *