ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಹಾಗೂ ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಮಾಜಿ ಪತ್ನಿ ಐಶ್ವರ್ಯಾ ರೈ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರಿಯಾಲಿಟಿ ಶೋ ‘ರೈಸ್ ಅಂಡ್ ಫಾಲ್ 2’ (Rise & Fall 2) ಕಾರ್ಯಕ್ರಮದಲ್ಲಿ ಸ್ಪರ್ಧಿ ನಿಹಾರಿಕಾ ತಿವಾರಿ ಅವರೊಂದಿಗೆ ಮಾತನಾಡಿದ ಅವರು, ತಮ್ಮ ದಾಂಪತ್ಯ ಜೀವನದ ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
ಕೋರ್ಟ್‌ಗೆ ವೀಡಿಯೊ ಸಾಕ್ಷಿ ಸಲ್ಲಿಕೆ:
ಮನೆಯಲ್ಲಿ ಜಗಳ ನಡೆಯುವಾಗಲೆಲ್ಲಾ ಐಶ್ವರ್ಯಾಗೆ ತಿಳಿಯದಂತೆ ವೀಡಿಯೊಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೆ. ವಿಚ್ಛೇದನದ ವೇಳೆ ಅದೇ ನನಗೆ ಪ್ರಮುಖ ಸಾಕ್ಷಿಯಾಯಿತು ಎಂದು ಅವರು ಹೇಳಿದ್ದಾರೆ. ಮದುವೆ ಮುರಿದುಬಿದ್ದರೆ ಯಾವಾಗಲೂ ಪುರುಷರೇ ತಪ್ಪಿತಸ್ಥರಲ್ಲ, ಮಹಿಳೆಯರೂ ತಪ್ಪಿತಸ್ಥರಾಗಿರುತ್ತಾರೆ ಎಂದು ಹೇಳಿರುವ ತೇಜ್ ಪ್ರತಾಪ್, ಆ ದಿನಗಳನ್ನು ನೆನಪಿಸಿಕೊಂಡರೆ ಇಂದಿಗೂ ಮಾನಸಿಕ ಆಘಾತವಾಗುತ್ತದೆ ಎಂದಿದ್ದಾರೆ.
- Aishwarya Rai
- Aishwarya Rai Chandrika Roy
- Bihar News
- Lalu Prasad Yadav son
- Niharika Tiwari
- Rise and Fall 2 video
- Rise and Fall Season 2
- Tej Pratap allegations
- Tej Pratap divorce news
- Tej Pratap Yadav
- Tej Pratap Yadav viral clip
- ಐಶ್ವರ್ಯಾ ರೈ
- ತೇಜ್ ಪ್ರತಾಪ್ ಡಿವೋರ್ಸ್
- ತೇಜ್ ಪ್ರತಾಪ್ ಯಾದವ್
- ತೇಜ್ ಪ್ರತಾಪ್ ಯಾದವ್ ಆರೋಪ
- ಬಿಹಾರ ಮಾಜಿ ಸಚಿವ
- ಬಿಹಾರ ರಾಜಕೀಯ
- ಮನರಂಜನೆ ಸುದ್ದಿ
- ರೈಸ್ ಅಂಡ್ ಫಾಲ್ 2
- ಲಾಲೂ ಪ್ರಸಾದ್ ಯಾದವ್
- ವೈರಲ್ ವೀಡಿಯೊ





Leave a comment