SUDDIKSHANA KANNADA NEWS/ DAVANAGERE/ DATE:19-09-2023
ದಾವಣಗೆರೆ: ಭದ್ರಾ ಡ್ಯಾಂ(Bhadra Dam)ನಿಂದ ಬಲದಂಡೆ ನಾಲೆಗೆ ನೀರು ಹರಿಸುವ ಸಂಬಂಧ ಬೆಂಗಳೂರಿನಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಈಗಾಗಲೇ ನೀರು ಬಂದ್ ಮಾಡಲಾಗಿದ್ದು. ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬಾರದೇ ಮುಂದೂಡಲಾಗಿದೆ.
ದೆಹಲಿಗೆ ಡಿ. ಕೆ. ಶಿವಕುಮಾರ್ ಅವರು ಕಾವೇರಿ ನದಿ ನೀರು ಹಂಚಿಕೆ ಸಂಬಂಧ ತುರ್ತು ತೆರಳಬೇಕಿದ್ದ ಕಾರಣ ಸಭೆಯು ದೀರ್ಘವಾಗಿ ನಡೆಯಲಿಲ್ಲ. ಶಿವಮೊಗ್ಗ, ಚನ್ನಗಿರಿ, ದಾವಣಗೆರೆ ಸೇರಿದಂತೆ ಭದ್ರಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸುದ್ದಿಯನ್ನೂ ಓದಿ:
ಭಾರತದಲ್ಲಿ ಏಳು ವರ್ಷಗಳ ಸುದೀರ್ಘ ಅವಧಿ ನಡೆಯುತ್ತದೆ MotoGP ’07 ರೇಸ್: 7 ವರ್ಷಗಳ ಒಪ್ಪಂದಕ್ಕೆ ಸಹಿ, ಕ್ರಿಕೆಟ್ ಗೆ ಠಕ್ಕರ್ ಕೊಡುತ್ತಾ ಬೈಕ್ ರೇಸ್…?
ಮಾತ್ರವಲ್ಲ, ಈ ಸಭೆಯ ಮೇಲೆ ಚಿತ್ತ ನೆಟ್ಟಿತ್ತು. ಈಗಾಗಲೇ ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ನಿಲ್ಲಿಸಲಾಗಿತ್ತು. ಹೆಚ್ಚಾಗಿ ನೆಚ್ಚಿಕೊಂಡಿರುವ ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ರೊಚ್ಚಿಗೆದ್ದಿದ್ದಾರೆ. ಮಾತ್ರವಲ್ಲ, ಇಂದೂ ಪ್ರತಿಭಟನೆಯನ್ನೂ ನಡೆಸಿದರು.
ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಕೂಡಲೇ ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ಹರಿಸಬೇಕು. ಈಗಾಗಲೇ ಭತ್ತ ಬೆಳೆದಿರುವ ರೈತರು ಕಂಗಾಲಾಗಿದ್ದಾರೆ. ಸೋಮವಾರ ರಾತ್ರಿಯಿಂದ ನಾಲೆಯಲ್ಲಿ ನೀರು
ಬಂದ್ ಮಾಡಲಾಗಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಡಿ. ಕೆ. ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಜೊತೆ ಮಾತುಕತೆ ನಡೆಸಿದ್ದರು. ಜೊತೆಗೆ ನೀರಾವರಿ ಇಲಾಖೆಯ ಎಂ.ಡಿ. ಜೊತೆಯೂ ಚರ್ಚೆ ನಡೆಸಿ ನೀರು ಹರಿಸುವಂತೆ ಮನವಿ ಮಾಡಿದ್ದರು. ಮಲ್ಲಿಕಾರ್ಜುನ್ ಅವರು ಭಾನುವಾರ ಮನವಿ ಮಾಡಿದ ಕಾರಣ ನೀರು ಹರಿಸಲಾಗಿತ್ತು.
ಆದ್ರೆ, ಶಿವಮೊಗ್ಗ, ಭದ್ರಾವತಿ ಭಾಗದಲ್ಲಿ ರೈತರ ಹೋರಾಟ ಜೋರಾದ ಕಾರಣ ನೀರು ಸ್ಥಗಿತಗೊಳಿಸಲಾಗಿತ್ತು. ಮಳೆ ಬಾರದ ಕಾರಣ ಭದ್ರಾ ಡ್ಯಾಂ (Bhadra Dam) ನೀರು ದಿನೇ ದಿನೇ ಕಡಿಮೆಯಾಗುತ್ತಿದೆ. ಸಂಗ್ರಹವಾಗುತ್ತಿದ್ದ ನೀರು ಕುಸಿತ ಕಾಣುತ್ತಿದೆ. ಆನ್ ಅಂಡ್ ಆಫ್ ಬೇಡ, ನೀರು ಹರಿಸುವಂತೆ ದಾವಣಗೆರೆ ಭಾಗದ ರೈತರು ಹೋರಾಟ ಶುರು ಮಾಡಿದ್ದರು. ಆದ್ರೆ, ಮತ್ತೆ ನೀರು ನಿಲುಗಡೆ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ರೈತ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸಭೆ:
ಭದ್ರಾ ಜಲಾಶಯ(Bhadra Dam)ದಿಂದ ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ಇಂದು ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಮತ್ತು ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರ ಗೃಹ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಈ ವೇಳೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಕೆ. ಎಸ್. ಬಸವಂತಪ್ಪ, ಶಿವಗಂಗಾ ಬಸವರಾಜ್, ಬಿ. ಪಿ. ಹರೀಶ್, ಶಾಂತನಗೌಡರು, ನೀರಾವರಿ ನಿಗಮ ವ್ವವಸ್ಥಾಪಕ ನಿರ್ದೇಶಕರು ಪಾಲ್ಗೊಂಡಿದ್ದರು.