Home ಕ್ರೈಂ ನ್ಯೂಸ್ ಟಿವಿ ಜಗಳಕ್ಕೆ ಬ್ಯಾಟ್‌ನಿಂದ ಹೊಡೆದು 17 ವರ್ಷದ ಮಗಳನ್ನ ಕೊಂದ ಶಿಕ್ಷಕ ತಂದೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಟಿವಿ ಜಗಳಕ್ಕೆ ಬ್ಯಾಟ್‌ನಿಂದ ಹೊಡೆದು 17 ವರ್ಷದ ಮಗಳನ್ನ ಕೊಂದ ಶಿಕ್ಷಕ ತಂದೆ!

Share
ಬ್ಯಾಟ್‌
Share

ಸತಾರಾ (ಮಹಾರಾಷ್ಟ್ರ): ಟಿವಿ ನೋಡುವ ವಿಚಾರವಾಗಿ ಮನೆಯಲ್ಲಿ ನಡೆದ ಸಣ್ಣ ಜಗಳ ಭೀಕರ ಹತ್ಯೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ. 17 ವರ್ಷದ ಮಗಳನ್ನು ಆಕೆಯ ತಂದೆಯೇ ಕ್ರಿಕೆಟ್ ಬ್ಯಾಟ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

ಮೃತರನ್ನು ಆರ್ಯ ಕದಮ್ (17) ಎಂದು ಗುರುತಿಸಲಾಗಿದ್ದು, ಆಕೆಯ ತಂದೆ ಪುರುಷೋತ್ತಮ್ ಹಾಗೂ ತಾಯಿ ಶೀಲಾ ಇಬ್ಬರೂ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಘಟನೆಯ ವಿವರ:

ಶನಿವಾರ ರಾತ್ರಿ ಮನೆಯಲ್ಲಿ ಟಿವಿ ನೋಡುವ ವಿಚಾರವಾಗಿ ಆರ್ಯ ಹಾಗೂ ಆಕೆಯ ಸಹೋದರ-ಸಹೋದರಿಯರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಆರ್ಯ ತನ್ನ ತಂಗಿಯ ಕಣ್ಣಿಗೆ ಪಂಚ್ ಮಾಡಿದ್ದಾಳೆ. ಇದನ್ನು ಕಂಡು ಕೋಪಗೊಂಡ ತಂದೆ ಪುರುಷೋತ್ತಮ್ ಮಗಳನ್ನು ಗದರಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಆರ್ಯ, ಬ್ಯಾಟ್ ಹಿಡಿದು ತಂದೆಯತ್ತ ದಾಳಿ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಆಕೆಯ ಕೈಯಲ್ಲಿದ್ದ ಬ್ಯಾಟ್ ಕಸಿದುಕೊಂಡ ತಂದೆ, ಆಕೆಯ ತಲೆಗೆ ಜೋರಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಆರ್ಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ಸಾಕ್ಷ್ಯ ನಾಶಕ್ಕೆ ಯತ್ನ:

ಹತ್ಯೆಯ ನಂತರ ತಂದೆ ಮೃತದೇಹದ ಬಳಿಯೇ ಬಹುಕಾಲ ಕುಳಿತಿದ್ದು, ಮರುದಿನ ಬೆಳಿಗ್ಗೆ ತಾಯಿಗೆ ಮಾಹಿತಿ ನೀಡಿದ್ದಾನೆ. ಬಳಿಕ ನೆಲದ ಮೇಲಿದ್ದ ರಕ್ತದ ಕಲೆಗಳನ್ನು ಒರೆಸಿ, ರಕ್ತಸಿಕ್ತವಾಗಿದ್ದ ಬಟ್ಟೆಯನ್ನು ವಾಷಿಂಗ್ ಮೆಷಿನ್‌ನಲ್ಲಿ ಮೂರು ಬಾರಿ ತೊಳೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಹತ್ಯೆಗೆ ಬಳಸಿದ್ದ ಬ್ಯಾಟ್‌ ಅನ್ನು ಮನೆಯ ಮೇಲ್ಛಾವಣಿಗೆ ಎಸೆಯಲಾಗಿತ್ತು.

ಆರಂಭದಲ್ಲಿ ಮಗಳು ತಾನಾಗಿಯೇ ತಲೆಗೆ ಹೊಡೆದುಕೊಂಡು ಸತ್ತಿದ್ದಾಳೆ ಎಂದು ಕುಟುಂಬಸ್ಥರು ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ಆದರೆ, ಪೊಲೀಸರ ಸತತ ವಿಚಾರಣೆ ವೇಳೆ ತಾಯಿ ಸತ್ಯ ಬಾಯ್ಬಿಟ್ಟಿದ್ದು, ಬಳಿಕ ತಂದೆ ಪುರುಷೋತ್ತಮ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಆರ್ಯ:

ಪೋಲಿಸ್ ತನಿಖೆಯ ವೇಳೆ ಆರ್ಯ ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು ಮತ್ತು ಪುಣೆಯ ಮನೋವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಳು ಎಂಬುದು ತಿಳಿದುಬಂದಿದೆ. ಮೊಬೈಲ್ ಮತ್ತು ಟಿವಿ ಅತಿಯಾಗಿ ಬಳಸುತ್ತಿದ್ದ ಆರ್ಯ, ಸಣ್ಣ ವಿಷಯಕ್ಕೂ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದಳು. ಕಳೆದ ಮೇ ತಿಂಗಳಿನಲ್ಲಿಯೂ ತಂದೆಯ ಮೇಲೆ ದಾಳಿ ಮಾಡಿದ್ದು, ಈ ವೇಳೆ ತಂದೆಯ ಕೈ ಮೂಳೆ ಮುರಿದಿತ್ತು.

ಸತಾರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles