ಚೆನ್ನೈ: ಸಿನಿಮಾ ಜಗತ್ತಿನ ಹಿರಿಯ ನಟ ಹಾಗೂ ರಾಜಕಾರಣಿ ಶರತ್ ಕುಮಾರ್ ಮತ್ತು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುವ ವೇಳೆ ವಿಮಾನದಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗಿದ್ದಾರೆ. ಈ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಫೋಟೋ ಹಂಚಿಕೊಂಡಿರುವ ಶರತ್ ಕುಮಾರ್, ಈ ಭೇಟಿಯನ್ನು “ಮರೆಯಲಾಗದ ಹಾಗೂ ಅತ್ಯಂತ ಹರ್ಷದಾಯಕ ಕ್ಷಣ” ಎಂದು ಬಣ್ಣಿಸಿದ್ದಾರೆ.
ಪ್ರಯಾಣದ ಸಮಯದಲ್ಲಿ ಇಬ್ಬರೂ ನಟರು ತಮ್ಮ ಮುಂದಿನ ಸಿನಿಮಾಗಳ ಶೂಟಿಂಗ್ ಹಾಗೂ ಕೆಲಸದ ವೇಳಾಪಟ್ಟಿಗಳ ಕುರಿತು ಚರ್ಚಿಸಿದ್ದಾರೆ. ಚೆನ್ನೈ ವಿಮಾನನಿಲ್ದಾಣಕ್ಕೆ ತಲುಪಿದಾಗ ನೆರೆದಿದ್ದ ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡ ಕ್ಷಣಗಳನ್ನು ಶರತ್ ಕುಮಾರ್ ಮೆಲುಕು ಹಾಕಿದ್ದಾರೆ. “ಇಂದು ನಾವು ಏನಾಗಿದ್ದೇವೋ ಅದಕ್ಕೆ ನಮ್ಮ ಅಭಿಮಾನಿ ಹಾಗೂ ಪ್ರೇಕ್ಷಕರೇ ಕಾರಣ” ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಮುಂದಿನ ಸಿನಿಮಾಗಳ ಬ್ಯುಸಿ ಶೆಡ್ಯೂಲ್:
ಶರತ್ ಕುಮಾರ್ ಅವರು ಇತ್ತೀಚೆಗೆ ‘ದಾದಿ ಕಿ ಶಾದಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಸ್ತುತ ‘ಕಿಂಗ್ಸ್ಟನ್’ ಖ್ಯಾತಿಯ ನಿರ್ದೇಶಕ ಕಮಲ್ ಪ್ರಕಾಶ್ ಅವರ ಹೊಸ ಚಿತ್ರ ಹಾಗೂ ‘ಪಡಯಪ್ಪ’ ನಿರ್ಮಾಪಕ ಪಿ.ಎಲ್. ತೆನ್ನಪ್ಪನ್ ಅವರ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಮತ್ತೊಂದೆಡೆ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಪ್ರಸ್ತುತ ಅವರು ಅಶ್ವಥ್ ಮಾರಿಮುತ್ತು ನಿರ್ದೇಶನದ ‘ಧರ್ಮನ್’ ಚಿತ್ರದ ಮೈಸೂರು ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಜೊತೆಗೆ ಕಮಲ್ ಹಾಸನ್ ಹಾಗೂ ನಿರ್ದೇಶಕ ನೆಲ್ಸನ್ ಅವರ ಕಾಂಬಿನೇಷನ್ನ ಬಿಗ್ ಪ್ರಾಜೆಕ್ಟ್ನಲ್ಲೂ ರಜನಿಕಾಂತ್ ನಟಿಸಲಿದ್ದಾರೆ.





Leave a comment