Home ಕ್ರೈಂ ನ್ಯೂಸ್ ‘ಮಹಿಳೆಯರ ಗೌರವ ಮನರಂಜನೆಯಲ್ಲ’: AI ತಂತ್ರಜ್ಞಾನದ ದುರ್ಬಳಕೆ ಖಂಡಿಸಿದ ನಟಿ, ರಾಜಕಾರಣಿ ಖುಷ್ಬೂ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುಸಿನಿಮಾ

‘ಮಹಿಳೆಯರ ಗೌರವ ಮನರಂಜನೆಯಲ್ಲ’: AI ತಂತ್ರಜ್ಞಾನದ ದುರ್ಬಳಕೆ ಖಂಡಿಸಿದ ನಟಿ, ರಾಜಕಾರಣಿ ಖುಷ್ಬೂ!

Share
ಖುಷ್ಬೂ
Share

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ನಕಲಿ ಹಾಗೂ ಮಾರ್ಫ್ ಮಾಡಿದ ವಿಡಿಯೋಗಳನ್ನು ಸೃಷ್ಟಿಸುತ್ತಿರುವ ಘಟನೆಗಳ ವಿರುದ್ಧ ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಮಾಧ್ಯಮದಲ್ಲಿ ಮತ್ತೊಬ್ಬ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟಾದಾಗ ಮೌನವಾಗಿರಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ (X) ಮೂಲಕ ಪ್ರತಿಕ್ರಿಯಿಸಿರುವ ಖುಷ್ಬೂ, ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ಕೃತ್ಯಗಳು ಅತ್ಯಂತ ಕಳವಳಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. AI ತಂತ್ರಜ್ಞಾನವನ್ನು ಸೃಜನಶೀಲತೆ ಮತ್ತು ದೇಶದ ಅಭಿವೃದ್ಧಿಗೆ ಬಳಸಬೇಕೇ ಹೊರತು, ಯಾರದ್ದಾದರೂ ಗೌರವಕ್ಕೆ ಧಕ್ಕೆ ತರುವ ಅಥವಾ ಸುಳ್ಳು ವಿಷಯ ಹರಡುವ ಸಾಧನವಾಗಿ ಬಳಸಬಾರದು ಎಂದು ಅವರು ಹೇಳಿದ್ದಾರೆ.

“AI ಮೂಲಕ ಸೃಷ್ಟಿಸಿ ಹಂಚಲಾಗುವ ಇಂತಹ ವಿಡಿಯೋಗಳು ಜೋಕ್‌ ಅಥವಾ ಮನರಂಜನೆಯಲ್ಲ. ಇವು ಕ್ರೂರ, ನಿಂದನೀಯ ಮತ್ತು ನಾಚಿಕೆಗೇಡಿನ ಕೃತ್ಯಗಳು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಮಾರ್ಫ್ ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಡುವುದನ್ನು ಎಂದಿಗೂ ಸಾಮಾನ್ಯವೆಂದು ಪರಿಗಣಿಸಬಾರದು” ಎಂದು ಖುಷ್ಬೂ ಕಿಡಿಕಾರಿದ್ದಾರೆ.

ಡಿಜಿಟಲ್ ಕಿರುಕುಳವೂ ಗಂಭೀರ ಅಪರಾಧ:

ಯಾರದ್ದೇ ಫೋಟೋ, ಧ್ವನಿ ಅಥವಾ ವಿಡಿಯೋವನ್ನು ಅನುಮತಿಯಿಲ್ಲದೆ ಬದಲಾಯಿಸಿ ಅವಮಾನಕರವಾಗಿ ಬಳಸುವುದು ಗಂಭೀರ ವಿಷಯವಾಗಿದೆ. ಇಂತಹ ವಿಷಯಗಳನ್ನು ಫಾರ್ವರ್ಡ್ ಮಾಡುವ ಬದಲು, ವರದಿ ಮಾಡುವುದು ಮತ್ತು ಅಗತ್ಯವಿದ್ದಲ್ಲಿ ಸೈಬರ್ ಕ್ರೈಮ್ ಅಧಿಕಾರಿಗಳಿಗೆ ದೂರು ನೀಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ.

“AI ಬೆಳೆಯಲಿ… ಆದರೆ ಮಾನವೀಯತೆ ಮತ್ತು ಗೌರವದ ಬೆಲೆಯಲ್ಲಿ ಅಲ್ಲ” ಎಂಬ ಸಂದೇಶದೊಂದಿಗೆ, ಸೈಬರ್ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕೆಂದು ಅವರು ಕರೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles