Home ಕ್ರೈಂ ನ್ಯೂಸ್ ಅನುಮಾನಕ್ಕೆ ಬಲಿಯಾಯ್ತು ಪ್ರೀತಿ: ಯುವತಿ ಹತ್ಯೆ ಬಳಿಕ ಯುವಕ ಆತ್ಮಹತ್ಯೆಗೆ ಶರಣು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅನುಮಾನಕ್ಕೆ ಬಲಿಯಾಯ್ತು ಪ್ರೀತಿ: ಯುವತಿ ಹತ್ಯೆ ಬಳಿಕ ಯುವಕ ಆತ್ಮಹತ್ಯೆಗೆ ಶರಣು!

Share
ಯುವತಿ
Share

ವಿಜಯವಾಡ (ಆಂಧ್ರಪ್ರದೇಶ): ಪ್ರೀತಿಸಿದ ಯುವತಿಯ ಕತ್ತು ಸೀಳಿ ಕೊಲೆ ಮಾಡಿದ ಯುವಕನೊಬ್ಬ, ಬಳಿಕ ತಾನೂ ಅಪಾರ್ಟ್‌ಮೆಂಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಇಲ್ಲಿನ ಅಜಿತ್ ಸಿಂಗ್ ನಗರದ ನ್ಯೂ ರಾಜರಾಜೇಶ್ವರಿ ಪೇಟೆಯಲ್ಲಿ ಶನಿವಾರ ನಡೆದಿದೆ.

ಮೃತರನ್ನು ಬಟ್ಟೆ ಅಂಗಡಿ ನೌಕರರಾಗಿದ್ದ ಪಡಾಲ ಮಹಾಲಕ್ಷ್ಮಿ (19) ಹಾಗೂ ಡೆಕೋರೇಷನ್ ಕೆಲಸ ಮಾಡುತ್ತಿದ್ದ ಮಕ್ಕು ಚಿನ್ನಾರಾವ್ (22) ಎಂದು ಗುರುತಿಸಲಾಗಿದೆ.

ಪ್ರಕರಣದ ಹಿನ್ನೆಲೆ:

ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರ ಮದುವೆಗೆ ಎರಡೂ ಕುಟುಂಬಗಳು ಸಮ್ಮತಿಸಿದ್ದವು. ಆದರೆ, ಇತ್ತೀಚೆಗೆ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಮಹಾಲಕ್ಷ್ಮಿ ಬೇರೊಬ್ಬ ಯುವಕನೊಂದಿಗೆ ನೃತ್ಯ ಮಾಡಿದ್ದನ್ನು ಕಂಡು ಚಿನ್ನಾರಾವ್ ತೀವ್ರ ಅನುಮಾನ ವ್ಯಕ್ತಪಡಿಸಿದ್ದನು. ಈ ವಿಚಾರವಾಗಿ ಮೂಡಿದ ಮನಸ್ತಾಪದಿಂದಾಗಿ ಮಹಾಲಕ್ಷ್ಮಿ ಆತನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಳು.

ಕೊಲೆ ಮತ್ತು ಆತ್ಮಹತ್ಯೆ:

ಶನಿವಾರ ಬೆಳಿಗ್ಗೆ ಮಹಾಲಕ್ಷ್ಮಿ ಮನೆಯಲ್ಲಿ ಒಬ್ಬಳೇ ಇದ್ದಾಗ, ತೆಂಗಿನಕಾಯಿ ಕತ್ತರಿಸುವ ಕತ್ತಿಯೊಂದಿಗೆ ನುಗ್ಗಿದ ಚಿನ್ನಾರಾವ್ ಆಕೆಯ ಕತ್ತು ಸೀಳಿದ್ದಾನೆ. ಬಳಿಕ ಆತ ತಕ್ಷಣವೇ ಕಟ್ಟಡದ ಮೇಲೇರಿ ಕೆಳಗೆ ಜಿಗಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹಾಲಕ್ಷ್ಮಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.

ಸ್ಥಳಕ್ಕೆ ಭೇಟಿ ನೀಡಿದ ಅಜಿತ್ ಸಿಂಗ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles