Home ಕ್ರೈಂ ನ್ಯೂಸ್ ಬೈಕ್ ಬೆಂಕಿ ಹಚ್ಚಿದ ಕೇಸ್ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಶಾಕ್: ಪತಿಯನ್ನೇ ಮುಗಿಸಲು ಸಂಚು ರೂಪಿಸಿದ್ದ ಪತ್ನಿ ಜೈಲಿಗೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬೈಕ್ ಬೆಂಕಿ ಹಚ್ಚಿದ ಕೇಸ್ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಶಾಕ್: ಪತಿಯನ್ನೇ ಮುಗಿಸಲು ಸಂಚು ರೂಪಿಸಿದ್ದ ಪತ್ನಿ ಜೈಲಿಗೆ!

Share
ಪತಿ
Share

ಆಂಧ್ರಪ್ರದೇಶ: ಬಿಜೆಪಿ ಮುಖಂಡನೊಬ್ಬನ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಚಂದ್ರಗಿರಿಯಲ್ಲಿ ಬೆಳಕಿಗೆ ಬಂದಿದೆ. ಬೈಕ್‌‌‌‌ಗೆ ಬೆಂಕಿ ಹಚ್ಚಿದ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಈ ಸ್ಫೋಟಕ ಸತ್ಯ ತಿಳಿದುಬಂದಿದೆ.

ಪತಿಯ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ:

ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಕೃತ್ಯದ ಹಿಂದೆ ಇದ್ದ ಬೃಹತ್ ಸಂಚು ಬಯಲಾಗಿದೆ. ಮುನಿರಾಜಾ ಅವರನ್ನು ಕೊಲೆ ಮಾಡಲು ಅವರ ಸ್ವಂತ ಪತ್ನಿ ಪ್ರಶಾಂತಿಯೇ ಸಂಚು ರೂಪಿಸಿದ್ದರು ಎಂಬ ನಿಜಾಂಶ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಪ್ರಶಾಂತಿಗೆ ಸಾಯಿ ಎಂಬ ಯುವಕನೊಂದಿಗೆ ಅನೈತಿಕ ಸಂಬಂಧವಿತ್ತು. ಈ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಮುಗಿಸಲು ಆಕೆ ಹಲವು ಬಾರಿ ವಿಫಲ ಯತ್ನಗಳನ್ನು ನಡೆಸಿದ್ದಳು ಹಾಗೂ ಹತ್ಯೆಗೆ ಸುದೀರ್ಘ ಯೋಜನೆ ರೂಪಿಸಿದ್ದಳು ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಕೊಲೆ ಯತ್ನ ಹಾಗೂ ಸಂಚಿನಲ್ಲಿ ಶಾಮೀಲಾಗಿದ್ದ ಆರೋಪದ ಮೇಲೆ ಮುನಿರಾಜಾ ಅವರ ಪತ್ನಿ ಪ್ರಶಾಂತಿ, ಆಕೆಯ ಪ್ರಿಯಕರ ಹಾಗೂ ಉಳಿದ ಯುವಕರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೈಕ್ ಬೆಂಕಿ ಪ್ರಕರಣದ ತನಿಖೆಯಲ್ಲಿ ರಹಸ್ಯ ಬಯಲು

ಚಂದ್ರಗಿರಿಯ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜಾ ಅವರ ಬೈಕ್‌ಗೆ ಈ ತಿಂಗಳ 13 ರಂದು ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಕುರಿತು ಮುನಿರಾಜಾ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಸುದೀರ್ಘವಾಗಿ ಪರಿಶೀಲಿಸಿದಾಗ, ಚಂದ್ರಗಿರಿ ಮೂಲದ ಸಾಯಿ, ಉದಯ್ ಕಿರಣ್, ಲೀಲಾ ಕೃಷ್ಣ, ಪೃಥ್ವಿರಾಜ್ ಹಾಗೂ ಹರೀಶ್ ಎಂಬ ಯುವಕರು ಬೈಕ್‌ಗೆ ಬೆಂಕಿ ಹಚ್ಚಿರುವುದು ಪತ್ತೆಯಾಗಿದೆ.
Share

Leave a comment

Leave a Reply

Your email address will not be published. Required fields are marked *