ಪುದುಕ್ಕೊಟ್ಟೈ: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ೬ ತಿಂಗಳ ಗರ್ಭಿಣಿಯಾಗಿದ್ದ ಅತ್ತಿಗೆಯನ್ನು ದುಪಟ್ಟಾದಿಂದ ಕುತ್ತಿಗೆ ಬಿಗಿದು ಹಾಗೂ ದಿಂಬಿನಿಂದ ಮುಖ ಒತ್ತಿ ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಮೆಟ್ಟುಪಟ್ಟಿ ಇಂದಿರಾ ನಗರದಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿಯನ್ನು ಹೆದ್ದಾರಿ ಗುತ್ತಿಗೆದಾರ ಪಾಂಡಿತ್ತುರೈ ಅವರ ಪತ್ನಿ ಸಂಧ್ಯಾ (೨೧) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಪಾಂಡಿತ್ತುರೈ ಅವರ ಸಹೋದರಿಯರಾದ ಪಾಂಡಿ ಮೀನಾ (33 ಹಾಗೂ ಪೊರ್ಕೊಡಿ (29) ಪತಿಯಿಂದ ದೂರವಾಗಿ ತವರು ಮನೆಯಲ್ಲೇ ವಾಸವಾಗಿದ್ದರು. ಪಾಂಡಿತ್ತುರೈ ಕೆಲಸದ ನಿಮಿತ್ತ ಈರೋಡ್ಗೆ ತೆರಳಿದ್ದಾಗ ಈ ಕೃತ್ಯ ನಡೆದಿದೆ.
ಆರಂಭದಲ್ಲಿ, ಸಂಧ್ಯಾ ಬೆಳಿಗ್ಗೆ ಬ್ರೆಡ್ ತಿನ್ನುವಾಗ ಬಿಕ್ಕಳಿಕೆ ಬಂದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅತ್ತೆ ಮತ್ತು ನಾದಿನಿಯರು ಕಥೆ ಕಟ್ಟಿ ನಂಬಿಸಲು ಯತ್ನಿಸಿದ್ದರು. ಆದರೆ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದಾಗ, ಇದು ಉಸಿರುಗಟ್ಟಿಸಿ ಮಾಡಲಾದ ಹತ್ಯೆ ಎಂಬುದು ದೃಢಪಟ್ಟಿದೆ.
ಅನೈತಿಕ ಸಂಬಂಧವೇ ಕೊಲೆಗೆ ಕಾರಣ:
ಪೋಲಿಸರ ತೀವ್ರ ವಿಚಾರಣೆಯ ವೇಳೆ ಬೆಚ್ಚಿಬೀಳಿಸುವ ಸತ್ಯಾಂಶ ಬೆಳಕಿಗೆ ಬಂದಿದೆ. ನಾದಿನಿಯರಾದ ಪಾಂಡಿ ಮೀನಾ ಹಾಗೂ ಪೊರ್ಕೊಡಿ ಅವರ ಅಕ್ರಮ ಸಂಬಂಧದ ವಿಷಯವನ್ನು ಸಂಧ್ಯಾ ತನ್ನ ಪತಿಯ ಗಮನಕ್ಕೆ ತಂದಿದ್ದರು. ಇದರಿಂದ ಆಕ್ರೋಶಗೊಂಡ ನಾದಿನಿಯರು, ಅತ್ತೆ ಭಾನುಮತಿ (50) ಹಾಗೂ ಸಂಬಂಧಿಕರಾದ ಕನಿಮೊಳಿ (27), ಸೆಲ್ವಿ (38), ಕಾರ್ತಿ (24) ಜೊತೆಗೂಡಿ ಕೊಲೆಗೆ ಸಂಚು ರೂಪಿಸಿದ್ದರು.
ಮನೆಯಲ್ಲಿ ಮಲಗಿದ್ದ ಸಂಧ್ಯಾ ಅವರ ಕುತ್ತಿಗೆಗೆ ದುಪಟ್ಟಾ ಬಿಗಿದು, ದಿಂಬಿನಿಂದ ಮುಖ ಒತ್ತಿ ಕೊಲೆ ಮಾಡಿದ್ದಾರೆ. ಬಳಿಕ ಕೊಲೆಯನ್ನು ಮರೆಮಾಚಿ ಸಹಜ ಸಾವು ಎಂದು ಬಿಂಬಿಸಲು ಮೃತ ದೇಹದ ಬಾಯಿ ಮತ್ತು ಮೂಗಿಗೆ ಬ್ರೆಡ್ ತುರುಕಿ, ಹಾಲನ್ನು ಸುರಿದು ನಾಟಕವಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ನ್ಯಾಯಾಂಗ ಬಂಧನ:
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಕಾರ್ತಿಯನ್ನು ಪುದುಕ್ಕೊಟ್ಟೈ ಜೈಲಿಗೆ ಹಾಗೂ ಉಳಿದ ಐವರು ಮಹಿಳಾ ಆರೋಪಿಗಳನ್ನು ತಿರುಚ್ಚಿಯ ಮಹಿಳಾ ವಿಶೇಷ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
- Mettupatti Indira Nagar
- Pandithurai wife Sandhya
- Pudukkottai pregnant woman murder
- Sandhya murder case
- sister in law illicit relationship murder
- Tamil Nadu Crime Kannada
- Tamil Nadu crime news
- Trichy women jail arrest
- ಅತ್ತೆ ನಾದಿನಿಯರಿಂದ ಕೊಲೆ
- ಅನೈತಿಕ ಸಂಬಂಧ ಕೊಲೆ
- ಗರ್ಭಿಣಿ ಕೊಲೆ ರಹಸ್ಯ
- ತಮಿಳುನಾಡು ಅಪರಾಧ ಸುದ್ದಿ
- ತಮಿಳುನಾಡು ಕೊಲೆ ಪ್ರಕರಣ
- ಪುದುಕ್ಕೊಟ್ಟೈ ಗರ್ಭಿಣಿ ಹತ್ಯೆ
- ಸಂಧ್ಯಾ ಕೊಲೆ ಕೇಸ್





Leave a comment