Home ದಾವಣಗೆರೆ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್: ಪಾಕಿಸ್ತಾನ ಬೌಲರ್‌ಗಳ ಬೆವರಿಳಿಸಿದ ಅಭಿಷೇಕ್ ಶರ್ಮಾ: ನಿರಾಸೆ ಮೂಡಿಸಿದ ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್!
ದಾವಣಗೆರೆಕ್ರೀಡೆಬೆಂಗಳೂರು

ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್: ಪಾಕಿಸ್ತಾನ ಬೌಲರ್‌ಗಳ ಬೆವರಿಳಿಸಿದ ಅಭಿಷೇಕ್ ಶರ್ಮಾ: ನಿರಾಸೆ ಮೂಡಿಸಿದ ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್!

Share
ಅಭಿಷೇಕ್ ಶರ್ಮಾ
Share

ನವದೆಹಲಿ: ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ ಪಂದ್ಯಾವಳಿಯ ಹೈ-ವೋಲ್ಟೇಜ್ ಫೈನಲ್ ಹಣಾಹಣಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, ಪಾಕಿಸ್ತಾನದ ಬೌಲಿಂಗ್ ಪಡೆಯನ್ನು ಕಂಗಾಲುಗೊಳಿಸಿದೆ.

ಆದರೆ ವೈಭವ್ ಸೂರ್ಯವಂಶಿ ಹಾಗೂ ಸಂಜು ಸ್ಯಾಮ್ಸನ್ ನಿರಾಸೆ ಮೂಡಿಸಿದ್ದಾರೆ. 

ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕ್ರೀಸ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದಾರೆ. ಸಾಕರ್ ಬೌಲರ್ ಸೈಮ್ ಅಯ್ಯೂಬ್ ಎಸೆದ 3ನೇ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿ ಸೇರಿದಂತೆ ಭರ್ಜರಿ ರನ್ ಕಲೆಹಾಕಿದರು. ನಂತರ ದಾಳಿಗಿಳಿದ ಅಹ್ಮದ್ ದಾನಿಯಾಲ್ ಅವರ ಓವರ್‌ನಲ್ಲೂ ಮತ್ತೊಂದು ಭರ್ಜರಿ ಸಿಕ್ಸರ್ ಸಿಡಿಸಿ ಪಂದ್ಯದ ಮೇಲಿನ ಹಿಡಿತವನ್ನು ಸಾಧಿಸಿದ್ದಾರೆ.

ಸದ್ಯ ಭಾರತ ತಂಡ 3.2 ಓವರ್‌ಗಳಲ್ಲಿ 2  ವಿಕೆಟ್ ಕಳೆದುಕೊಂಡಿದೆ.ಕ್ರೀಸ್‌ನಲ್ಲಿರುವ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *