Home ಕ್ರೈಂ ನ್ಯೂಸ್ ಚಿನ್ನದ ಸರ ಕೇಳಲು ಲಾಡ್ಜ್‌ಗೆ ಪ್ರಿಯಕರನ ಜೊತೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿನಿ ಶವವಾಗಿ ಪತ್ತೆ: ಜೊತೆಯಲ್ಲಿದ್ದ ಪ್ರೇಮಿ ಪರಾರಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಚಿನ್ನದ ಸರ ಕೇಳಲು ಲಾಡ್ಜ್‌ಗೆ ಪ್ರಿಯಕರನ ಜೊತೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿನಿ ಶವವಾಗಿ ಪತ್ತೆ: ಜೊತೆಯಲ್ಲಿದ್ದ ಪ್ರೇಮಿ ಪರಾರಿ!

Share
ಪ್ರಿಯಕರ
Share

ಹೈದರಾಬಾದ್: ಹೈದರಾಬಾದ್‌ ಮಿಯಾಪೂರ್‌ನಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ 27 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಜೊತೆ ತಂಗಿದ್ದ ಪ್ರಿಯಕರ  ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.

ಮೃತರನ್ನು ಸಂಗಾರೆಡ್ಡಿ ಜಿಲ್ಲೆಯ ಮೂಲದ ಕೋಮಟಿ ಸೃಜನಾ  ಎಂದು ಗುರುತಿಸಲಾಗಿದೆ. ಇವರು ತೆಲಂಗಾಣದ ಹನಮಕೊಂಡ ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ಮಕ್ಕಳ ವಿಭಾಗದಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದರು.

ಘಟನೆಯ ವಿವರ:

ಸೆಪ್ಟೆಂಬರ್ 30 ರಂದು ಸೃಜನಾ ತಮ್ಮ ಹಳೆಯ ಸ್ನೇಹಿತನ ಕರೆಯ ಮೇರೆಗೆ ಚಿನ್ನದ ಸರ ವಾಪಸ್ ಪಡೆಯುವ ವಿಚಾರವಾಗಿ ಚರ್ಚಿಸಲು ಹೈದರಾಬಾದ್‌ಗೆ ಬಂದಿದ್ದರು. ಅಂದೇ ಮಿಯಾಪೂರ್‌ನ ಹೋಟೆಲ್‌ ಒಂದಕ್ಕೆ ಸ್ನೇಹಿತನ ಜೊತೆ ಚೆಕ್-ಇನ್ ಆಗಿದ್ದರು. ಆದರೆ, ಅಕ್ಟೋಬರ್ 1 ರಂದು ಆಕೆಯ ಸ್ನೇಹಿತ ಒಬ್ಬನೇ ಹೋಟೆಲ್‌ನಿಂದ ಚೆಕ್-ಔಟ್ ಆಗಿ ನಿರ್ಗಮಿಸಿದ್ದಾನೆ.

ಸೃಜನಾ ಅವರ ಫೋನ್ ಸಂಪರ್ಕಕ್ಕೆ ಸಿಗದಿದ್ದಾಗ ಗಾಬರಿಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಮೊಬೈಲ್ ಲೊಕೇಶನ್ ಆಧರಿಸಿ ಮಿಯಾಪೂರ್ ಹೋಟೆಲ್‌ಗೆ ತೆರಳಿ ತಪಾಸಣೆ ನಡೆಸಿದಾಗ, ಕೊಠಡಿಯ ಬೆಡ್‌ ಮೇಲೆ ಆಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪೊಲೀಸ್ ತನಿಖೆ:

ಆರಂಭಿಕ ತಪಾಸಣೆಯಲ್ಲಿ ದೇಹದ ಮೇಲೆ ಯಾವುದೇ ಗಂಭೀರ ಹೊರಗಾಯದ ಗುರುತುಗಳು ಕಂಡುಬಂದಿಲ್ಲ. ಮಗಳ ಸಾವಿಗೆ ಸ್ನೇಹಿತನೇ ಕಾರಣ ಎಂದು ಸೃಜನಾ ಅವರ ತಂದೆ ಕೆ. ಭೂಮಯ್ಯ ದೂರು ನೀಡಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಯುವಕನಿಗಾಗಿ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಜಾಲ ಬೀಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *