SUDDIKSHANA KANNADA NEWS/ DAVANAGERE/ DATE:18-09-2023
ದಾವಣಗೆರೆ: ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya) ಸೇರಿದಂತೆ ಯಾರೇ ಕಾಂಗ್ರೆಸ್ ಗೆ ಬಂದರೆ ಸ್ವಾಗತ. ನಾವು ಕರೆದಿದ್ದೇವೆ. ಇನ್ನೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ. ಸ್ವಾಮಿಗೆ ಬರಲು ಹೇಳಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಮಾಧ್ಯಮದವರ ಜೊತೆ ಮಾತನಾಡಿರುವ ಅವರು, ಸ್ವಾಮಿ ನಮ್ಮ ಮನೆಗೆ ಬಂದಿದ್ದಾರಲಪ್ಪ. ಇನ್ನೂ ಕಾಂಗ್ರೆಸ್ ಸೇರಿಲ್ಲ. ಅವರಂತೂ ಕಾಂಗ್ರೆಸ್ ನ ಎಲ್ಲರ ಸಂಪರ್ಕದಲ್ಲಿದ್ದಾರೆ. ನಮ್ಮ ಜೊತೆಗೆ ವಿಶ್ವಾಸದಲ್ಲಿ ಇದ್ದಾರೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಗೆ ಅನುಕೂಲವಾಗಬೇಕು. ಹಾಗಾಗಿ ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ:
M. P. Renukacharya Angry: ವೀರೇಶ್ ಹನಗವಾಡಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಹುಷಾರ್, ನಿಮ್ಮಂಥವರಿಂದ ಬಿಜೆಪಿ ಸರ್ವನಾಶ: ಏಕವಚನದಲ್ಲೇ ರೇಣುಕಾಚಾರ್ಯ ಸಿಡಿಸಿಡಿ.!
ರೇಣುಕಾಚಾರ್ಯ ಅವರಿಗೆ ನಾವು ಕಾಂಗ್ರೆಸ್ ಸೇರಿ ಎಂದು ಒತ್ತಡ ಹಾಕಿಲ್ಲ. ರೇಣುಕಾಚಾರ್ಯ ಅವರದ್ದು ತೆರೆದ ಹೃದಯ. ಎಲ್ಲವನ್ನೂ ಹೇಳುತ್ತಿದ್ದಾರೆ. ಬಿಜೆಪಿಯವರಿಂದ ಬೇಸತ್ತು ಹೋಗಿದ್ದಾರೆ. ಒಳ್ಳೆಯದಾಗಲಿ ಎಂದು ನಾವು ನೋಡುತ್ತಿದ್ದೇವೆ. ಲೋಕಸಭೆ ಚುನಾವಣೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದುಕೊಂಡಿದ್ದೇವೆ. ಸ್ವಾಮಿ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಇನ್ನೂ ಹೇಳುತ್ತಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಸಂಬಂಧ ಏನೂ ಮಾತನಾಡಿಲ್ಲ. ಮಾತುಕತೆ ಕದ್ದು ಮುಚ್ಚಿ ಇಲ್ಲ. ಓಪನ್ ಆಗಿ ಹೇಳುತ್ತೇವೆ ಎಂದು ತಿಳಿಸಿದರು.

ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ರೋಸೆದ್ದು ಹೋಗಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ, ಹನಗವಾಡಿ ವಿರೂಪಾಕ್ಷಪ್ಪ, ಹರಪನಹಳ್ಳಿಯ ಮಹಾಬಲೇಶ್ವರ ಗೌಡ್ರು ಕಾಂಗ್ರೆಸ್ ನಲ್ಲಿಯೇ ಇದ್ದರು. ಮೂವರು ಬಿಜೆಪಿಗೆ ಹೋಗಿದ್ದರು. ಎಸ್. ವಿ. ರಾಚಮಂದ್ರಪ್ಪರು ಕಾಂಗ್ರೆಸ್ ನಲ್ಲೇ ಇದ್ದವರು. ಹರಪನಹಳ್ಳಿಯ ಮಹಾಬಲೇಶ್ವರ ಗೌಡ್ರು ಈಗ ಮತ್ತೆ ಕಾಂಗ್ರೆಸ್ ಬಂದಿದ್ದಾರೆ ಎಂದು ಕೇಳಿದ್ದೇನೆ. ವಿರೂಪಾಕ್ಷಪ್ಪ ಅವರಿಗೆ ಮೂಕರ್ಜಿ ಸೇರಿದಂತೆ ಕೊಡಬಾರದ ಕಾಟ ಕೊಟ್ಟಿದ್ದಾರೆ. ತೊಂದರೆ ಮಾಡಿ ಅವರನ್ನು ಸಂಕಷ್ಟಕ್ಕೀಡು ಮಾಡಲಾಗಿದೆ. ಸಿಕ್ಕಿ ಹಾಕಿಸಲು ಏನೆಲ್ಲಾ ಮಾಡಬೇಕು ಅದನ್ನೆಲ್ಲಾ ಮಾಡಿದ್ದಾರಲ್ವಾ ಎಂದು ಪ್ರಶ್ನಿಸಿದರು.
ಸ್ವಾಮಿ ಬಂದಿರುವುದು ಜಾಸ್ತಿ ಹಾಕಬೇಡಿ:
ರೇಣುಕಾ ಸ್ವಾಮಿ ನಮ್ಮ ಮನೆಗೆ ಬಂದಿರುವ ವಿಚಾರ ಕುರಿತಂತೆ ಜಾಸ್ತಿ ಪ್ರಸಾರ ಮಾಡಬೇಡಿ. ಬೇರೆ ಅರ್ಥ ಹೋಗುತ್ತದೆ. ಮಾಧ್ಯಮವದರೇ ಎಲ್ಲವನ್ನೂ ಹೇಳಬೇಕು. ಫುಲ್ ಫೋರ್ಸ್ ಇದೆ ನಿಮ್ದು. ಇದ್ದಕ್ಕಿದ್ದಂತೆ ಹಲವರು ಬಂದರು. ನಾವು ಏನಾಯ್ತೋ ಏನೋ ಎಂದುಕೊಂಡೆವು. ಹೊರಗಡೆ ನೋಡಿದರೆ ರೇಣುಕಾಚಾರ್ಯ ಜೊತೆ ಮಾಧ್ಯಮದವರು ಹಾಗೂ ರೈತರು ಬಂದರು. ಸ್ವತಃ ನಾನೇ ಏನಾಯ್ತೋ ಏನೋ ಎಂದುಕೊಂಡೆ. ಆಮೇಲೆ ನೋಡ್ತೇನೆ ರೇಣುಕಾಚಾರ್ಯರ
ಜೊತೆ ನೀವೆಲ್ಲರೂ ಬಂದಿದ್ದೀರಿ ಎಂದು ನಕ್ಕರು.
ರೇಣುಕಾಚಾರ್ಯ (M. P. Renukacharya) ಅವರೇ ನಿಮಗೆ ಹೇಳಿಕೊಟ್ಟಿದ್ದಾರಾ?
ರೇಣುಕಾಚಾರ್ಯ ಪಕ್ಕದಲ್ಲಿ ಕೂರಿಸಿಕೊಂಡು ನಗು ನಗುತ್ತಲೇ ಮಾತನಾಡಿದ ಮಲ್ಲಿಕಾರ್ಜುನ್ ಅವರು, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಭೇಟಿ ಮಾಡಬೇಕಲ್ವಾ. ಒಳಗೊಳಗೆ ಏನು ಮಾತಾನಾಡಿಕೊಂಡಿದ್ದಾರೋ ಏನೋ ಗೊತ್ತಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷವು ರೇಣುಕಾಚಾರ್ಯ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುತ್ತಾ ಎಂಬ ಪ್ರಶ್ನೆಗೆ ರೇಣುಕಾಚಾರ್ಯ ಅವರೇ ನಿಮಗೆ ಹೇಳಿಕೊಟ್ಟಿದ್ದಾರಾ?
ಈ ಪ್ರಶ್ನೆ ಕೇಳಿ ಎಂದು ಕಿಚಾಯಿಸಿದರು.