Home ದಾವಣಗೆರೆ ಹಾವಿನ ಕಡಿತವಲ್ಲ, ವಿಷಪ್ರಾಶನ: ಮದುವೆಗೆ ಒತ್ತಾಯಿಸಿದ ಪ್ರಿಯತಮೆಗೆ ವಿಷ ನೀಡಿ ಕೊಂದ ಪ್ರಿಯತಮ ಸೇರಿ ಒಂದೇ ಕುಟುಂಬದ ನಾಲ್ವರಿಗೆ ಜೀವಾವಧಿ ಶಿಕ್ಷೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಹಾವಿನ ಕಡಿತವಲ್ಲ, ವಿಷಪ್ರಾಶನ: ಮದುವೆಗೆ ಒತ್ತಾಯಿಸಿದ ಪ್ರಿಯತಮೆಗೆ ವಿಷ ನೀಡಿ ಕೊಂದ ಪ್ರಿಯತಮ ಸೇರಿ ಒಂದೇ ಕುಟುಂಬದ ನಾಲ್ವರಿಗೆ ಜೀವಾವಧಿ ಶಿಕ್ಷೆ!

Share
ಪ್ರಿಯತಮ
Share

ಜೈಪುರ: ಭಿನ್ನ ಜಾತಿಯ ಕಾರಣಕ್ಕೆ ಮದುವೆಗೆ ನಿರಾಕರಿಸಿ, ಪ್ರಿಯತಮೆಯನ್ನು ಸಂಚು ನಡೆಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರಿಗೆ ರಾಜಸ್ಥಾನದ ಟೋಂಕ್ ಎಸ್‌.ಸಿ/ಎಸ್‌.ಟಿ (SC/ST) ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹1.35 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ಮೃತರನ್ನು ಸುಮನ (25) ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಪ್ರಧಾನ್, ಆತನ ತಾಯಿ ಸಂಜನಾ, ಸಹೋದರ ಸವಾಯಿ ರಾಮ್ ಹಾಗೂ ಸಹೋದರಿ ಸುಶೀಲಾಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.

ಘಟನೆಯ ವಿವರ:

ಜೈಪುರ ಮೂಲದ ಸುಮನ ಹಾಗೂ ಪ್ರಧಾನ್ ಪ್ರೀತಿಸುತ್ತಿದ್ದರು. ಆದರೆ, ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಪ್ರಧಾನ್ ಕುಟುಂಬ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು. ಸುಮನ ಮದುವೆಯಾಗುವಂತೆ ಒತ್ತಾಯಿಸಲು ಪ್ರಾರಂಭಿಸಿದಾಗ, ಪ್ರಧಾನ್ ತನ್ನ ಕುಟುಂಬದವರೊಂದಿಗೆ ಸೇರಿ ಆಕೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ.

2022ರಲ್ಲಿ ಶ್ರಾದ್ಧ ಕಾರ್ಯಕ್ರಮದ ನೆಪದಲ್ಲಿ ಆಕೆಯನ್ನು ಗ್ರಾಮಕ್ಕೆ ಕರೆಸಿಕೊಂಡು, ವಿಷಕಾರಿ ರಾಸಾಯನಿಕ ನೀಡಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಹಾವಿನ ಕಡಿತದಿಂದ ಮೃತಪಟ್ಟಿದ್ದಾಳೆ ಎಂದು ನಂಬಿಸಿ ಆಕೆಯ ಕುಟುಂಬದವರು ಅಂತ್ಯಕ್ರಿಯೆ ನಡೆಸಿದ್ದರು.

ಸತ್ಯ ಹೊರಬಂದಿದ್ದು ಹೇಗೆ?

ಮರಣೋತ್ತರ ಪರೀಕ್ಷೆಯ ವರದಿ ಬಂದಾಗ, ಸಾವು ಹಾವಿನ ಕಡಿತದಿಂದ ಸಂಭವಿಸಿಲ್ಲ; ಬದಲಾಗಿ ವಿಷಕಾರಿ ರಾಸಾಯನಿಕ ಸೇವನೆಯಿಂದಾಗಿದೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಇದೇ ವೇಳೆ ಪ್ರಧಾನ್ ಮೃತ ಸುಮನ ಅವರ ಎಟಿಎಂ ಕಾರ್ಡ್ ಬಳಸಿ ₹80,000 ಹಣ ಡ್ರಾ ಮಾಡಿಕೊಂಡಿರುವುದು ಪೊಲೀಸರ ಅನುಮಾನವನ್ನು ಹೆಚ್ಚಿಸಿತ್ತು.

ಸುಮನ ಸಹೋದರ ನೀಡಿದ ದೂರಿನ ಮೇರೆಗೆ ಮೇ 2023ರಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಇಡೀ ಕೊಲೆ ಸಂಚನ್ನು ಬಯಲಿಗೆಳೆದಿದ್ದರು. ನ್ಯಾಯಾಧೀಶರಾದ ಆರತಿ ಮಹೇಶ್ವರಿ ಅವರು 27 ಸಾಕ್ಷಿಗಳು ಹಾಗೂ 37 ದಾಖಲೆಗಳನ್ನು ಪರಿಶೀಲಿಸಿ ಈ ಕಠಿಣ ತೀರ್ಪನ್ನು ಪ್ರಕಟಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles