ನವದೆಹಲಿ: ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಸಹ-ಪೈಲಟ್‌ನಿಂದ ತೀವ್ರ ಗಾಯಗೊಂಡರೂ, ಸಮಯಪ್ರಜ್ಞೆ ಮೆರೆದು ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಶೌರ್ಯವನ್ನು ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಘಟನೆಯ ವಿವರ:
ಬುಧವಾರ ಬೆಳಿಗ್ಗೆ 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಬೋಯಿಂಗ್ 737 ವಿಮಾನದಲ್ಲಿ, ಒಮಾನ್ ಮೂಲದ ಸಹ-ಪೈಲಟ್ ಇದ್ದಕ್ಕಿದ್ದಂತೆ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ. ಇದನ್ನು ತಡೆದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಸಹ-ಪೈಲಟ್ ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.
ರಕ್ತಸಿಕ್ತರಾಗಿದ್ದರೂ ಧೈರ್ಯಗುಂದದ ಕ್ಯಾಪ್ಟನ್ ಸ್ಮಿತ್, ಕಾಕ್‌ಪಿಟ್ ಬಾಗಿಲನ್ನು ತೆಗೆದು ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಸುಳಿವು ನೀಡಿದ್ದಾರೆ. ಪ್ರಯಾಣಿಕರು ಆತನನ್ನು ಬಂಧಿಸಿದ ಬಳಿಕ, ವಿಮಾನದಲ್ಲಿದ್ದ ಇತರ ಇಬ್ಬರು ರಿಲೀಫ್ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ.
- Benjamin Netanyahu tribute
- Boeing 737 flight sabotage
- Captain Smit Machchhar
- Dubai to Tel Aviv flight
- flydubai hijacking attempt
- Indian hero pilot
- PM Narendra Modi praise
- Tabuk Saudi Arabia emergency landing
- ಕ್ಯಾಪ್ಟನ್ ಸ್ಮಿತ್ ಮಚ್ಚಾರ್
- ದುಬೈ ಟೆಲ್ ಅವಿವ್ ವಿಮಾನ
- ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
- ಫ್ಲೈದುಬೈ ವಿಮಾನ ಹೈಜಾಕ್ ಯತ್ನ
- ಭಾರತೀಯ ಹೀರೊ ಪೈಲಟ್
- ವಿಮಾನ ಪತನ ತಡೆದ ಪೈಲಟ್
- ಸೌದಿ ಅರೇಬಿಯಾ ತುರ್ತು ಭೂಸ್ಪರ್ಶ





Leave a comment