Home ದಾವಣಗೆರೆ “ರೇಂಜ್ ರೋವರ್‌ನಲ್ಲಿ ಓಡಾಟ, 18 ಕೋಟಿ RTGS ಲಂಚ”: ಬಿ. ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಬಿ.ಕೆ. ಹರಿಪ್ರಸಾದ್ ಕಿಡಿ!
ದಾವಣಗೆರೆಬೆಂಗಳೂರು

“ರೇಂಜ್ ರೋವರ್‌ನಲ್ಲಿ ಓಡಾಟ, 18 ಕೋಟಿ RTGS ಲಂಚ”: ಬಿ. ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಬಿ.ಕೆ. ಹರಿಪ್ರಸಾದ್ ಕಿಡಿ!

Share
ಯಡಿಯೂರಪ್ಪ
Share

ಶಿವಮೊಗ್ಗ: ವೆಂಕಟಪ್ಪನವರು ಕೊರಚ ಕೊರಮ ಸಮುದಾಯದಲ್ಲಿ ಹುಟ್ಟಿ, ಗುಂಡೂರಾವ್ ಕಾಲದಲ್ಲಿ ಮಂತ್ರಿಯಾಗಿದ್ದರು. ಯಡಿಯೂರಪ್ಪನವರೇ ನೀವು ನಿಮ್ಮ ಮಕ್ಕಳು ಯಾವ ಕಾರಲ್ಲಿ ಓಡಾಡುತ್ತಿದ್ದೀರಿ? ನೀವು ಓಡಾಡುತ್ತಿರುವುದು ರೇಂಜ್ ರೋವರ್, ಆದರೂ ಇಲ್ಲಿ ಪ್ರತಿಭಟನೆ ಇಲ್ಲ. ಶಿವಮೊಗ್ಗದಲ್ಲಿ ಎಷ್ಟು ದೂರ ನೋಡಿದರೂ ಯಡಿಯೂರಪ್ಪನವರ ಕಾಲೇಜು. ಮತ್ತೊಂದು ಕಡೆ ಈಶ್ವರಪ್ಪನವರ ಕಾಲೇಜು. ಭ್ರಷ್ಟಾಚಾರದ ಬಗ್ಗೆ ನೀವು ನಮಗೆ ಹೇಳುತ್ತೀರಾ? ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಪ್ರಶ್ನಿಸಿದರು.

ಶಿಕಾರಿಪುರದಲ್ಲಿ ನಡೆದ ಜನತಾ ಜೋಡೋ ಜಾಗೃತಿ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು.

ನಿಮ್ಮ ಹುಮ್ಮಸ್ಸು ನೋಡಿದರೆ ನಮಗೆ ಆಶ್ಚರ್ಯವಾಗುತ್ತದೆ. ರಾಹುಲ್ ಗಾಂಧಿ ಅವರ ಜನಪ್ರಿಯತೆಗೆ ಸಾಕ್ಷಿ. ಇದು ಭಾರತ ಜೋಡೋ ಯಾತ್ರೆ ಅಲ್ಲ. ಮಹಾತ್ಮ ಗಾಂಧಿ ಅವರು ದಂಡಿ ಯಾತ್ರೆ ಮಾಡಿದಾಗ 300 ಕಿ.ಮೀ ಯಾತ್ರೆ ಮಾಡಿದ್ದರು. ರಾಹುಲ್ ಗಾಂಧಿ ಅವರು 6 ತಿಂಗಳ ಕಾಲ 6 ಸಾವಿರ ಕಿ.ಮೀ. ಮಣಿಪುರದಿಂದ ಮುಂಬೈ 4 ಸಾವಿರ ಕಿ.ಮೀ ಒಟ್ಟು 10 ಸಾವಿರ ಕಿ.ಮೀ ಹೆಜ್ಜೆ ಹಾಕಿ, ದೇಶದಲ್ಲಿ ದ್ವೇಷ ಅಸೂಯೆ ವಾತಾವರಣದ ವಿರುದ್ಧ ಶಾಂತಿ, ಸೌಹಾರ್ದತೆ ಯಾತ್ರೆ ಮಾಡಿದ್ದರು. ಈ ಯಾತ್ರೆಗೆ 4 ವರ್ಷ ಪೂರ್ಣಗೊಂಡಿದ್ದು, ಇದರ ಸ್ಮರಣಾರ್ಥವಾಗಿ, ಅವರ ಆಶಯದ ಮೇಲೆ ನಾವು ಜನತಾ ಜೋಡೋ ಜಾಗೃತಿ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ದೇಶದಲ್ಲಿ 7 ದೊಡ್ಡ ಧರ್ಮಗಳಿವೆ. ಬೇರೆ ಯಾವುದೇ ದೇಶಗಳಲ್ಲಿ ಇಷ್ಟು ದೊಡ್ಡ ಧರ್ಮಗಳಿಲ್ಲ. ಆದರೂ ನಾವು ಭಾರತೀಯರಾಗಿ ಒಂದಾಗಿ ಬದುಕುತ್ತಿದ್ದೆವು. ಬಿಜೆಪಿಯವರು ದ್ವೇಷದ ವಾತಾವರಣ ಸೃಷ್ಟಿಸಿದ್ದಾರೆ. ಕುವೆಂಪು ಅವರು ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಮೌಢ್ಯತೆಯ ಮಾರಿಯನ್ನು ಹೊರದೂಡ ಬನ್ನಿ, ಬಡತನದ ಬುಡ ಕೀಳ ಬನ್ನಿ, ವಿಜ್ಞಾನ ದೀವಿಗೆ ಹಿಡಯ ಬನ್ನಿ, ಬನ್ನಿ ಸೋದರರೆ ವಿಶ್ವಪಥಕ್ಕೆ ಎಂದಿದ್ದಾರೆ. ಈ ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದರು ಎಂದು ತಿಳಿಸಿದರು.

ಈ ದೇಶಕ್ಕಾಗಿ ಬ್ರಿಟೀಷರಿಂದ ಐದು ಜನ ಗಲ್ಲಿಗೇರಿದರು. ಅಂತಹ ಮಹನೀಯರು ಹುಟ್ಟಿದ ಭೂಮಿಯಲ್ಲಿ ಎಂತಹವರು ಈಗ ಹುಟ್ಟಿದ್ದಾರೆ ನೋಡಿ. ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿ, ದ್ವೇಷದ ವಾತಾವರಣ ಸೃಷ್ಟಿಸಿದ್ದಾರೆ. ಇವರು ರಾಜಕೀಯ ಮಾಡುತ್ತಾರೆ ಎಂದರೆ ಜಿಲ್ಲೆಯನ್ನು ಯಾವ ಸ್ಥಿತಿಗೆ ತಂದಿದ್ದಾರೆ. ನಾವೆಲ್ಲರೂ ಸೇರಿ ಉಳುವವನೆ ಭೂಮಿ ಒಡೆಯ ಎಂಬ ಕಾಗೋಡು ಹೋರಾಟ ಆರಂಭವಾಗಿದ್ದು ಈ ಜಿಲ್ಲೆಯಿಂದ. ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಾಧನೆ ಮಾಡಿರುವ ಜಿಲ್ಲೆಯಲ್ಲಿ ಪೂಜ್ಯ ತಂದೆಯವರ ಮಕ್ಕಳು ಏನು ಮಾಡುತ್ತಿದ್ದಾರೆ? ಅವರು ಭ್ರಷ್ಟಾಚಾರ ವಿರುದ್ದ ಲಿಂಗಸೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದರು. ಅವರ ಆರೋಗ್ಯ ದೃಷ್ಟಿಯಲ್ಲಿ ಪಾದಯಾತ್ರೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. 18 ಕೋಟಿ ರೂಪಾಯಿಗಳನ್ನು ಆರ್ ಟಿಜಿಎಸ್ ಮೂಲಕ ಲಂಚ ಪಡೆದವರು ಭ್ರಷ್ಟಾಚಾರದ ಬಗ್ಗೆ ಪಾದಯಾತ್ರೆ ಮಾಡಿದರೆ ದುರಂತ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles