Home ಕ್ರೈಂ ನ್ಯೂಸ್ ಮ್ಯಾಟ್ರಿಮೋನಿಯಲ್ ವೈಬ್‌ಸೈಟ್ ಮೂಲಕ ನೂರಾರು ಜನರಿಗೆ 11 ಕೋಟಿ ರೂ. ಸೈಬರ್ ವಂಚನೆ: ಮಧ್ಯಪ್ರದೇಶದಲ್ಲಿ ಅಂತರರಾಜ್ಯ ಗ್ಯಾಂಗ್ ಭೇದಿಸಿದ ಪೊಲೀಸರು, 6 ಮಂದಿ ಬಂಧನ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮ್ಯಾಟ್ರಿಮೋನಿಯಲ್ ವೈಬ್‌ಸೈಟ್ ಮೂಲಕ ನೂರಾರು ಜನರಿಗೆ 11 ಕೋಟಿ ರೂ. ಸೈಬರ್ ವಂಚನೆ: ಮಧ್ಯಪ್ರದೇಶದಲ್ಲಿ ಅಂತರರಾಜ್ಯ ಗ್ಯಾಂಗ್ ಭೇದಿಸಿದ ಪೊಲೀಸರು, 6 ಮಂದಿ ಬಂಧನ

Share
ಸೈಬರ್
Share

ಮಂದಸೌರ್ (ಮಧ್ಯಪ್ರದೇಶ): ಮ್ಯಾಟ್ರಿಮೋನಿಯಲ್ ವೆಬ್‌‌ಸೈಟ್‌ಗಳ ಮೂಲಕ ನೂರಕ್ಕೂ ಹೆಚ್ಚು ಜನರಿಗೆ ಅಂದಾಜು 11 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಎಸಗಿದ್ದ ಅಂತರರಾಜ್ಯ ಸೈಬರ್ ಅಪರಾಧ ಜಾಲವನ್ನು ಮಧ್ಯಪ್ರದೇಶದ ಮಂದಸೌರ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮತ್ತು ಬಿಹಾರದಿಂದ ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಜಾಲವು ವಿದೇಶಿ ಕರೆ ಮಾಡುವವರ ನೆರವು ಪಡೆದು, ತಮ್ಮನ್ನು ತಾವು ವರರೆಂದು ಪರಿಚಯಿಸಿಕೊಂಡು ವಂಚಿಸುತ್ತಿತ್ತು ಎಂದು ಮಂದಸೌರ್ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಮೀನಾ ತಿಳಿಸಿದ್ದಾರೆ.

ಘಟನೆಯ ವಿವರ:

ಶಾಮಗಢ ನಿವಾಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ತಾನು ಎನ್‌ಆರ್‌ಐ ಎಂದು ಹೇಳಿಕೊಂಡು, ನಕಲಿ ಫೋಟೋಗಳು ಹಾಗೂ ವಾಟ್ಸಾಪ್‌ನಲ್ಲಿ ಕುಟುಂಬದ ಸದಸ್ಯರೆಂದು ನಕಲಿ ವ್ಯಕ್ತಿಗಳನ್ನು ಪರಿಚಯಿಸಿ ಮಹಿಳೆಯ ನಂಬಿಕೆ ಗಳಿಸಿದ್ದ.

ಬಳಿಕ, ವಿದೇಶದಿಂದ ಬೆಲೆಬಾಳುವ ಉಡುಗೊರೆಗಳನ್ನು ಕಳುಹಿಸಲಾಗಿದೆ ಮತ್ತು ಅವು ಕಸ್ಟಮ್ಸ್ ಇಲಾಖೆಯಲ್ಲಿ ಸಿಲುಕಿಕೊಂಡಿವೆ ಎಂದು ಹೇಳಿ, ತೆರಿಗೆ ಮತ್ತು ಪ್ರೊಸೆಸಿಂಗ್ ಶುಲ್ಕದ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಗ್ಯಾಂಗ್‌ನ ಕೆಲ ಸದಸ್ಯರು ಕಸ್ಟಮ್ಸ್ ಅಧಿಕಾರಿಗಳಂತೆ ನಟಿಸಿ ಬೆದರಿಕೆ ಹಾಕಿದ್ದರು. ಇದರಿಂದ ಹೆದರಿದ ಸಂತ್ರಸ್ತೆ ಸುಮಾರು 7.5 ಲಕ್ಷ ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.

ಪೊಲೀಸ್ ಕಾರ್ಯಾಚರಣೆ ಮತ್ತು ಜಪ್ತಿ:

ವಿಶೇಷ ಪೊಲೀಸ್ ತಂಡವು 150ಕ್ಕೂ ಹೆಚ್ಚು ಮ್ಯೂಲ್ ಬ್ಯಾಂಕ್ ಖಾತೆಗಳು ಹಾಗೂ ಸಿಮ್ ಕಾರ್ಡ್‌ಗಳನ್ನು ಪರಿಶೀಲಿಸಿ, ರಾಜಸ್ಥಾನದ ಜೈಪುರದಲ್ಲಿ ಐವರನ್ನು ಮತ್ತು ಬಿಹಾರದ ಅರ್ವಾಲ್ ಜಿಲ್ಲೆಯಲ್ಲಿ ಪ್ರಮುಖ ರೂವಾರಿಯನ್ನು ಬಂಧಿಸಿದೆ.

ಬಂಧಿತರಿಂದ 22 ಆಂಡ್ರಾಯ್ಡ್ ಮೊಬೈಲ್ ಫೋನ್‌‌ಗಳು, 30 ಮ್ಯೂಲ್ ಸಿಮ್ ಕಾರ್ಡ್‌ಗಳು ಮತ್ತು 5 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 8 ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ಸ್ಥಗಿತಗೊಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *