ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಪ್ರಸಿದ್ಧ ಔಷಧ ಉದ್ಯಮಿ ವಿನೀತ್ ಮನೋಚಾ ಕೊಲೆ ಪ್ರಕರಣದಲ್ಲಿ ಸುಳ್ಳು ಆರೋಪದಡಿ ಜೈಲು ಸೇರಿದ್ದ ಸೊಸೆ ಶಾಲೂ ಮನೋಚಾ ಅವರಿಗೆ ಕೊನೆಗೂ ನ್ಯಾಯ ಸಿಕ್ಕಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಜೈಲಿನಲ್ಲಿ ಕಳೆದ 21 ದಿನಗಳನ್ನು ತಮ್ಮ ಜೀವನದ ಅತ್ಯಂತ ಭೀಕರ ಹಾಗೂ ನೋವಿನ ದಿನಗಳೆಂದು ಬಣ್ಣಿಸಿರುವ ಶಾಲೂ, ‘ಪ್ರತಿ ಕ್ಷಣವೂ ನನ್ನ ಮಗನ ನೆನಪು ನನ್ನನ್ನು ಕಾಡುತ್ತಿತ್ತು’ ಎಂದು ಕಣ್ಣೀರಿಟ್ಟಿದ್ದಾರೆ.
ಕೊಲೆ ಮಾಡಿದ್ದು ಸ್ವಂತ ಮಗನೇ, ಪತ್ನಿಯ ಮೇಲೆ ಆರೋಪ!
ಸೆಪ್ಟೆಂಬರ್ 5 ರಂದು ಉದ್ಯಮಿ ವಿನೀತ್ ಮನೋಚಾ ಅವರನ್ನು ಅವರ ಅಪಾರ್ಟ್ಮೆಂಟ್ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಆರಂಭಿಕ ತನಿಖೆಯಲ್ಲಿ ಪೊಲೀಸರು ಶಾಲೂ ಅವರೇ ಈ ಕೊಲೆಯ ರೂವಾರಿ ಎಂದು ಭಾವಿಸಿ, ಮಾಜಿ ಕೆಲಸಗಾರ ವಿಶಾಲ್ ಗೌತಮ್ ಮತ್ತು ರಾಜಕಿಶೋರ್ ಜೊತೆಗೆ ಅವರನ್ನು ಬಂಧಿಸಿದ್ದರು.
ಆದರೆ ತನಿಖೆ ಮುಂದುವರಿದಂತೆ, ಅಸಲಿ ಸತ್ಯ ಹೊರಬಿದ್ದಿದೆ. ವಿನೀತ್ ಅವರ ಸ್ವಂತ ಮಗ ಹಾಗೂ ಶಾಲೂ ಅವರ ಪತಿಯಾದ ಸುಬ್ರತ್ ಮನೋಚಾನೇ ಈ ಕೊಲೆಯ ಮುಖ್ಯ ರೂವಾರಿ ಎಂಬುದು ತಿಳಿದುಬಂದಿದೆ.
ಆಸ್ತಿ ವಿಚಾರ ಹಾಗೂ ತಂದೆಯ ವೈಯಕ್ತಿಕ ಸಂಬಂಧಗಳ ಕಾರಣದಿಂದ ಆಸ್ತಿ ಕೈತಪ್ಪುವ ಭೀತಿಯಿಂದ ಸುಬ್ರತ್ ಈ ಸಂಚು ರೂಪಿಸಿ, ಪೊಲೀಸರ ಗಮನ ಬೇರೆಡೆ ಸೆಳೆಯಲು ಪತ್ನಿ ಶಾಲೂ ಮೇಲೆಯೇ ಆರೋಪ ಹೊರಿಸಿದ್ದನು.
‘ದೇವರಿಗೂ ಮತ್ತು ನ್ಯಾಯವಾದಿಗೂ ಧನ್ಯವಾದ’
ಜೈಲಿನಿಂದ ಬಿಡುಗಡೆಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಲೂ, “ನನ್ನ ಮಗನನ್ನು ಅಗಲಿ ನಾನು ಒಂದು ಕ್ಷಣವೂ ಇರಲು ಸಾಧ್ಯವಿರಲಿಲ್ಲ. ಜೈಲಿನಲ್ಲಿ ನನಗೆ ನನ್ನ ಮಗನ ಮುಖವೇ ಕಣ್ಣಮುಂದೆ ಬರುತ್ತಿತ್ತು. ನನಗೆ ದೇವರು ಮತ್ತು ನನ್ನ ವಕೀಲ ಶಿವಕಾಂತ್ ಅವರ ಮೇಲೆ ನಂಬಿಕೆ ಇತ್ತು. ಸತ್ಯಕ್ಕೆ ಕೊನೆಗೂ ಜಯ ಸಿಕ್ಕಿದೆ” ಎಂದು ತಿಳಿಸಿದ್ದಾರೆ. ಪತಿ ಸುಬ್ರತ್ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ತಮಗೆ ಸದ್ಯ ಮಾನಸಿಕವಾಗಿ ಚೇತರಿಸಿಕೊಳ್ಳಲು ಕಾಲಾವಕಾಶ ಬೇಕಿದೆ ಎಂದಿದ್ದಾರೆ.
- Kanpur murder case
- Kanpur pharma trader murder
- Shalu Manocha jail statement
- Shalu Manocha released
- Subrat Manocha arrested
- Uttar Pradesh Crime News
- Vineet Manocha murder
- ಆಸ್ತಿಗಾಗಿ ತಂದೆಯ ಕೊಲೆ
- ಉತ್ತರ ಪ್ರದೇಶ ಅಪರಾಧ ಸುದ್ದಿ
- ಕಾನ್ಪುರ ಕೊಲೆ ಪ್ರಕರಣ
- ಜೈಲಿನಿಂದ ಶಾಲೂ ಬಿಡುಗಡೆ
- ವಿನೀತ್ ಮನೋಚಾ ಹತ್ಯೆ
- ಶಾಲೂ ಮನೋಚಾ ಬಿಡುಗಡೆ
- ಸುಬ್ರತ್ ಮನೋಚಾ ಬಂಧನ





Leave a comment