ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ 3ನೇ ಸೆಕ್ಟರ್ನಲ್ಲಿ ಆಟೋ ಚಾಲಕ ಹಾಗೂ ಇಬ್ಬರು ಯುವತಿಯರ ನಡುವೆ ರಸ್ತೆಯಲ್ಲೇ ಉಗ್ರ ಗಲಾಟೆ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡ ಘಟನೆ ವರದಿಯಾಗಿದೆ.
ವಿಡಿಯೋ ವೀಕ್ಷಿಸಿ:
Kalesh b/w a Group of Girls and Auto Driver over Fare issues, HSR Layout Bengaluru pic.twitter.com/gNAxhfVs93
— Ghar Ke Kalesh (@gharkekalesh) September 29, 2026
ಆಟೋ ಪ್ರಯಾಣದ ಬಾಡಿಗೆ (ಫೇರ್) ಮತ್ತು ರೈಡ್ ಬುಕಿಂಗ್-ರದ್ದುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಈ ಗಲಾಟೆ ಆರಂಭವಾಗಿದೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ರಸ್ತೆ ಬದಿಯಲ್ಲಿ ಆಟೋ ಚಾಲಕ ಮತ್ತು ಯುವತಿಯರು ವಾಗ್ವಾದ ನಡೆಸುತ್ತಾ ಪರಸ್ಪರ ತಳ್ಳಾಟ ನಡೆಸಿ ಕೈಕೈ ಮಿಲಾಯಿಸುವುದು ಕಂಡುಬಂದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಸ್ಥಳದಲ್ಲಿದ್ದ ಮತ್ತೊಬ್ಬ ಮಹಿಳೆ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.





Leave a comment