Home ಕ್ರೈಂ ನ್ಯೂಸ್ ಆತ್ಮಹತ್ಯೆ ನಾಟಕ, ಲವ್, ಮತಾಂತರ, ಹೋಮ್‌ಸ್ಟೇನಲ್ಲಿ ಕೊಲೆ: ಪೊಲೀಸರ ಶಂಕೆ ಬೆನ್ನಲ್ಲೇ ಮಗ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ’ ಎಂದ ಮಹಮ್ಮದ್ ಆಸಿಫ್ ತಾಯಿ, ತಂದೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಆತ್ಮಹತ್ಯೆ ನಾಟಕ, ಲವ್, ಮತಾಂತರ, ಹೋಮ್‌ಸ್ಟೇನಲ್ಲಿ ಕೊಲೆ: ಪೊಲೀಸರ ಶಂಕೆ ಬೆನ್ನಲ್ಲೇ ಮಗ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ’ ಎಂದ ಮಹಮ್ಮದ್ ಆಸಿಫ್ ತಾಯಿ, ತಂದೆ!

Share
ತಾಯಿ
Share

ಗುವಾಹಟಿ: ಅಸ್ಸಾಂನ ಗುವಾಹಟಿ ವಿಶ್ವವಿದ್ಯಾಲಯದ 22 ವರ್ಷದ ಸೋಷಿಯಾಲಜಿ ವಿದ್ಯಾರ್ಥಿನಿ ನಿಮಿಷಾ ಠಾಕುರಿಯಾ, ನಗರದ ಹೊರವಲಯದ ಗರಾಲ್‌ನಲ್ಲಿರುವ ಹೋಮ್‌ಸ್ಟೇಯೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸ್ನೇಹಿತ, ಪೇಂಟರ್ ಹಾಗೂ ರ‍್ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಆಸಿಫ್ ಅಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ತಾಯಿ ಮಾತನಾಡಿದ್ದು, ಮಗ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದಿದ್ದಾರೆ.

ಪ್ರಕರಣದ ವಿವರ:

ಶುಕ್ರವಾರ ತಡರಾತ್ರಿ ಹೋಮ್‌ಸ್ಟೇಯಲ್ಲಿದ್ದ ಯುವತಿಯ ಆರೋಗ್ಯ ಸ್ಥಿತಿ ಗಂಭೀರಗೊಂಡಾಗ ಆಕೆಯನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (GMCH) ದಾಖಲಿಸಲಾಯಿತಾದರೂ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಆರೋಪಿ ಆಸಿಫ್ ಆಕೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಆದರೆ, ಗುವಾಹಟಿ ಪಶ್ಚಿಮ ಡಿಸಿಪಿ ಬೋಲಿನ್ ಡಿಯೋರಿ ಈ ಹೇಳಿಕೆಯನ್ನು ತಳ್ಳಿಹಾಕಿದ್ದು, “ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಕೊಲೆ ಪ್ರಕರಣವೆಂದು ಶಂಕಿಸಲಾಗಿದೆ. ಮೃತದೇಹ ಅಥವಾ ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿಲ್ಲ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ” ಎಂದು ಹೇಳಿದ್ದಾರೆ.

“ಅಮ್ಮಾ, ಇವರು ನನ್ನನ್ನು ಕೊಂದುಬಿಡುತ್ತಾರೆ…”

ಸಾವಿಗೂ ಮುನ್ನ ಶುಕ್ರವಾರ ತಡರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಯುವತಿ ತನ್ನ ತಾಯಿಗೆ ಕರೆ ಮಾಡಿ, “ಅಮ್ಮಾ, ಇವರು ನನ್ನನ್ನು ಕೊಂದುಬಿಡುತ್ತಾರೆ… ಕೊಠಡಿಯ ಬಾಗಿಲು ಹಾಕಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾರೆ, ಎದೆಗೆ ಒದ್ದಿದ್ದರಿಂದ ಉಸಿರಾಡಲು ಕಷ್ಟವಾಗುತ್ತಿದೆ” ಎಂದು ಅಳುತ್ತಾ ಹೇಳಿದ್ದಾಳೆ. ತಕ್ಷಣವೇ ಫೋನ್ ಕಡಿತಗೊಂಡಿದೆ. ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ನಡೆಸಲಾಗಿದೆ ಎಂದು ಮೃತ ವಿದ್ಯಾರ್ಥಿನಿಯ ತಂದೆ ಗಂಭೀರ ಆರೋಪ ಮಾಡಿದ್ದಾರೆ.

ಆರೋಪಿಯ ಕುಟುಂಬದ ಪ್ರತಿಕ್ರಿಯೆ:

“ನನ್ನ ಮಗ ಆಕೆಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಶುಕ್ರವಾರ ಆಕೆಯೇ ಕರೆ ಮಾಡಿ ಭೇಟಿಯಾಗಲು ಕೇಳಿದ್ದಳು” ಎಂದು ಆಸಿಫ್ ತಂದೆ ಹೇಳಿದ್ದಾರೆ.

ಆರೋಪಿಯ ತಾಯಿ ಮಾತನಾಡಿ, “ಆಕೆ ಹಿಂದು, ನಾವು ಮುಸ್ಲಿಮರು. ಧಾರ್ಮಿಕ ಭಿನ್ನಾಪ್ರಾಯಗಳ ಕಾರಣ ಈ ಸಂಬಂಧ ಸರಿಯಲ್ಲ ಎಂದು ಹಿಂದೆ ಬುದ್ಧಿವಾದ ಹೇಳಿದ್ದೆ. ಒಂದು ವೇಳೆ ನನ್ನ ಮಗ ತಪ್ಪು ಮಾಡಿದ್ದರೆ ಆತನಿಗೆ ಕಠಿಣ ಶಿಕ್ಷೆಯಾಗಲಿ” ಎಂದು ಕಣ್ಣೀರಿಡುತ್ತಲೇ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *