Home ದಾವಣಗೆರೆ ಹನುಮಾನ್ ಮಂದಿರಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಡಿಜೆ ಹಾಡುಗಳು, ಭಕ್ತಿಗಾನದಿಂದ ತೊಂದರೆ: ದೂರು ಕೊಟ್ಟ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರಿಶ್ ವಿರುದ್ಧ ಕೆಂಡ!
ದಾವಣಗೆರೆಬೆಂಗಳೂರುಸಿನಿಮಾ

ಹನುಮಾನ್ ಮಂದಿರಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಡಿಜೆ ಹಾಡುಗಳು, ಭಕ್ತಿಗಾನದಿಂದ ತೊಂದರೆ: ದೂರು ಕೊಟ್ಟ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರಿಶ್ ವಿರುದ್ಧ ಕೆಂಡ!

Share
ಅಲ್ಲು ಸಿರಿಶ್
Share

ಹೈದರಾಬಾದ್: ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರ ಸಹೋದರ ಹಾಗೂ ನಟ ಅಲ್ಲು ಸಿರಿಶ್ ತಾವು ವಾಸಿಸುವ ವಸತಿ ಸಮುಚ್ಚಯದ ಬಳಿ ಇರುವ ಹನುಮಾನ್ ಮಂದಿರದಲ್ಲಿ ರಾತ್ರಿ ಮತ್ತು ಬೆಳಗಿನ ಜಾವ ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದು, ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಘಟನೆಯ ವಿವರ:

ಅಲ್ಲು ಸಿರಿಶ್ ಅವರು ಹೈದರಾಬಾದ್‌ ಶೇಕ್‌ಪೇಟೆಯ ‘ಅಪರ್ಣ ಒನ್’  ವಸತಿ ಪ್ರದೇಶದಲ್ಲಿ ನೆಲೆಸಿದ್ದಾರೆ. ತಮ್ಮ ನಿವಾಸದ ಪಕ್ಕದಲ್ಲೇ ಇರುವ ವಿನೋಬಾ ನಗರದ ಹನುಮಾನ್ ಮಂದಿರದಲ್ಲಿ ರಾತ್ರಿ 2 ರಿಂದ 3 ಗಂಟೆಯವರೆಗೂ ಹಾಗೂ ಬೆಳಗಿನ ಜಾವ ನಿಗದಿತ ಡೆಸಿಬಲ್ ಮಿತಿಗಿಂತಲೂ ಅತಿಯಾದ ಶಬ್ದದಲ್ಲಿ ಧ್ವನಿವರ್ಧಕಗಳ ಮೂಲಕ ಭಕ್ತಿಗಾನ ಹಾಗೂ ಡಿಜೆ ಹಾಡುಗಳನ್ನು ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಶಬ್ದದಿಂದಾಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ವೃದ್ಧರು, ಸಣ್ಣ ಮಕ್ಕಳು ಹಾಗೂ ಕೆಲಸಕ್ಕೆ ಹೋಗುವ ಉದ್ಯೋಗಿಗಳಿಗೆ ನಿದ್ರೆ ಮಾಡಲು ಸಾಧ್ಯವಾಗದೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಿರಿಶ್ ತಿಳಿಸಿದ್ದಾರೆ.

ಪೋಲಿಸ್ ದೂರು ಮತ್ತು ಎಕ್ಸ್ (X) ಪೋಸ್ಟ್:

ಈ ಸಮಸ್ಯೆ ಕುರಿತು ಆರಂಭದಲ್ಲಿ ಅಲ್ಲು ಸಿರಿಶ್ ಫಿಲ್ಮ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಗಣೇಶ ಚತುರ್ಥಿ ಮತ್ತು ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25 ರವರೆಗೆ ಸಹಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದರು. ಆದರೆ ಸೆಪ್ಟೆಂಬರ್ 25ರ ಗಣೇಶ ವಿಸರ್ಜನೆಯ ನಂತರವೂ ಅತಿಯಾದ ಶಬ್ದದಲ್ಲಿ ಹಾಡುಗಳನ್ನು ಹಾಕುವುದು ಮುಂದುವರಿದಿದ್ದರಿಂದ, ಸಿರಿಶ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಹೈದರಾಬಾದ್ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ಅಲ್ಲು ಸಿರಿಶ್ ಅವರ ಸ್ಪಷ್ಟನೆ:

“ನಾನೂ ಕೂಡ ಧಾರ್ಮಿಕ ನಂಬಿಕೆ ಉಳ್ಳವನು ಮತ್ತು ಹನುಮಂತನ ಭಕ್ತ. ಆದರೆ ತಡರಾತ್ರಿ 2 ಗಂಟೆಗೆ ಡಿಜೆ ಹಾಕಿ ಶಬ್ದ ಮಾಡುವುದು ಭಕ್ತಿಯಲ್ಲ. ನನ್ನ ದೂರು ನಾಗರಿಕ ಪ್ರಜ್ಞೆ ಕುರಿತಾಗಿದೆಯೇ ಹೊರತು ಭಕ್ತಿಯ ವಿರುದ್ಧವಲ್ಲ” ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಪೊಲೀಸರ ಸ್ಪಂದನೆ:

ಸಿರಿಶ್ ಅವರ ಟ್ವೀಟ್‌ಗೆ ತಕ್ಷಣ ಸ್ಪಂದಿಸಿದ ಹೈದರಾಬಾದ್ ಸಿಟಿ ಪೊಲೀಸರು, ಪ್ರಕರಣವನ್ನು ಸ್ಥಳೀಯ ಫಿಲ್ಮ್ ನಗರ ಪೊಲೀಸ್ ಠಾಣೆಗೆ ರವಾನಿಸಿ ಸೂಕ್ತ ನಿಯಮಗಳ ಪ್ರಕಾರ ಪರಿಶೀಲಿಸಲು ಸೂಚಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಹೈದರಾಬಾದ್ ಸಿಟಿ ಲೌಡ್‌ಸ್ಪೀಕರ್ ಕಾಯ್ದೆಯಡಿ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ:

ಅಲ್ಲು ಸಿರಿಶ್ ಅವರ ಈ ದೂರಿನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಎರಡು ಬಗೆಯ ಅಭಿಪ್ರಾಯಗಳು ವ್ಯಕ್ತವಾಗಿವೆ:

ಬೆಂಬಲ: ವಸತಿ ಪ್ರದೇಶಗಳಲ್ಲಿ ತಡರಾತ್ರಿ ಧ್ವನಿವರ್ಧಕಗಳ ಬಳಕೆಗೆ ನಿಷೇಧವಿರಬೇಕು, ಶಬ್ದಮಾಲಿನ್ಯ ತಡೆಯಲು ಎಲ್ಲರಿಗೂ ನಾಗರಿಕ ಪ್ರಜ್ಞೆ ಇರಬೇಕು ಎಂದು ಹಲವು ನೆಟ್ಟಿಗರು ಸಿರಿಶ್ ಪರವಾಗಿ ನಿಂತಿದ್ದಾರೆ.

ವಿರೋಧ: ದೇವಸ್ಥಾನದ ಪ್ರಾರ್ಥನೆಯ ವಿರುದ್ಧ ದೂರು ನೀಡಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಇತರ ಧಾರ್ಮಿಕ ಪ್ರಾರ್ಥನೆಗಳ ಶಬ್ದದ ಕುರಿತು ಏಕ ಮುಖ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles