ಬೆಂಗಳೂರು:ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಅಸಂಸದೀಯ ಹಾಗೂ ಕೀಳುಮಟ್ಟದ ಭಾಷೆ ಪ್ರಯೋಗ ಮಾಡಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ವಿರುದ್ಧ ಕೆಪಿಸಿಸಿ ಆಕ್ರೋಶ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ. ಕೆ. ಹರಿಪ್ರಸಾದ್ ಅವರು, ರಾಜೀವ್ ಚಂದ್ರಶೇಖರ್ ಹಿನ್ನೆಲೆ ಬಿಡಿಸಿ ಹೇಳಬೇಕಿಲ್ಲ ಎಂದು ಕಿಡಿಕಾರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನ್ಯಾಯವಾದಿ ನಾರಿ ಫಾಲ್ಕಿ ಅವರ ಮಾತುಗಳನ್ನು ಉಲ್ಲೇಖಿಸಿ ಮಾತನಾಡಿದ ಬಿ. ಕೆ. ಹರಿಪ್ರಸಾದ್ ಅವರು, “ನಾಗರಿಕರ ಮತಗಳನ್ನು ರಕ್ಷಿಸಬೇಕಾದ ಸ್ವಾಯತ್ತ ಸಂಸ್ಥೆಗಳು ತಮ್ಮ ಅನುಕೂಲಗಳಿಗಾಗಿ ಕರ್ತವ್ಯ ಮರೆತರೆ ಅದು ಸರ್ವಾಧಿಕಾರಕ್ಕಿಂತಲೂ ಅಪಾಯಕಾರಿ. ಕಾನೂನಿನ ಮುದ್ರೆಯ ಹಿಂದೆ ಅಡಗಿಕೊಂಡು ದೇಶವನ್ನೇ ಹಾಳು ಮಾಡುತ್ತವೆ” ಎಂದು ಎಚ್ಚರಿಸಲಾಯಿತು. ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಯ ವಿರುದ್ಧ ಇರುವವರು ರಾಷ್ಟ್ರದ್ರೋಹಿಗಳು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಸಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದ ಹೇಳಿಕೆಯನ್ನು ಬೆಂಬಲಿಸಲಾಯಿತು ಎಂದು ಹೇಳಿದರು.
ಚುನಾವಣಾ ಆಯುಕ್ತರ ಮೇಲೆ ಗಂಭೀರ ಆರೋಪ:
ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಜಿಜಿ ಥಾಮನ್ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಜ್ಞಾನೇಶ್ ಕುಮಾರ್ ಆಮಿಷವೊಡ್ಡಿದ್ದರು ಎಂಬ ಆರೋಪ ಸಣ್ಣ ವಿಚಾರವಲ್ಲ. ಜ್ಞಾನೇಶ್ ಕುಮಾರ್ ಅವರು ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ 10 ತಿಂಗಳಲ್ಲಿ ಅವರ ವಿರುದ್ಧ ಬಂದ 14 ಆಕ್ಷೇಪಣೆಗಳಿಗೆ ಸರಿಯಾದ ಉತ್ತರ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ರಾಜೀವ್ ಚಂದ್ರಶೇಖರ್ ಜಾತಕ ಬಿಡಿಸಿದ ಕಾಂಗ್ರೆಸ್:
ರಾಜೀವ್ ಚಂದ್ರಶೇಖರ್ ಅವರ ರಾಜಕೀಯ ಹಿನ್ನೆಲೆಯನ್ನು ಟೀಕಿಸಿದ ಕಾಂಗ್ರೆಸ್, “ರಾಜ್ಯಸಭೆಗೆ ಆಯ್ಕೆಯಾಗುವಾಗ ಭ್ರಷ್ಟಾಚಾರದಲ್ಲಿ ಮುಳುಗಿದ್ದನ್ನು ದೇಶ ಕಂಡಿದೆ. 2012ರಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದೇ ಅವರು ರಾಜ್ಯಸಭಾ ಸದಸ್ಯರಾಗಿದ್ದರು ಎಂಬುದನ್ನು ಮರೆಯಬಾರದು” ಎಂದಿದೆ. ಅಲ್ಲದೆ, ರಕ್ಷಣಾ ಇಲಾಖೆಯ ಸ್ಟಾಂಡಿಂಗ್ ಸಮಿತಿಯಲ್ಲಿದ್ದಾಗ ಅವರು ಅನೇಕ ಡೀಲ್ ಮಾಡಿದ್ದಾರೆ ಎಂಬ ವಿಚಾರವೂ ಶೀಘ್ರವೇ ಹೊರಬರಲಿದೆ ಎಂದು ತಿಳಿಸಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತು ಸದಸ್ಯರಾದ ರಮೇಶ್ ಬಾಬು, ಮಾಜಿ ಮೇಯರ್ ರಾಮಚಂದ್ರಪ್ಪ ಮತ್ತಿತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.
- Congress vs BJP
- Democracy and Autonomous Institutions
- Election Commission Controversy
- Gyanesh Kumar
- KPCC Press Conference
- Rahul Gandhi
- Rajeev Chandrasekhar
- Ramesh Babu MLC
- ಕಾಂಗ್ರೆಸ್ ಆಕ್ರೋಶ
- ಕೆಪಿಸಿಸಿ ಪತ್ರಿಕಾಗೋಷ್ಠಿ
- ಚುನಾವಣಾ ಆಯೋಗ
- ಜ್ಞಾನೇಶ್ ಕುಮಾರ್
- ನಾರಿ ಫಾಲ್ಕಿ
- ಪ್ರಜಾಪ್ರಭುತ್ವ
- ರಮೇಶ್ ಬಾಬು
- ರಾಜೀವ್ ಚಂದ್ರಶೇಖರ್
- ರಾಜ್ಯಸಭಾ ಚುನಾವಣೆ
- ರಾಜ್ಯಸಭಾ ಚುನಾವಣೆಕೆಪಿಸಿಸಿ ಪತ್ರಿಕಾಗೋಷ್ಠಿ
- ರಾಹುಲ್ ಗಾಂಧಿ





Leave a comment