Home ದಾವಣಗೆರೆ ಪೌರಕಾರ್ಮಿಕರ ಕಣ್ಣೀರಿಗೆ ನ್ಯಾಯ ಸಿಗುತ್ತಾ? ದಾವಣಗೆರೆ ಪಾಲಿಕೆ ನೇಮಕಾತಿಯಲ್ಲಿ ದೊಡ್ಡ ವಂಚನೆ?: ಸಚಿವ ಬಸವಂತಪ್ಪ ಬಿಚ್ಚಿಟ್ಟ ಸತ್ಯ ಇಲ್ಲಿದೆ!
ದಾವಣಗೆರೆಬೆಂಗಳೂರು

ಪೌರಕಾರ್ಮಿಕರ ಕಣ್ಣೀರಿಗೆ ನ್ಯಾಯ ಸಿಗುತ್ತಾ? ದಾವಣಗೆರೆ ಪಾಲಿಕೆ ನೇಮಕಾತಿಯಲ್ಲಿ ದೊಡ್ಡ ವಂಚನೆ?: ಸಚಿವ ಬಸವಂತಪ್ಪ ಬಿಚ್ಚಿಟ್ಟ ಸತ್ಯ ಇಲ್ಲಿದೆ!

Share
ಪೌರಕಾರ್ಮಿಕರ
Share

ದಾವಣಗೆರೆ: ಪೌರಕಾರ್ಮಿಕರ ನೇಮಕಾತಿ ವಿಚಾರದಲ್ಲಿ ವಂಚನೆ ನಡೆಯುತ್ತಿದೆ ಎಂಬ ಸಚಿವ ಕೆ. ಎಸ್. ಬಸವಂತಪ್ಪರ ಮಾತು ಈಗ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ.

ಬಿಜೆಪಿ ಶಾಸಕರು ಆರೋಪ ಮಾಡಿದರೆ ತಳ್ಳಿ ಹಾಕಬಹುದೇನೋ. ಆದರೆ, ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ಆರೋಪ ಮಾಡಿರುವುದು ಕಾಂಗ್ರೆಸ್ ವಲಯದಲ್ಲಿ ಬಿರುಗಾಳಿಗೆ ಕಾರಣವಾಗಿದೆ. ಅದೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಸಮರ್ಥ್ ಶಾಮನೂರು ಸಮ್ಮುಖದಲ್ಲೇ ಆರೋಪ ಮಾಡಿರುವುದರಿಂದ ಇದು ಬಿಜೆಪಿಗೆ ದೊಡ್ಡ ಅಸ್ತ್ರವಾಗುವುದರಲ್ಲಿ ಎರಡು ಮಾತಿಲ್ಲ.

ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವ ಬಿಜೆಪಿಗೆ ಬಸವಂತಪ್ಪರ ಆರೋಪದಿಂದ ಮತ್ತೊಂದು ಬಲ ಸಿಕ್ಕಂತಾಗಿದೆ.

ನಗರದ ಗಾಂಧಿನಗರದಲ್ಲಿ ಭಾನುವಾರ ಮಾದಿಗ ಸಮಾಜ ಹಾಗೂ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಹೃದಯಸ್ಪರ್ಶಿ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ ಬಸವಂತಪ್ಪ ಅವರಂತೂ ಭಾವನಾತ್ಮಕ, ಆಕ್ರೋಶಭರಿತರಾಗಿ ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ.

ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಯಲ್ಲಿ ಈ ಹಿಂದೆಯೂ ಹಣದ ವಹಿವಾಟು ನಡೆದಿರುವ ಬಗ್ಗೆ ಆಗಿನ ಆಯುಕ್ತೆಯಾಗಿದ್ದ ರೇಣುಕಾ ಅವರಿಗೆ ಮನವಿ ಮಾಡಿದ್ದ ಬಸವಂತಪ್ಪ ಸಚಿವರಾದ ಬಳಿಕವೂ ಆರೋಪ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಪೌರಕಾರ್ಮಿಕರು ಕಷ್ಟಪಟ್ಟು ಜೀವನ ಸಾಗಿಸುವವರು. ಇಂಥವರ ನೇಮಕಾತಿಯಲ್ಲಿ ವಂಚನೆ ನಡೆದಿದೆ ಎಂದರೆ ಬೇರೆ ಏನೆಲ್ಲಾ ನಡೆದಿರಬಹುದು ಎಂಬ ಆಕ್ರೋಶವೂ ಕೇಳಿ ಬರುತ್ತಿದೆಯಲ್ಲದೇ, ಪೌರಕಾರ್ಮಿಕರ ನೇಮಕಾತಿ ವಿಚಾರ ಪೌರಕಾರ್ಮಿಕರಿಗೆ ನೋವು ತಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನೇಮಕಾತಿ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಪೌರಕಾರ್ಮಿಕರ ಪರ ನಿಂತಿರುವ ಬಸವಂತಪ್ಪರು ಇಂದು ಆಡಿರುವ ಮಾತುಗಳು ರಾಜ್ಯ ಸರ್ಕಾರಕ್ಕೆ ಮುಖಭಂಗವಾಗುವುದಂತೂ ಸತ್ಯ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles