
SUDDIKSHANA KANNADA NEWS/ DAVANAGERE/ DATE:08-04-2025
ದಾವಣಗೆರೆ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಬರೆದ 19161 ವಿದ್ಯಾರ್ಥಿಗಳಲ್ಲಿ 13308 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಗೆ ಶೇ.69.45 ರಷ್ಟು ಫಲಿತಾಂಶ ಬಂದಿದ್ದು ರಾಜ್ಯದಲ್ಲಿ 20ನೇ ಸ್ಥಾನ ಪಡೆದಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಬಸಪ್ಪ ತಿಳಿಸಿದ್ದಾರೆ.


ವಿಜ್ಞಾನ ವಿಭಾಗದಲ್ಲಿ 11402 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 9451 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 82.89, ವಾಣಿಜ್ಯ ವಿಭಾಗದಲ್ಲಿ 3790 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಈ ಪೈಕಿ 2296 ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ 60.58, ಕಲಾ ವಿಭಾಗದಲ್ಲಿ 3969 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅದರಲ್ಲಿ 1561 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 39.33 ರಷ್ಟು ಫಲಿತಾಂಶ ಪಡೆಯಲಾಗಿದೆ.
ಉತ್ತೀರ್ಣರಾದವರಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಒಟ್ಟಾರೆ 3244 ವಿದ್ಯಾರ್ಥಿಗಳ ಪೈಕಿ 1936 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.59.68 ಮತ್ತು ನಗರ ಪ್ರದೇಶದಲ್ಲಿ 15917 ವಿದ್ಯಾರ್ಥಿಗಳ ಪೈಕಿ 11372 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.71.45 ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಗೆ 69.45 ಹಾಗೂ ರಾಜ್ಯ ಮಟ್ಟದಲ್ಲಿ 20ನೇ ಸ್ಥಾನ ಪಡೆದಿದೆ.