Home ಕ್ರೈಂ ನ್ಯೂಸ್ “ತಂದೆ ಹಲವು ಮಹಿಳೆಯರೊಂದಿಗೆ ಸಂಬಂಧ, ಕೆಟ್ಟ ನಡತೆ ವ್ಯಕ್ತಿಯಾಗಿದ್ದರು: ಕೊಲೆಗೆ ನೀಡಿದ ಕಾರಣ ಬಹಿರಂಗಪಡಿಸಿದ ಕಾನ್ಪುರ ಉದ್ಯಮಿಯ ಮಗ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ತಂದೆ ಹಲವು ಮಹಿಳೆಯರೊಂದಿಗೆ ಸಂಬಂಧ, ಕೆಟ್ಟ ನಡತೆ ವ್ಯಕ್ತಿಯಾಗಿದ್ದರು: ಕೊಲೆಗೆ ನೀಡಿದ ಕಾರಣ ಬಹಿರಂಗಪಡಿಸಿದ ಕಾನ್ಪುರ ಉದ್ಯಮಿಯ ಮಗ!

Share
ತಂದೆ
Share

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಪ್ರಸಿದ್ಧ ಔಷಧ ಉದ್ಯಮಿ ವಿನೀತ್ ಮಿನೋಚಾ (63) ಅವರ ಭೀಕರ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಅವರ ಮಗ ಸುಬ್ರತ್ ಮಿನೋಚಾ, ತಂದೆಯ ಕೊಲೆಯ ಹಿಂದಿನ ಅಸಲಿ ಕಾರಣವನ್ನು ಪೊಲೀಸರ ಹಾಗೂ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾನೆ.

ತಂದೆಗೆ ಹಲವು ಮಹಿಳೆಯರೊಂದಿಗೆ ಅನೈತಿಕ ಸಂಬಂಧಗಳಿದ್ದವು ಹಾಗೂ ಅವರು ಕೆಟ್ಟ ನಡತೆಯ ವ್ಯಕ್ತಿಯಾಗಿದ್ದರು ಎಂದು ಸುಬ್ರತ್ ಆರೋಪಿಸಿದ್ದಾನೆ.

ಸಾಲದ ಹೊರೆ ಮತ್ತು ಆಸ್ತಿಯ ಭಯ:

ಪೋಲಿಸರ ತನಿಖೆಯ ಪ್ರಕಾರ, ಸುಬ್ರತ್ ಸುಮಾರು 20 ಲಕ್ಷ ರೂಪಾಯಿಗೂ ಹೆಚ್ಚು ಸಾಲದಲ್ಲಿದ್ದನು. ತಂದೆ ನೀಡುತ್ತಿದ್ದ ತಿಂಗಳ 40,000 ರೂಪಾಯಿಗಳ ವೆಚ್ಚದ ಹಣ ಆತನ ತಿಂಗಳ ವೆಚ್ಚಗಳಿಗೆ ಸಾಕಾಗುತ್ತಿರಲಿಲ್ಲ. ಇದರ ಜೊತೆಗೆ ತಂದೆ ತನ್ನ ಆಸ್ತಿಯನ್ನು ಬೇರೆ ಯಾವುದೇ ಮಹಿಳೆಯ ಹೆಸರಿಗೆ ಬರೆದುಕೊಡಬಹುದು ಎಂಬ ಭೀತಿಯಿಂದ, ತನ್ನ ಮಾಜಿ ಉದ್ಯೋಗಿ ವಿಶಾಲ್ ಗೌತಮ್ ಹಾಗೂ ಆತನ ಸಹಚರನಿಗೆ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿದ್ದಾನೆ.

ಕೊಲೆಯ ಸಂಚು ಮತ್ತು ಘಟನೆಯ ವಿವರ:

ಸುಮಾರು 3-4 ತಿಂಗಳ ಮುಂಚೆಯೇ ಈ ಕೊಲೆಯ ಸಂಚು ರೂಪಿಸಲಾಗಿತ್ತು. ತಂದೆಯ ಸಾವು ನೈಸರ್ಗಿಕವಾಗಿ ಸಂಭವಿಸಿದೆ ಎಂದು ಬಿಂಬಿಸಲು ಸುಬ್ರತ್ ಯೋಜಿಸಿದ್ದನು. ಇದಕ್ಕಾಗಿ ಮನೆಯ ಕೀಲಿಕೈಯ ಡ್ಯುಪ್ಲಿಕೇಟ್ ಕೀ ಮಾಡಿ ವಿಶಾಲ್‌ಗೆ ನೀಡಿದ್ದನು. ಸೆಪ್ಟೆಂಬರ್ 5ರಂದು ಸಂಚಿನಂತೆ ಮನೆಯೊಳಗೆ ನುಗ್ಗಿದ ಹಂತಕರು, ವಿನೀತ್ ಎಚ್ಚರಗೊಂಡು ಕೂಗಾಡಿದಾಗ ಭಯಬಿದ್ದು ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.

ಪತ್ನಿಯ ಮೇಲೆ ಗೂಬೆ ಕೂರಿಸುವ ಯತ್ನ:

ಕೊಲೆಯ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದರೆ ತನ್ನ ಪತ್ನಿ ಶಾಲೂ ಹೆಸರನ್ನು ಹೇಳುವಂತೆ ಸುಬ್ರತ್ ಸುಪಾರಿ ಹಂತಕರಿಗೆ ಸೂಚಿಸಿದ್ದನು. ಆರಂಭದಲ್ಲಿ ಪೊಲೀಸರು ಶಾಲೂ ಅವರನ್ನೇ ಪ್ರಮುಖ ಆರೋಪಿ ಎಂದು ಭಾವಿಸಿ ಬಂಧಿಸಿದ್ದರು. ಆದರೆ ಪೊಲೀಸರು ಸುಬ್ರತ್ ಮತ್ತು ಹಂತಕ ವಿಶಾಲ್ ನಡುವಿನ ಸುಮಾರು 258 ಕರೆಗಳ ವಿವರ (CDR) ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತೀವ್ರ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

ತಮ್ಮ ತಪ್ಪಿನ ಅರಿವಾಗಿ ಸುಬ್ರತ್ ಕೊನೆಗೆ ತಾನೇ ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರಸ್ತುತ ಪೊಲೀಸರು ಸುಬ್ರತ್‌ನನ್ನು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles