Home ದಾವಣಗೆರೆ ನೆರೆ ರಾಜ್ಯದಲ್ಲಿ ಹಾಲಿನ ದರ ಏರಿಕೆ, ಕರ್ನಾಟಕದಲ್ಲೂ ನಂದಿನಿ ಹಾಲಿನ ಬೆಲೆ, ವಿದ್ಯುತ್ ದರ ಹೆಚ್ಚಳ ಸನ್ನಿಹಿತ?: ಡಿ. ಕೆ. ಶಿವಕುಮಾರ್ ಸುಳಿವು!
ದಾವಣಗೆರೆಬೆಂಗಳೂರು

ನೆರೆ ರಾಜ್ಯದಲ್ಲಿ ಹಾಲಿನ ದರ ಏರಿಕೆ, ಕರ್ನಾಟಕದಲ್ಲೂ ನಂದಿನಿ ಹಾಲಿನ ಬೆಲೆ, ವಿದ್ಯುತ್ ದರ ಹೆಚ್ಚಳ ಸನ್ನಿಹಿತ?: ಡಿ. ಕೆ. ಶಿವಕುಮಾರ್ ಸುಳಿವು!

Share
ದರ
Share

ಬೆಂಗಳೂರು: ನೆರೆಯ ತಮಿಳುನಾಡಿನಲ್ಲಿ ಹಾಲಿನ ದರ ಲೀಟರ್‌ಗೆ ₹11 ಹೆಚ್ಚಳವಾಗಿರುವುದರಿಂದ ಗಡಿ ಭಾಗದ ಹಾಲು ಹೊರರಾಜ್ಯಕ್ಕೆ ಸರಬರಾಜಾಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಹಾಲಿನ ದರ ಏರಿಕೆ ಮಾಡುವ ಕುರಿತು ಶಾಸಕರು ಅಧಿವೇಶನದಲ್ಲಿ ಗಮನ ಸೆಳೆದಿದ್ದಾರೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.

ಬೆಳಗಾವಿ, ಕಲಬುರ್ಗಿ ಹಾಗೂ ಚಿತ್ರದುರ್ಗ ವಿಭಾಗಗಳಲ್ಲಿ ನಡೆಸಿದ ಬರ ಅಧ್ಯಯನ ಸಭೆಗಳಲ್ಲಿ ಈ ಕುರಿತು ಚರ್ಚೆಯಾಗಿದೆ. ಮಲೆನಾಡು ಭಾಗದಲ್ಲಿ ಮೇವಿನ ಕೊರತೆ ತೀವ್ರವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ನರೇಗಾ ಯೋಜನೆಯ ಬದಲಿಗೆ ‘ವಿಬಿ ಗ್ರಾಮ್ ಜಿ’ ಯೋಜನೆ ಜಾರಿಗೆ ತಂದಿದ್ದು, ಯೋಜನೆಯ ವೆಚ್ಚ ಹಂಚಿಕೆ ಅನುಪಾತವನ್ನು 90:10 ರಿಂದ 60:40 ಕ್ಕೆ ಬದಲಾಯಿಸಿದೆ. ಆದಾಗ್ಯೂ ರಾಜ್ಯ ಸರ್ಕಾರ ಅದನ್ನು ಒಪ್ಪಿಕೊಂಡು ಕೆಲಸ ಮಾಡುತ್ತಿದೆ ಎಂದರು.

ವಿದ್ಯುತ್ ಖರೀದಿ ಸಂಕಷ್ಟ:

ರಾಜ್ಯದಲ್ಲಿ ಪ್ರತಿ ವರ್ಷ ವಿದ್ಯುತ್ ಬೇಡಿಕೆ 10% ಹೆಚ್ಚುತ್ತಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್‌ಗೆ ಅವಕಾಶ ಸಿಗದ ಕಾರಣ ನವೀಕರಿಸಬಹುದಾದ ಸೌರ ಇಂಧನದತ್ತ ಗಮನಹರಿಸಲಾಗಿದೆ. ಪ್ರಸ್ತುತ ವಿದ್ಯುತ್ ಸಚಿವ ಕೆ.ಜೆ. ಜಾರ್ಜ್ ಅವರು ಪ್ರತಿ ಯೂನಿಟ್‌ಗೆ ₹22 ನೀಡಿ ವಿದ್ಯುತ್ ಖರೀದಿಸುವ ಸವಾಲಿನ ಸ್ಥಿತಿಯಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ತುಂಗಭದ್ರಾ ಹೂಳು ಹಾಗೂ ಕಸ್ತೂರಿ ರಂಗನ್ ವರದಿ:

ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ನೀರು ಹೂಳು ತುಂಬಿದ್ದು, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಸರ್ಕಾರದ ಸಮ್ಮತಿಯೊಂದಿಗೆ ಸಮಾನಂತರ ಜಲಾಶಯ ನಿರ್ಮಾಣ ಮತ್ತು ಹೂಳು ತೆಗೆಯಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

ಇದೇ ವೇಳೆ ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಮಾಡದೇ ಶಾಸಕರು, ವಿರೋಧ ಪಕ್ಷಗಳು ಹಾಗೂ ಸ್ಥಳೀಯ ರೈತರ ಅಭಿಪ್ರಾಯ ಸಂಗ್ರಹಿಸಲಾಗಿದೆ. “ನಾನು ಜನ್ಮತಃ ಕೃಷಿಕ, ವೃತ್ತಿಯಲ್ಲಿ ಉದ್ಯಮಿ. ರೈತರ ಹಿತ ಕಾಯುವುದು ನನ್ನ ಆದ್ಯತೆ” ಎಂದು ಅವರು ಪ್ರತಿಪಾದಿಸಿದರು.

“ಪ್ರಧಾನಮಂತ್ರಿಗಳು ಬರದ ಬಗ್ಗೆ ಮೂರು ತಿಂಗಳ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದು ಯಾಕೆ? ರೈತರು ಬಿತ್ತನೆ ಮಾಡಬೇಡಿ, ನಾವು ಹೇಳುವವರೆಗೆ ಕಾಯಿರಿ ಎಂದು ನಾನು ಮನವಿ ಮಾಡಿದೆ. ಕೆಲವರು ಟೀಕೆ ಮಾಡಿದರು. ಕೆಲವು ರೈತರು ಬಿತ್ತನೆ ಮಾಡಿದರು. ಬಳ್ಳಾರಿ, ಕೊಪ್ಪಳ ಭಾಗವು ಅನ್ನದ ತಟ್ಟೆಯಾಗಿದೆ. ತುಂಗಭದ್ರಾ ಅಣೆಕಟ್ಟಿನಲ್ಲಿ 30 ಟಿಎಂಸಿ ನೀರಿನಷ್ಟು ಹೂಳು ತುಂಬಿದೆ. ಈ ಬಗ್ಗೆ ಚರ್ಚೆಗೆ ಚಂದ್ರಬಾಬು ನಾಯ್ಡು ಅವರು ಚರ್ಚೆಗೆ ಸಮಯ ನೀಡಲಿಲ್ಲ. ನಂತರ ಕೇಂದ್ರ ಸಚಿವ ಸಿ ಆರ್ ಪಾಟೀಲ್ ಅವರ ಮುಂದೆ ಪ್ರಸ್ತಾಪ ಮಾಡಿದೆ. ಆಗ ಸೋಮಣ್ಣ, ಬೊಮ್ಮಾಯಿ ಅವರು ಸಹಕಾರ ನೀಡಿದರು. ತುಂಗಭದ್ರಾ ಅಣೆಕಟ್ಟು ಗೇಟ್ ಉದ್ಘಾಟನೆ ಮಾಡುವಾಗ ತೆಲಂಗಾಣ, ಆಂಧ್ರಪ್ರದೇಶ ಕರ್ನಾಟಕದ ಮುಖ್ಯಮಂತ್ರಿಗಳು ಸೇರಿ ಸಮಾನಂತರ ಜಲಾಶಯ ನಿರ್ಮಾಣ, ಹೂಳು ತೆಗೆಯುವ ಬಗ್ಗೆ ಚರ್ಚೆ ಮಾಡಿ ಒಮ್ಮತದ ತೀರ್ಮಾನಕ್ಕೆ ಬಂದವು. ನಾನು ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗಾಗಿ ಈ ತೀರ್ಮಾನ ಮಾಡಿದೆವು. ನಾನು ಈ ತೀರ್ಮಾನ ಮಾಡಿದ್ದು ನನ್ನ ರಿಯಲ್ ಎಸ್ಟೇಟ್ ವ್ಯವಹಾರಕ್ಕಾ?” ಎಂದು ತಿರುಗೇಟು ನೀಡಿದರು

“ನಾನು ಬೆಂಗಳೂರು ಜಿಲ್ಲೆಯವನು, ನನ್ನ ಆಸ್ತಿ ಬೆಂಗಳೂರು ಜಿಲ್ಲೆಯಲ್ಲಿದೆ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ವ್ಯವಹಾರಸ್ಥ. ನಾನು ವ್ಯವಹಾರ ಮಾಡಬಾರದೇ? ನಾನು ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ. ಕಾಲೇಜಿನಲ್ಲಿದ್ದಾಗಲೇ ವಿದ್ಯಾರ್ಥಿ ನಾಯಕನಾಗಿದ್ದಾಗ ನನಗೆ ಪಕ್ಷ ಟಿಕೆಟ್ ನೀಡಿತು. ಅಲ್ಲಿಂದ ಈ ಸ್ಥಾನಕ್ಕೆ ಬಂದಿರುವೆ. ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಾನು ವಿಧಾನಸೌಧದ ನನ್ನ ಕಚೇರಿಯಲ್ಲಿ ಕೂತು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಅಧಿಕಾರಿಗಳ ಮೂಲಕ ತೀರ್ಮಾನ ಮಾಡಬಹುದಾಗಿತ್ತಲ್ಲವೇ? ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಅವರು ಇದನ್ನು ತಿರಸ್ಕರಿಸಿದ್ದಾರೆ. ನಾನು ಇದು ಏಕಾಂಗಿ ನಿರ್ಧಾರವಾಗಬಾರದು ಎಂದು ಶಾಸಕರು, ಜನರ ಅಭಿಪ್ರಾಯ ಸಂಗ್ರಹಿಸಿದೆ. ವಿರೋಧ ಪಕ್ಷಗಳ ನಾಯಕರೂ ಉತ್ತಮ ಸಲಹೆ ನೀಡಿದೆ. ನಾನು ಯಾರ ಜತೆ ಚರ್ಚೆ ಮಾಡಿದೆ ರೈತರೊಟ್ಟಿಗೆ. ಅರಣ್ಯಾಧಿಕಾರಿಗಳು ಆ ಭಾಗದ ರೈತರಿಗೆ ಕಿರುಕುಳ ನೀಡಬೇಡಿ ಎಂದು ಅಲ್ಲಿನ ಜನರ ಪರವಾಗಿ ನಿಂತು ಅವರಿಗೆ ಧೈರ್ಯ ತುಂಬಿದೆ” ಎಂದರು.

Share

Leave a comment

Leave a Reply

Your email address will not be published. Required fields are marked *