SUDDIKSHANA KANNADA NEWS/ DAVANAGERE/ DATE:15-09-2023
– ಗಿರೀಶ್ ಕೆ ಎಂ
ಷೇರು ಮಾರುಕಟ್ಟೆ (Stock market) ಯಲ್ಲಿ ಗೂಳಿಯ ನಾಗಾಲೋಟ ಇಂದು ಸಹಾ ಮುಂದುವರೆದಿದೆ. ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್, ಐಟಿ, ಆಟೋ, ಫಾರ್ಮಾ, ಕನ್ಸೂಮರ್ ಡ್ಯೂರಬಲ್ಸ್ ಮತ್ತು ಹೆಲ್ತ್‌ಕೇರ್ ಷೇರುಗಳಲ್ಲಿ ಭಾರೀ ಏರಿಕೆ ಕಂಡು ಬಂತು.
ಈ ಸುದ್ದಿಯನ್ನೂ ಓದಿ:
ಹಳ್ಳಿಗಳಿಗೂ ಲಗ್ಗೆ ಇಡಲಿದೆ ಎಲೆಕ್ಟ್ರಿಕಲ್ ಪ್ಯಾಸೆಂಜರ್ ವಾಹನ: ಬೇಡಿಕೆ ಅಂದುಕೊಂಡಂತೆ ಟಾಟಾ ಮೋಟಾರ್ಸ್ (Tata Motors)ಗೆ ಬರುತ್ತದೆಯಾ…?
ದಿನದ ವಹಿವಾಟಿನಲ್ಲಿ ನಿಫ್ಟಿ ಮತ್ತೊಮ್ಮೆ ಸಾರ್ವಕಾಲಿಕ ಎತ್ತರ ದಾಖಲಿಸಿತು. ಏರುಗತಿಯಲ್ಲಿ ವಹಿವಾಟು ಆರಂಭಿಸಿದ ನಿಫ್ಟಿ ದಾಖಲೆಯ ಗರಿಷ್ಠ ಮಟ್ಟ 20,222.45 ಕ್ಕೆ ತಲುಪಿತು. ನಂತರ ಮಾರಾಟದ ಒತ್ತಡಕ್ಕೆ ಒಳಗಾಗಿ ಇಳಿಕೆಯತ್ತ ಸಾಗಿತ್ತು.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ +89.25 (0.44%) ಅಂಕ ಏರಿಕೆ ಕಂಡು 20,192.35 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ +319.63 (0.47%) ಅಂಕ ಏರಿಕೆ ಕಂಡು 67,838.63 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು BAJAJ-AUTO, HEROMOTOCO, M&M, GRASIM, HCLTECH ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
BPCL, HINDUNILVR, ASIANPAINT, BRITANNIA,TATACONSUM ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.05 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ +164.42 ಕೋಟಿ ನಿವ್ವಳ ಖರೀದಿ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ. +1,938.57 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.