Home ಕ್ರೈಂ ನ್ಯೂಸ್ ಅಣ್ಣ-ತಂಗಿ ಪವಿತ್ರ ಬಾಂಧವ್ಯಕ್ಕೆ ಕಳಂಕ: 3 ವರ್ಷ ರಾಖಿ ಕಟ್ಟಿದ ‘ಅಣ್ಣ’ನ ಜೊತೆಯೇ ಪತ್ನಿ ಎಸ್ಕೇಪ್! ಪತಿ ತೆಗೆದುಕೊಂಡ ನಿರ್ಧಾರವೇನು?
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಅಣ್ಣ-ತಂಗಿ ಪವಿತ್ರ ಬಾಂಧವ್ಯಕ್ಕೆ ಕಳಂಕ: 3 ವರ್ಷ ರಾಖಿ ಕಟ್ಟಿದ ‘ಅಣ್ಣ’ನ ಜೊತೆಯೇ ಪತ್ನಿ ಎಸ್ಕೇಪ್! ಪತಿ ತೆಗೆದುಕೊಂಡ ನಿರ್ಧಾರವೇನು?

Share
ಪತ್ನಿ
Share

ಈಸಾ ನಗರ (ಉತ್ತರ ಪ್ರದೇಶ):

ಮಾನವೀಯ ಸಂಬಂಧಗಳ ಮೇಲಿನ ನಂಬಿಕೆಯನ್ನೇ ಕಸಿಯುವಂತಹ ಹಾಗೂ ಅಣ್ಣ-ತಂಗಿಯರ ಪವಿತ್ರ ಬಾಂಧವ್ಯವನ್ನು ಹೀಯಾಳಿಸುವಂತಹ ವಿಚಿತ್ರ ಹಾಗೂ ಘೋರ ಘಟನೆಯೊಂದು ಉತ್ತರ ಪ್ರದೇಶದ ಲಖಿಂಪುರ್ ಖೀರಿ ಜಿಲ್ಲೆಯ ಈಸಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮೂರು ವರ್ಷಗಳಿಂದ ‘ಅಣ್ಣ’ ಎಂದು ಕರೆದು ರಾಖಿ ಕಟ್ಟುತಿದ್ದ ವ್ಯಕ್ತಿಯೊಂದಿಗೇ ಮಹಿಳೆಯೊಬ್ಬಳು ತನ್ನ ಗಂಡ ಮತ್ತು ಎಂಟು ವರ್ಷದ ಮಗನನ್ನು ತೊರೆದು ಓಡಿಹೋಗಿದ್ದಾಳೆ.

10 ವರ್ಷಗಳ ಪ್ರೇಮ ವಿವಾಹಕ್ಕೆ ಕಹಿ ಅಂತ್ಯ

ಸ್ಥಳೀಯ ಪಹಾರ್‌ಗಾವ್ ನಿವಾಸಿ ಶಿವಾನಿ ದುಬೆ ಎಂಬ ಮಹಿಳೆ ಸುಮಾರು 10 ವರ್ಷಗಳ ಹಿಂದೆ ಪ್ರದ್ಯುಮ್ ಸಿಂಗ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಎಂಟು ವರ್ಷದ ಮುದ್ದಾದ ಗಂಡು ಮಗನಿದ್ದಾನೆ. ಸಾಂಸಾರಿಕ ಜೀವನ ಸುಖಕರವಾಗಿಯೇ ಸಾಗುತ್ತಿತ್ತು.

‘ಸ್ವಂತ ಅಣ್ಣನಿಲ್ಲ’ ಎಂದು ನಾಟಕ: ಸ್ನೇಹಿತನ ಎಂಟ್ರಿ

ಪ್ರದ್ಯುಮ್ ಸಿಂಗ್ ಅವರ ಆಪ್ತ ಸ್ನೇಹಿತ ಸುಮಿತ್ ಅಗರ್ವಾಲ್ ಎಂಬಾತ ಆಗಾಗ ಮನೆಗೆ ಬಂದು ಹೋಗುತ್ತಿದ್ದನು. ಈ ಸಂದರ್ಭದಲ್ಲಿ ಶಿವಾನಿ ಹಾಗೂ ಸುಮಿತ್ ನಡುವೆ ಆಪ್ತತೆ ಬೆಳೆದಿದೆ. ತನಗೆ ಸ್ವಂತ ಸಹೋದರರಿಲ್ಲ ಎಂದು ಹೇಳಿಕೊಂಡಿದ್ದ ಶಿವಾನಿ, ಕಳೆದ ಮೂರು ವರ್ಷಗಳಿಂದ ಪ್ರತೀವರ್ಷ ರಾಖಿ ಹಬ್ಬದಂದು ಸುಮಿತ್‌ಗೆ ರಾಖಿ ಕಟ್ಟಿ, ಅಣ್ಣ-ತಂಗಿಯರಂತೆ ನಟಿಸಿ ಪತಿಯನ್ನೂ ಸೇರಿದಂತೆ ಇಡೀ ಸಮಾಜವನ್ನು ನಂಬಿಸಿದ್ದಳು.

ರಾಖಿ ಹಬ್ಬ ಮುಗಿದ ವಾರಕ್ಕೇ ದಿಢೀರ್ ಪಲಾಯನ

ತಮ್ಮಿಬ್ಬರ ನಡುವೆ ಕೇವಲ ಅಣ್ಣ-ತಂಗಿಯ ಬಾಂಧವ್ಯವಿದೆ ಎಂದು ಪತಿ ಪ್ರದ್ಯುಮ್ ಸಿಂಗ್ ಕಣ್ಣುಮುಚ್ಚಿ ನಂಬಿದ್ದರು. ಆದರೆ, ಈ ವರ್ಷ ರಾಖಿ ಹಬ್ಬ ಮುಗಿದ ಕೇವಲ ಒಂದೇ ವಾರದಲ್ಲಿ ಶಿವಾನಿ, ತನ್ನ ‘ಅಣ್ಣ’ ಸುಮಿತ್ ಅಗರ್ವಾಲ್ ಜೊತೆ ಏಕಾಏಕಿ ಮನೆ ಬಿಟ್ಟು ಪರಾರಿಯಾಗಿದ್ದಾಳೆ.

ಓಡಿಹೋದ ಈ ಜೋಡಿ ನೇರವಾಗಿ ಈಸಾ ನಗರ ಪೊಲೀಸ್ ಠಾಣೆಗೆ ತೆರಳಿ, ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು ಒಟ್ಟಿಗೆ ಬಾಳಲು ಬಯಸಿದ್ದೇವೆ, ಹೀಗಾಗಿ ನಮಗೆ ರಕ್ಷಣೆ ನೀಡಬೇಕು ಎಂದು ಅರ್ಜಿಸಲ್ಲಿಸಿದೆ.

ಪತಿಯ ಆಘಾತ ಹಾಗೂ ದಿಟ್ಟ ನಿರ್ಧಾರ

ಘಟನೆಯ ಕುರಿತು ಮಾಹಿತಿ ತಿಳಿದ ಪೊಲೀಸರು ಪತಿ ಪ್ರದ್ಯುಮ್ ಸಿಂಗ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ತನ್ನ ನಂಬಿಕೆಗೆ ಮೋಸ ಮಾಡಿ, ಹೆತ್ತ ಮಗನನ್ನು ನಿರ್ದಯವಾಗಿ ತೊರೆದು ಹೋದ ಪತ್ನಿಯ ನಡವಳಿಕೆಯಿಂದ ಆಘಾತಗೊಂಡ ಪ್ರದ್ಯುಮ್, “ನನ್ನನ್ನು ಹಾಗೂ ಮಗನನ್ನು ತೊರೆದು ಹೋದ ಆಕೆ ಇನ್ನು ನನಗೆ ಬೇಡ” ಎಂದು ಸ್ಪಷ್ಟಪಡಿಸಿದ್ದಾರೆ. ಆಕೆಗೆ ಕಾನೂನಾತ್ಮಕವಾಗಿ ವಿಚ್ಛೇದನನೀಡಿ, ಮಗನೊಂದಿಗೆ ಹೊಸ ಜೀವನ ಸಾಗಿಸುವುದಾಗಿ ಹೇಳಿ ವಾಪಸ್ ಬಂದಿದ್ದಾರೆ.

ಸಹೋದರತ್ವದ ಪವಿತ್ರ ಭಾವನೆಯನ್ನು ಸ್ವಾರ್ಥಕ್ಕಾಗಿ ಬಳಸಿ ವಂಚಿಸಿದ ಈ ಘಟನೆ ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles