ದಾವಣಗೆರೆ: ಈ ಬಾರಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನನ್ನ ಜನುಮದಿನವನ್ನು ಅದ್ಧೂರಿಯಾಗಿ ಆಚರಿಸಬೇಡಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮನವಿ ಮಾಡಿದ್ದಾರೆ.
ಸೆಪ್ಟಂಬರ್ 22ರಂದು ಜನುಮದಿನ ಇದೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳು ಜನುಮದಿನವನ್ನು ಆಚರಿಸಲು ಹೋಗಬೇಡಿ. ಸಾಧ್ಯವಾದಷ್ಟು ಸಂಕಷ್ಟದಲ್ಲಿರುವವರಿಗೆ ನೆರವಾಗಿ ಎಂದು ಸಂದೇಶ ನೀಡಿದ್ದಾರೆ.
ಜನರು ಕಷ್ಟದ ಪರಿಸ್ಥಿತಿಯಲ್ಲಿರುವಾಗ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಳ್ಳುವುದು ಸರಿಯಲ್ಲ ಎಂಬುದು ನನ್ನ ಭಾವನೆ. ಈ ಕಾರಣಕ್ಕಾಗಿಯೇ ಈ ಬಾರಿ ಜನುಮದಿನ ಅದ್ಧೂರಿಯಾಗಿ ಆಚರಿಸಿಕೊಳ್ಳದಿರಲು ಹಾಗೂ ಆಚರಿಸದಿರುವಂತೆ ಈಗಾಗಲೇ ಮನವಿ ಮಾಡಿದ್ದೇನೆ. ಅನಗತ್ಯ ಖರ್ಚು ಮಾಡದೇ ಸಮಾಜಮುಖಿ ಕಾರ್ಯಗಳಿಗೆ ಸದ್ವಿನಿಯೋಗಿಸಿ. ಜನುಮದಿನಕ್ಕೆ ಹರಿದು ಬರುವ ಶುಭಾಶಯಗಳು, ಹಾರೈಕೆಗಳು, ಆಶೀರ್ವಾದಗಳೇ ನನಗೆ ಶ್ರೀರಕ್ಷೆ ಎಂದು ಸಚಿವರು ಹೇಳಿದ್ದಾರೆ.
ನಗರದ ಪ್ರಮುಖ ರಸ್ತೆಗಳು, ಬೀದಿಗಳು ಹಾಗೂ ಮನೆಗಳ ಮೇಲೆ ದೊಡ್ಡ ದೊಡ್ಡ ಬ್ಯಾನರ್, ಬಂಟಿಂಗ್ಸ್ ಅಳವಡಿಸಬೇಡಿ. ಅದ್ಧೂರಿ ಕಾರ್ಯಕ್ರಮ ಆಯೋಜಿಸಬೇಡಿ. ಸಂಭ್ರಮಾಚರಣೆ ಮಾಡಬೇಡಿ ಎಂಬುದು ನನ್ನ ಕಳಕಳಿಯ ಮನವಿ. ಕಷ್ಟದಲ್ಲಿರುವ ರೈತರು ಹಾಗೂ ಜನರ ಜೊತೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ಸಾಮಾಜಿಕ ಕಳಕಳಿಯೂ ಹೌದು. ಯಾವುದೇ ಕಾರಣಕ್ಕೂ ಅಭಿಮಾನಿಗಳು ಜನುಮದಿನ ಸಡಗರ, ಸಂಭ್ರಮದಿಂದ ಆಚರಿಸಬೇಡಿ. ನಿಮ್ಮೆಲ್ಲರ ಸಹಕಾರ ಕೋರುತ್ತೇನೆ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮನವಿ ಮಾಡಿದ್ದಾರೆ.
- Birthday Appeal
- Davangere District Incharge Minister
- Davangere News
- Karnataka Drought
- Karnataka Politics
- Mines and Geology Minister
- No Grand Birthday Celebration
- SS Mallikarjun
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕೀಯ
- ಗಣಿ ಮತ್ತು ಭೂ ವಿಜ್ಞಾನ ಸಚಿವರು
- ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ
- ದಾವಣಗೆರೆ ಸುದ್ದಿ
- ಬರ ಪರಿಸ್ಥಿತಿ
- ಸಮಾಜಮುಖಿ ಕಾರ್ಯ
- ಹುಟ್ಟುಹಬ್ಬ ಆಚರಣೆ





Leave a comment