ಬೆಂಗಳೂರು:‘ಬಿಗ್ ಬಾಸ್’ ಕನ್ನಡ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಿವೇದಿತಾ ಗೌಡ ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ತಮ್ಮ ವೆಕೇಷನ್ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸ ಎಂದರೆ ಅಪಾರ ಇಷ್ಟ ಪಡುವ ನಿವೇದಿತಾ, ಆಗಾಗ ವಿದೇಶಿ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಶ್ರೀಲಂಕಾ ಪ್ರವಾಸ ಮುಗಿಸಿದ್ದ ಅವರು, ಈಗ ಅಮೆರಿಕದ ನೆವಾಡಾ ರಾಜ್ಯದ ವಿಶ್ವಪ್ರಸಿದ್ಧ ‘ಲಾಸ್ ವೇಗಾಸ್’ ನಗರಕ್ಕೆ ಭೇಟಿ ನೀಡಿದ್ದಾರೆ.
ಲಾಸ್ ವೇಗಾಸ್ನ ಪ್ರಸಿದ್ಧ ಪ್ರವಾಸಿ ತಾಣಗಳು ಹಾಗೂ ಸ್ವಿಮ್ಮಿಂಗ್ ಪೂಲ್ ಬಳಿ ಬೋಲ್ಡ್ ಮತ್ತು ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡಿರುವ ನಿವೇದಿತಾ, ಅವುಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟೂ-ಪೀಸ್ ಹಾಗೂ ವಿಭಿನ್ನ ಶೈಲಿಯ ಡ್ರೆಸ್ಗಳಲ್ಲಿ ಕಾಣಿಸಿಕೊಂಡಿರುವ ಅವರ ಈ ಫೋಟೋಗಳು ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.
ಅಷ್ಟೇ ಅಲ್ಲದೆ, ಪ್ರವಾಸದ ಭಾಗವಾಗಿ ಅರಿಝೋನಾದ ಗ್ರಾಂಡ್ ಕ್ಯಾನ್ಯನ್ನಲ್ಲಿ ಹೆಲಿಕಾಪ್ಟರ್ ರೈಡ್ ಮಾಡಿ ರೋಮಾಂಚನ ಅನುಭವಿಸಿದ್ದಾರೆ. ಅಲ್ಲಿನ ಕೊಲೊರಾಡೋ ನದಿ ಮತ್ತು ಹೂವರ್ ಡ್ಯಾಮ್ಗಳ ಸುಂದರ ಏರಿಯಲ್ ವ್ಯೂ ಕಣ್ತುಂಬಿಕೊಂಡಿರುವ ವಿಡಿಯೋ ಹಾಗೂ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಅವರ ಈ ಬೋಲ್ಡ್ ಲುಕ್ ಹಾಗೂ ಟ್ರಾವೆಲ್ ವೈಬ್ಸ್ಗೆ ‘ಸ್ಪೈಸಿ ಕ್ವೀನ್’, ‘ಬ್ಯೂಟಿಫುಲ್ ನಿವಿ’ ಎಂದೆಲ್ಲಾ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.





Leave a comment