Home ದಾವಣಗೆರೆ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ ಚುನಾವಣೆ: 3 ಸ್ಥಾನ ಗೆದ್ದ ಎಬಿವಿಪಿ, ಸ್ವತಂತ್ರ ಅಭ್ಯರ್ಥಿಗೆ ಭರ್ಜರಿ ಜಯ!
ದಾವಣಗೆರೆಬೆಂಗಳೂರು

ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ ಚುನಾವಣೆ: 3 ಸ್ಥಾನ ಗೆದ್ದ ಎಬಿವಿಪಿ, ಸ್ವತಂತ್ರ ಅಭ್ಯರ್ಥಿಗೆ ಭರ್ಜರಿ ಜಯ!

Share
ಎಬಿವಿಪಿ
Share

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (DUSU) 2026ರ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಪ್ರಮುಖ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ಉಪಾಧ್ಯಕ್ಷ ಸ್ಥಾನವನ್ನು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಮಾಜಿ ಎನ್‌ಎಸ್‌ಯುಐ (NSUI) ಸದಸ್ಯ ದೀಪಾಂಶು ಶೋಕೀನ್ ಐತಿಹಾಸಿಕವಾಗಿ ಗೆದ್ದುಕೊಂಡಿದ್ದಾರೆ.

ಒಟ್ಟು 20 ಸುತ್ತುಗಳ ಮತ ಎಣಿಕೆಯ ನಂತರ ಫಲಿತಾಂಶ ಘೋಷಣೆಯಾಗಿದೆ. ಎಬಿವಿಪಿಯ ಯಶ್ ದಬಾಸ್ 24,576 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಎನ್‌ಎಸ್‌ಯುಐನ ವಿಜಯ್ ಶಂಕರ್ ಮೀನಾ 22,523 ಮತಗಳನ್ನು ಪಡೆದು ಸೋಲನುಭವಿಸಿದರು. ಕಾರ್ಯದರ್ಶಿ ಸ್ಥಾನವನ್ನು ಎಬಿವಿಪಿಯ ರಿಯಾ ಛಾವ್ಡಿ (21,650 ಮತಗಳು) ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಲಕ್ಷ್ಯ ರಾಜ್ ಸಿಂಗ್ (16,615 ಮತಗಳು) ಗೆದ್ದುಕೊಂಡಿದ್ದಾರೆ.

ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬಂದಿದ್ದು, ಪಕ್ಷೇತರ ಅಭ್ಯರ್ಥಿ ದೀಪಾಂಶು ಶೋಕೀನ್ 30,615 ಮತಗಳನ್ನು ಪಡೆದು ಬೃಹತ್ ಜಯ ದಾಖಲಿಸಿದ್ದಾರೆ. ಎಬಿವಿಪಿಯ ಇಶು ಮೌರ್ಯ 16,910 ಮತ ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಫಲಿತಾಂಶದ ನಂತರ ಯಾವುದೇ ವಿಜಯೋತ್ಸವ ರ‍್ಯಾಲಿಗಳನ್ನು ನಡೆಸದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆ. ಗೆಲುವಿನ ನಂತರ ಮಾತನಾಡಿದ ನೂತನ ಅಧ್ಯಕ್ಷ ಯಶ್ ದಬಾಸ್, ‘ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸುವುದು ನಮ್ಮ ಮೊದಲ ಆದ್ಯತೆ’ ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles