SUDDIKSHANA KANNADA NEWS/ DAVANAGERE/ DATE:16-03-2025
ದಾವಣಗೆರೆ: ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನ್ಯಾಮತಿ ಎಸ್ ಬಿ ಐ ಬ್ಯಾಂಕ್ ನಲ್ಲಿ 13 ಕೋಟಿ ರೂಪಾಯಿಗೂ ಹೆಚ್ಚು ಲೂಟಿ ಮಾಡಿದ್ದ ಗ್ಯಾಂಗ್ ಮತ್ತೆ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದಿದ್ದು ರಾತ್ರಿ ನಡೆದ ಕಾರ್ಯಾಚರಣೆಯೇ ರೋಚಕ. ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದ ಆರೋಪಿಗಳನ್ನು ಸೆರೆ ಹಿಡಿದಿದ್ದೇಗೆ? ರಾತ್ರಿ ಏನಾಯ್ತು ಎಂಬ ಕುರಿತ ಕಂಪ್ಲೀಟ್ ಡಿಟೈಲ್ಸ್.
ನ್ಯಾಮತಿ ಪೊಲೀಸ್ ನಿರೀಕ್ಷಕರು ಶನಿವಾರ ರಾತ್ರಿ 10.25ರ ಸುಮಾರಿನಲ್ಲಿ ವಿಶೇಷ ಕರ್ತವ್ಯದ ಮೇಲೆ ಹರಿಹರ ಟೌನ್ ನಲ್ಲಿದ್ದರು. ಈ ವೇಳೆ ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ ಮತ್ತು ಸವಳಂಗ ರಸ್ತೆಯಲಿ ಉತ್ತರ ಪ್ರದೇಶದ ನೋಂದಣಿ ಸಂಖ್ಯೆ ಇರುವ ಎರಡು ಕಾರುಗಳು ವೇಗವಾಗಿ ಬಂದಿವೆ. ಸುಮಾರು 7 ರಿಂದ 8 ಜನ ಹೊರ ರಾಜ್ಯದ ಆಸಾಮಿಗಳು ಮಾರಕಾಸ್ತ್ರಗಳೊಂದಿಗೆ ಬ್ಯಾಂಕ್ ದರೋಡೆ ಮಾಡಲು ಹೊಂಚು ಹಾಕುತ್ತಿರುವುದಾಗಿ ಮಾಹಿತಿ ಸಿಕ್ಕಿದೆ.
ಕೂಡಲೇ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹಾಗೂ ಚನ್ನಗಿರಿ ಡಿವೈಎಸ್ಪಿ ಅವರಿಗೆ ನ್ಯಾಮತಿ ಪೊಲೀಸ್ ನಿರೀಕ್ಷಕರು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಕಂಟ್ರೋಲ್ ರೂಂ ದಾವಣಗೆರೆ ಅವರು ಜಿಲೆಯ
ಎಲ್ಲೆಡೆ ನಾಕಾಬಂದಿಯನ್ನು ಹಾಕಿ ಸಿಬ್ಬಂದಿಯವರನ್ನು ನೇಮಿಸಿ ವಾಹನ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.
ಅಧಿಕಾರಿಗಳು ತಮ್ಮ ತಮ್ಮ ಠಾಣಾ ಸರಹದ್ದಿನಲಿ ರೌಂಡ್ ಮಾಡುವಂತೆ ಸೂಚಿಸಲಾಗಿದೆ. ಹೊನ್ನಾಳಿ ಪೊಲೀಸ್ ಇನ್ ಸ್ಪೆಕ್ಟರ್ ಅವರು ನಾಯಕನಹಟ್ಟಿ ಜಾತ್ರಾ ಬಂದೋಬಸ್ತ್ ಕರ್ತವ್ಯಕ್ಕೆ ಹೋಗಿದ್ದರಿಂದ ಚನ್ನಗಿರಿ ಎ ಎಸ್ ಪಿ ಅವರ ಮೌಖಿಕ
ಆದೇಶದಂತೆ ಹೆಚ್ಚುವರಿಯಾಗಿ ಹೊನ್ನಾಳಿ ಠಾಣೆಯ ಪ್ರಭಾರದಲಿದ್ದರಿಂದ ಕೂಡಲೇ ನಾನು ಹೊನ್ನಾಳಿ ಪೊಲೀಸ್ ಠಾಣೆ ಠಾಣಾಧಿಕಾರಿಗಳಿಗೆ ಹಾಗೂ ನ್ಯಾಮತಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಠಾಣಾ ಸರಹದ್ದಿನಲಿ, ನಾಕಾಬಂದಿ
ಕರ್ತವ್ಯಕ್ಕೆ ಸಿಬ್ಬಂಧಿಯವರನ್ನು ಶಸ್ತ್ರಸಜ್ಜಿತವಾಗಿ ಕಳುಹಿಸುವಂತೆ ತಿಳಿಸಿದ್ದಾರೆ.
ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಕಳ್ಳತನವಾಗಿದ್ದ ಬ್ಯಾಂಕ್ ದರೋಡೆಯ ಪ್ರಕರಣದ ವಿಶೇಷ ಕರ್ತವ್ಯದಲ್ಲಿರುವ ಪಿಎಸ್ಐ ಸಂಜೀವ್ ಕುಮಾರ್, ಪಿಎಸ್ಐ ಸಾಗರ್ ಅತ್ತಾರ್ ವಾಲ್ ಮತ್ತು ದಾವಣಗೆರೆ ಡಿಸಿಆರ್ ಬಿ ಸಿಬ್ಬಂದಿ ಹಾಗೂ ಹೆಡ್ ಕಾನ್ ಸ್ಟೇಬಲ್ ಗಳಾದ ಮಜೀದ್, ರಾಘವೆಂದ್ರ, ಆಂಜೀನಪ್ಪ, ಮಾರುತಿ, ಶಿವರಾಜ್ ಅವರಿಗೆ ಮಾಹಿತಿ ನೀಡಲಾಗಿದೆ.
ಕೂಡಲೇ ತಮ್ಮ ತಮ್ಮ ಖಾಸಗಿ ವಾಹನದಲಿ ಹೊನ್ನಾಳಿ ಕಡೆಗೆ ಬರುವಂತೆ ತಿಳಿಸಿದ್ದಾರೆ. ಇಲಾಖೆ ಜೀಪ್ ನಲ್ಲಿ ಸಿಬ್ಬಂದಿಯೊಂದಿಗೆ ನ್ಯಾಮತಿ ಪೊಲೀಸ್ ನಿರೀಕ್ಷಕರು ಹೊರಟಿದ್ದಾರೆ. ಸುಮಾರು ಮಧ್ಯ ರಾತ್ರಿ 1 ಗಂಟೆ ಸಮಯದಲಿ,, ಹೆಚ್. ಕಡದಕಟ್ಟೆ ಗ್ರಾಮದ ಸಮೀಪ ಹೊನ್ನಾಳ್ಳಿ-ನ್ಯಾಮತಿ ಮುಖ್ಯ ರಸ್ತೆಯಲ್ಲಿ ಹಾಕಿದ್ದ ಚೆಕ್ ಪೋಸ್ಟ್ ಬಳಿ ಬಂದಿದ್ದಾರೆ.
ಹೊನ್ನಾಳಿ ಠಾಣೆಯ ಹೆಡ್ ಕಾನ್ ಸ್ಟೇಬಲ್ ಬಸವರಾಜ್ ಮತ್ತು ರಾಜಶೇಖರ್ ಅವರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು, ಪಿಎಸ್ ಐ ಸಂಜೀವ್ ಕುಮಾರ್ ಅವರೂ ಅಲ್ಲಿಯೇ ನಿಂತು ವಾಹನಗಳ ತಪಾಸಣೆ ಮಾಡುತ್ತಿದ್ದರು. ಹೊನ್ನಾಳಿ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಮಾಡುವಂತೆ ತಿಳಿಸಿದ್ದಾರೆ.
ಭಾನುವಾರ ಬೆಳ್ಳಂಬೆಳಿಗ್ಗೆ 1.35ರ ಸುಮಾರಿನಲ್ಲಿ ಹೊನ್ನಾಳಿ ಕಡೆಯಿಂದ ಅತೀವೇಗವಾಗಿ ಬರುತ್ತಿದ್ದ ಎರಡು ಕಾರುಗಳನ್ನು ಚೆಕ್ ಪೋಸ್ಟ್ ನಲ್ಲಿದ್ದ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರೂ ಎರಡು ಕಾರಿನಲ್ಲಿ ಬಂದವರು ಜೋರಾಗಿ ವಾಹನ ಓಡಿಸಿದ್ದಾರೆ. ಪೊಲೀಸರು ತಪಾಸಣೆಗೆ ನಿಲ್ಲಿಸುವಂತೆ ಹೇಳಿದರೂ ಜೋರಾಗಿ ನ್ಯಾಮತಿ ಕಡೆಗೆ ಕಾರುಗಳು ಹೋಗಿವೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪೊಲೀಸ್ ಜೀಪ್ ಅಡ್ಡ ನಿಲ್ಲಿಸಿ ಕಾರುಗಳನ್ನು ನಿಲ್ಲಿಸುವಂತೆ ಸೂಚಿಸಿದರೂ ಕಾರನ್ನು ನಿಲ್ಲಿಸದೇ ಜೀಪ್ ನ ಪಕ್ಕದಿಂದ ನ್ಯಾಮತಿ ಕಡೆಗೆ ಹೋಗಿದ್ದಾರೆ.
ಕೂಡಲೇ ಹೊನ್ನಾಳಿ ಬಸ್ ನಿಲ್ದಾಣದ ಬಳಿ ಇದ್ದ ಪಿ ಎಸ್ ಐ ಸಂಜೀವ್ ಹಾಗೂ ತಂಡದವರನ್ನು ನ್ಯಾಮತಿ ಕಡೆಗೆ ಬರುವಂತೆ ತಿಳಿಸಿ ಸಂಜೀವ್ ಕುಮಾರ್ ಅವರು ಸಿಬ್ಬಂದಿಯವರೊಡನೆ ಜೀಪ್ ನಲ್ಲಿ ಕಾರು ಬೆನ್ನತ್ತಿ ಹೋಗಿದ್ದಾರೆ. 1.40ರ ಸುಮಾರಿನಲ್ಲಿ ಅರಬಘಟ್ಟೆ ಗ್ರಾಮದ ಕ್ರಾಸ್ ಬಳಿ ಎರಡು ಕಾರುಗಳು ಸೊರಟೂರು ಗ್ರಾಮದ ರಸ್ತೆಗೆ ತಿರುಗಿಕೊಂಡು ಹೋದಾಗ ಜೀಪ್ ನಲ್ಲಿ. ಓವರ್ ಟೇಕ್ ಮಾಡಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಎರಡು ಕಾರುಗಳನ್ನು ನಿಲ್ಲಿಸಿ ಅದರಲ್ಲಿದ್ದ 7 ರಿಂದ 8 ಮಂದಿ ಕಾರಿನಿಂದ ಇಳಿದು ರಸ್ತೆಯ ಎರಡು ಬದಿಯಲ್ಲಿನ ಜಮೀನಿನಲ್ಲಿ ಓಡಿ ಹೋಗಲು ಪ್ರಾರಂಭಿಸಿದ್ದಾರೆ.
ಪಿಎಸ್ಐ ಸಂಜೀವ್ ಕುಮಾರ್ ತಂಡದವರು ಸೇರಿ ಬೆನ್ನತ್ತಿದಾಗ ಮೂವರು ಆಸಾಮಿಗಳನ್ನು ಹಿಡಿದುಕೊಂಡಿದ್ದು, ಉಳಿದವರು ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ, ಇನ್ ಸ್ಪೆಕ್ಟರ್ ಮತ್ತು ಪಿಸಿ ಆನಂದ್ ರವರು ಒಬ್ಬನನ್ನು ಬೆನ್ನತ್ತಿ ಹೋಗಿದ್ದಾರೆ. ಏಕಾಏಕಿ ಆತನ ಕೈಯಲ್ಲಿದ್ದ ಮಚ್ಚಿನಿಂದ ಆನಂದ ಅವರ ಮೇಲೆ ಹಲೆ ಮಾಡಲು ಬಂದಾಗ ನನ್ನ ಬಳಿ ಇದ್ದ ಪಿಸ್ತೂಲ್ ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಕೂಗಿ ಹೇಳಿದರು. ಮಾತು ಕೇಳದೆ ಪುನಃ ಆರೋಪಿಯು ತನ್ನ ಕೈಯಲ್ಲಿದ್ದ ಮಚ್ಚಿನಿಂದ ಠಾಣಾ ಸಿಬ್ಬಂದಿ ಆನಂದ ಎಡಗೈಗೆ ಹೊಡೆದಿದ್ದಾನೆ ಎಂದು ಸಂಜೀವ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಆನಂದ್ ಕೆಳಗೆ ಬಿದ್ದಿದ್ದಾರೆ. ಆಗ ಆರೋಪಿಯು ಕೆಳಗೆ ಬಿದ್ದ ಆನಂದನ ಮೇಲೆ ಮತ್ತೆ ಮಚ್ಚಿನಿಂದ ಹಲ್ಲೆ ಮಾಡಲು ಬಂದಾಗ, ಇನ್ ಸ್ಪೆಕ್ಟರ್ ತನ್ನ ಹಾಗೂ ಸಿಬ್ಬಂದಿ ಆತ್ಮರಕ್ಷಣೆಗಾಗಿ ಪಿಸ್ತೂಲ್ ನಿಂದ ಆರೋಪಿಯ ಎಡ ಕಾಲಿಗೆ ಗುಂಡು ಹಾರಿಸಿದಾಗ ಆರೋಪಿಯು ನೆಲಕ್ಕೆ ಬಿದ್ದಿದ್ದಾನೆ. ಕೂಡಲೇ ನಾನು ಹೋಗಿ ನೋಡಿದಾಗ ಆರೋಪಿಯ ಎಡ ಕಾಲಿಗೆ ಗಾಯವಾಗಿದೆ. ಸಿಬ್ಬಂದಿ ಆನಂದ್ ಎಡ ಕೈಯನ ತೋಳಿನ ಬಳಿ ರಕ್ತಗಾಯವಾಗಿತ್ತು. ಆರೋಪಿಯ ಹೆಸರು, ವಿಳಾಸ ಕೇಳಲಾಗಿ ಗುಡ್ಡು ಯಾನೆ ಗುಡ್ಡು ಕಾಲಿಯಾ ಎಂದು ತಿಳಿದು ಬಂದಿದೆ. ಈತ ಹಣ್ಣಿನ ವ್ಯಾಪಾರಿ. ಉತ್ತರ ಪ್ರದೇಶದ ಬಾದಾಯ್ ಜಿಲ್ಲೆಯ ದಾಟಗಂಜ್ ನ ಕಕ್ರಾಳ ಗ್ರಾಮದವನು ಎಂದು ತಿಳಿದು ಬಂದಿದೆ.
ಕೂಡಲೇ ಪೊಲೀಸ್ ಜೀಪ್ ನಲ್ಲಿ ಗಾಯಗೊಂಡ ಆರೋಪಿ ಮತ್ತು ಠಾಣಾ ಸಿಬ್ಬಂದಿ ಆನಂದ್ ಅವರನ್ನು ನ್ಯಾಮತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೂಡಲೇ ಪಿಸ್ತೂಲ್ ನಿಂದ ಗುಂಡು ಹಾರಿಸಿದ ಬಗ್ಗೆ ಇಲಾಖಾ ಮೇಲಾಧಿಕಾರಿಗಳು ಮತ್ತು ದಾವಣಗೆರೆ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ಸ್ಥಳಕ್ಕೆ ಸೋಕೋ ಅಧಿಕಾರಿಗಳನ್ನು ಮತ್ತು ಡಾಗ್ ಸ್ಯಾಡ್ ನ್ನು ಕಳುಹಿಸಿಕೊಡುವಂತೆ ಇನ್ ಸ್ಪೆಕ್ಟರ್ ಮನವಿ ಮಾಡಿದರು.