Home ಉದ್ಯೋಗ ವಾರ್ತೆ ಐಟಿ ಕ್ಷೇತ್ರದಲ್ಲಿ ಮತ್ತೊಂದು ಆಘಾತ: ಅಡಿಡಾಸ್ ಇಂಡಿಯಾ ಟೆಕ್ ಹಬ್‌ನಲ್ಲಿ ಶೇ. 50 ರಷ್ಟು ಉದ್ಯೋಗಿಗಳ ವಜಾ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಐಟಿ ಕ್ಷೇತ್ರದಲ್ಲಿ ಮತ್ತೊಂದು ಆಘಾತ: ಅಡಿಡಾಸ್ ಇಂಡಿಯಾ ಟೆಕ್ ಹಬ್‌ನಲ್ಲಿ ಶೇ. 50 ರಷ್ಟು ಉದ್ಯೋಗಿಗಳ ವಜಾ!

Share
ಉದ್ಯೋಗಿ
Share

ನವದೆಹಲಿ: ಜಾಗತಿಕ ಕ್ರೀಡಾ ಉಡುಪು ಹಾಗೂ ಪಾದರಕ್ಷೆ ತಯಾರಿಕಾ ದೈತ್ಯ ಸಂಸ್ಥೆಯಾದ ‘ಅಡಿಡಾಸ್’ (Adidas) ಭಾರತದಲ್ಲಿರುವ ತನ್ನ ಪ್ರಮುಖ ತಂತ್ರಜ್ಞಾನ ಕೇಂದ್ರದಲ್ಲಿ (India Tech Hub) ಭಾರಿ ಪ್ರಮಾಣದ ಉದ್ಯೋಗ ಕಡಿತವನ್ನು ಘೋಷಿಸಿದೆ. ಹರಿಯಾಣದ ಗುರುಗ್ರಾಮದಲ್ಲಿರುವ ಅಡಿಡಾಸ್ ಸಂಸ್ಥೆಯ ಟೆಕ್ ಹಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇಕಡಾ 50 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.

ಯಾರಿಗೆಲ್ಲಾ ತೊಂದರೆ?

ಗುರುಗ್ರಾಮ ಕೇಂದ್ರದಲ್ಲಿ ಒಟ್ಟು 700ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಸುಮಾರು 350 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳು ಈ ಲೇಆಫ್‌ಗೆ ಬಲಿಯಾಗಿದ್ದಾರೆ. ಮುಖ್ಯವಾಗಿ ಸಾಫ್ಟ್‌ವೇರ್ ಇಂಜಿನಿಯರ್‌ಗಳು, ಡೇಟಾ ಸೈಂಟಿಸ್ಟ್‌ಗಳು ಮತ್ತು ಡೇಟಾ ಇಂಜಿನಿಯರ್‌ ಹುದ್ದೆಯಲ್ಲಿದ್ದ ಪ್ರಮುಖ ತಾಂತ್ರಿಕ ಸಿಬ್ಬಂದಿಗೆ ಈ ಕಡಿತವು ಹೊಡೆತ ನೀಡಿದೆ.

ಸೆಪ್ಟೆಂಬರ್ 15ರ ಟೌನ್ ಹೌಸ್ ಸಭೆಯಲ್ಲಿ ಕಹಿ ಸುದ್ದಿ:

ವರದಿಗಳ ಪ್ರಕಾರ, ಸೆಪ್ಟೆಂಬರ್ 15 ರಂದು ನಡೆದ ಕಂಪನಿಯ ಟೌನ್ ಹೌಸ್ ಸಭೆಯಲ್ಲಿ ಆಡಳಿತ ಮಂಡಳಿಯು ಈ ಕಠಿಣ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿತು. ಉದ್ಯೋಗಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ:

ಮೊದಲ ಗುಂಪು: ಸಭೆಯ ದಿನವೇ ನೇರವಾಗಿ ಎಕ್ಸಿಟ್ (ವಜಾ) ಪತ್ರಗಳನ್ನು ಸ್ವೀಕರಿಸಿದೆ.

ಎರಡನೇ ಗುಂಪು: ಡಿಸೆಂಬರ್ 15 ರವರೆಗೆ ಕಂಪನಿಯಲ್ಲಿ ಮುಂದುವರಿದು, ಜಾಗತಿಕ ಕೇಂದ್ರಗಳಿಗೆ ತಮ್ಮ ಕೆಲಸದ ಕಾರ್ಯಭಾರವನ್ನು (Handover) ಹಸ್ತಾಂತರಿಸಲು ಸೂಚಿಸಲಾಗಿದೆ. ಡಿಸೆಂಬರ್ 15ರ ಒಳಗಾಗಿ ಕಂಪನಿಯೊಳಗೆ ಬೇರೆ ಯಾವುದೇ ಹುದ್ದೆ ಸಿಗದಿದ್ದಲ್ಲಿ, ಅದೇ ಅವರ ಕೊನೆಯ ಕೆಲಸದ ದಿನವಾಗಲಿದೆ.

ಅಡಿಡಾಸ್ ನೀಡಿದ ಸ್ಪಷ್ಟನೆ:

ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಅಡಿಡಾಸ್ ವಕ್ತಾರರು, “ಬದಲಾಗುತ್ತಿರುವ ತಾಂತ್ರಿಕ ವಾತಾವರಣ ಮತ್ತು ಉದ್ಯೋಗದ ಅಗತ್ಯಗಳಿಗೆ ಅನುಗುಣವಾಗಿ ಸಂಸ್ಥೆಯ ಕಾರ್ಯಾಚರಣೆಯನ್ನು ಸರಳೀಕರಣಗೊಳಿಸಲು ಈ ‘ಕಠಿಣ ನಿರ್ಧಾರ’ ತೆಗೆದುಕೊಳ್ಳಲಾಗಿದೆ. ತೆರವುಗೊಳ್ಳುತ್ತಿರುವ ಉದ್ಯೋಗಿಗಳ ಕೊಡುಗೆಗೆ ನಾವು ಕೃತಜ್ಞರಾಗಿದ್ದು, ಅವರಿಗೆ ಅಗತ್ಯವಿರುವ ಪರಿಹಾರ ಮತ್ತು ನೆರವನ್ನು ನೀಡಲಿದ್ದೇವೆ” ಎಂದು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *