SUDDIKSHANA KANNADA NEWS/ DAVANAGERE/ DATE:13-03-2025
ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸ್ ಗಳಾದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ, ವೃತ್ತಿಪರ ಸ್ನಾತಕೋತ್ತರ ಪದವಿಗಳ ಕೆಲ ಕೋರ್ಸುಗಳಿಗೆ ಕೌನ್ಸಿಲಿಂಗ್ ತಡವಾಗಿ ಪ್ರಾರಂಭವಾಗಿರುತ್ತದೆ.
ಹಿಂದಿನ ಶೈಕ್ಷಣಿಕ ವರ್ಷದ ಫಲಿತಾಂಶ ತಡವಾಗಿ ನೀಡಿದ ಕಾರಣ ಇಲಾಖೆಯಿಂದ ನಿಗಧಿಪಡಿಸಿದ ಅವಧಿಯೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರುವುದಿಲ್ಲ.
ಈ ಕೋರ್ಸುಗಳಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ, ಅರೆಅಲೆಮಾರಿ ವಿದ್ಯಾರ್ಥಿಗಳಿಂದ, ಶುಲ್ಕ ಮರುಪಾವತಿ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಮಾರ್ಚ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಅಧಿಕಾರಿ ಗಾಯತ್ರಿ ತಿಳಿಸಿದ್ದಾರೆ.