ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕೊಲೆ ಮಾಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ, ದಂಡ

On: March 13, 2025 12:24 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:13-03-2025

ಶಿವಮೊಗ್ಗ: ಕೊಲೆ ಆರೋಪಿ ನಗರದ ರೈಲ್ವೇ ಕಾಲೋನಿಯ ಅನಿಲ್‌ಕುಮಾರ್‌ನು ತಪ್ಪಿತಸ್ಥನೆಂದು ತೀರ್ಮಾನಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ ನಾಯಕ ಎಂ. ಅವರು ಐಪಿಸಿ ಕಲಂ 302 ಅಡಿಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.50 ಸಾವಿರ ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ ಪುನಃ 6 ತಿಂಗಳ ಶಿಕ್ಷೆ ವಿಧಿಸಿ ಆದೇಶಿಸಿ ತೀರ್ಪು ನೀಡಿದ್ದಾರೆ.

14-01-2021 ರಂದು ರಾತ್ರಿ 11.15 ರ ಸಮಯದಲ್ಲಿ ಶಿವಮೊಗ್ಗದ ಬಾಪೂಜಿ ನಗರ 1ನೇ ಮುಖ್ಯ ರಸ್ತೆಯ ಗಂಗಾಮತ ಹಾಸ್ಟೆಲ್ ಹತ್ತಿರ ಸಂತೋಷ ಎಂಬಾತನು ಅವೆಂಜರ್ ಬೈಕಿನಲ್ಲಿ ಕುಳಿತಿದ್ದು ಆರೋಪಿ
ಅನಿಲ್‌ಕುಮಾರ್ ಈತನೇ ಕಿರಣ ಎಂದು ತಪ್ಪಾಗಿ ಭಾವಿಸಿ ಮಚ್ಚಿನಿಂದ ಸಂತೋಷನ ಮುಖಕ್ಕೆ ಬಲವಾಗಿ ಹೊಡೆದಿದ್ದರಿಂದ ಸಂತೋಷನು ಬೈಕಿನಿಂದ ಕೆಳಕ್ಕೆ ಬೀಳುತ್ತಾನೆ. ಆಗ ಆತ ಕಿರಣ ಅಲ್ಲವೆಂದು ಗೊತ್ತಾಗಿಯೂ
ಆ ವ್ಯಕ್ತಿಯನ್ನು ಬಿಟ್ಟರೆ ತನಗೆ ತೊಂದರೆ ಎಂದು ಯೋಚಿಸಿ ಪುನಃ ಅದೇ ಮಚ್ಚಿನಿಂದ ಸಂತೋಷನ ಮುಖ, ಕೈ, ಎದೆ ಮೇಲೆ ಬಲವಾಗಿ ಹೊಡೆದು ಕೊಲೆ ಮಾಡಿ ಹತ್ಯೆ ಮಾಡಿದ ಕೃತ್ಯವು ತನಿಖೆಯಲ್ಲಿ ಸ್ಪಷ್ಟವಾಗಿತ್ತು.

ಈ ಮೇರೆಗೆ ತನಿಖೆಯನ್ನು ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಎಂ. ಎಂ. ರವರು ಮಂಡಿಸಿದ ವಾದವನ್ನು ನ್ಯಾಯಾಲಯವು ಪುರಸ್ಕರಿಸಿ ಆರೋಪಿತನು ಐಪಿಸಿ ಕಲಂ 302 ಅಡಿಯಲ್ಲಿ ಎಸಗಿರುವ ಆರೋಪವು ದೃಢಪಟ್ಟಿರುತ್ತದೆ ಎಂದು ಪರಿಗಣಿಸಿ ಆರೋಪಿತನನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ ಎಂ ಇವರು ಪ್ರಕರಣದ ಆರೋಪಿ ಅನಿಲ್‌ಕುಮಾರ್ ಬಿನ್ ಗುರಪ್ಪ ಈತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.50 ಸಾವಿರ ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಪುನಃ 6 ತಿಂಗಳ ಶಿಕ್ಷೆ ವಿಧಿಸಿ ಜ.31 ರಂದು ಆದೇಶಿಸಿ ತೀರ್ಪು ನೀಡಿರುತ್ತಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಾವಣಗೆರೆ

ದಾವಣಗೆರೆಯಲ್ಲಿ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ ಆತ್ಮಹತ್ಯೆ : ಪಿಎಂ, ಸಿಎಂ ಸೇರಿ ಹಲವರಿಗೆ ಬರೆದಿರುವ ಪತ್ರದಲ್ಲೇನಿದೆ?

ಕೋವಿಡ್ ಲಸಿಕೆಯಿಂದ ಹೃದಯಾಘಾತ: ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರಂತೆ ಸಿಎಂ ಸಿದ್ದರಾಮಯ್ಯ!

ಸಿದ್ದರಾಮಯ್ಯ

ಸಿದ್ದರಾಮಯ್ಯರ ದುರಂಹಕಾರಿ ವರ್ತನೆಗೆ ಸ್ವಾಭಿಮಾನಿ ಅಧಿಕಾರಿ ಸ್ವಯಂನಿವೃತ್ತಿಗೆ ನಿರ್ಧಾರವಂತೆ!

ಕಾನೂನು

ತಕ್ಷಣ ಭೂಸ್ವಾಧೀನ ಕಾನೂನು ಹಿಂಪಡೆಯಿರಿ: ಸಿಎಂಗೆ ಪಂಡಿತಾರಾಧ್ಯ ಶ್ರೀಗಳ ಬಹಿರಂಗ ಮನವಿ

ಜುಲೈ 5ಕ್ಕೆ ಸಿದ್ಧಣ್ಣ ಜನುಮದಿನ: ಸರ್ವ ಜನಾಂಗದ ಪ್ರೀತಿಯ ಸರದಾರ.. ಬಿಜೆಪಿ ಕಟ್ಟಾಳು, ನಿಷ್ಠಾವಂತ ಡಾ. ಜಿ.ಎಂ. ಸಿದ್ದೇಶ್ವರ: ಬಾಡದ ಆನಂದರಾಜ್

ಈ ರಾಶಿಯವರಿಗೆ ಉನ್ನತ ಸ್ಥಾನ ಇದೆ ಆದರೆ ಪವರ್ ಇಲ್ಲ, ಈ ರಾಶಿಯ ದಂಪತಿಗಳಿಗೆ ಎಲ್ಲಾ ಇದ್ದರೂ ಮನಶಾಂತಿ ಇಲ್ಲ

Leave a Comment