Home ಕ್ರೈಂ ನ್ಯೂಸ್ ಮಸೂದ್ ಅಜರ್ ಮೇಲಿನ ಇನಾಮು ಹೆಚ್ಚಳ ಪಾಕಿಸ್ತಾನದ ಹೊಸ ಗಿಮಿಕ್: ಭಾರತ ತೀವ್ರ ತರಾಟೆ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಸೂದ್ ಅಜರ್ ಮೇಲಿನ ಇನಾಮು ಹೆಚ್ಚಳ ಪಾಕಿಸ್ತಾನದ ಹೊಸ ಗಿಮಿಕ್: ಭಾರತ ತೀವ್ರ ತರಾಟೆ

Share
ಮಸೂದ್ ಅಜರ್
Share

ನವದೆಹಲಿ:ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ತಲೆಗೆ ಪಾಕಿಸ್ತಾನವು ಇನಾಮಿನ ಮೊತ್ತವನ್ನು ಹೆಚ್ಚಿಸಿರುವುದನ್ನು ಭಾರತ ತೀವ್ರವಾಗಿ ತಖಂಡಿಸಿದ್ದು, ಇದೊಂದು “ಗಿಮಿಕ್” ಹಾಗೂ “ಪೊಳ್ಳು ಘೋಷಣೆ” ಎಂದು ಕರೆದಿದೆ.

ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (FIA) ತನ್ನ ಹೊಸ ಉಗ್ರರ ಪಟ್ಟಿಯಲ್ಲಿ ಅಜರ್ ಮೇಲಿನ ಇನಾಮನ್ನು 50 ಲಕ್ಷ ಪಾಕಿಸ್ತಾನಿ ರೂಪಾಯಿಯಿಂದ 70 ಲಕ್ಷಕ್ಕೆ ಏರಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಂಧೀರ್ ಜೈಸ್ವಾಲ್, “ಇಂತಹ ನಾಟಕಗಳು ಹಾಗೂ ಜನರನ್ನು ಮೂರ್ಖರನ್ನಾಗಿಸುವ ಯತ್ನಗಳು ಪಾಕಿಸ್ತಾನಕ್ಕೆ ಹೊಸದೇನಲ್ಲ. ಜಗತ್ತನ್ನು ವಂಚಿಸುವ ಬದಲು ಉಗ್ರರ ವಿರುದ್ಧ ಪಾಕಿಸ್ತಾನ ಪ್ರತ್ಯಕ್ಷ ಹಾಗೂ ಕಾಂಕ್ರೀಟ್ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿದ್ದಾನೆ ಎಂದು ಪಾಕಿಸ್ತಾನ ಪ್ರತಿಪಾದಿಸುತ್ತಿದ್ದರೂ, ಆತ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲೇ ಅಡಗಿದ್ದಾನೆ ಎಂದು ಭಾರತೀಯ ಗೂಢಚಾರಿ ಸಂಸ್ಥೆಗಳು ತಾಂತ್ರಿಕ ವಿಶ್ಲೇಷಣೆಗಳ ಮೂಲಕ ಸ್ಪಷ್ಟಪಡಿಸಿವೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ಸಭೆಯ ಮುನ್ನ ಜಾಗತಿಕ ಕಣ್ಣೊರೆಸುವ ತಂತ್ರವಾಗಿ ಪಾಕಿಸ್ತಾನ ಈ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ದಾಳಿಯಲ್ಲಿ ಬಾಹವಲ್ಪುರದಲ್ಲಿದ್ದ ಜೈಶ್-ಎ-ಮೊಹಮ್ಮದ್‌ನ ಮುಖ್ಯ ಕಚೇರಿ ಹಾಗೂ ತರಬೇತಿ ಕೇಂದ್ರ ಮಾರ್ಕಝ್ ಸುಭಾನಲ್ಲಾವನ್ನು ಭಾರತೀಯ ಸೇನೆ ಧ್ವಂಸಗೊಳಿಸಿತ್ತು. 2019ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ಹಲವು ಉಗ್ರ ಕೃತ್ಯಗಳಿಗೆ ಮಸೂದ್ ಅಜರ್ ಪ್ರಮುಖ ಸಂಚುಗಾರನಾಗಿದ್ದಾನೆ.

Share

Leave a comment

Leave a Reply

Your email address will not be published. Required fields are marked *

Related Articles