Home ಕ್ರೈಂ ನ್ಯೂಸ್ ಇನ್‌ಸ್ಟಾಗ್ರಾಮ್‌ ಪರಿಚಯ, ಅಶ್ಲೀಲ ಫೋಟೋ ಇಟ್ಟುಕೊಂಡು ಬೆಂಗಳೂರು ಯುವತಿಗೆ ಬೆದರಿಕೆ: ಹಣ, ಚಿನ್ನ ಸುಲಿಗೆ ಮಾಡಿದ್ದ ಯುವಕನ ವಿರುದ್ದ ಕೇಸ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಇನ್‌ಸ್ಟಾಗ್ರಾಮ್‌ ಪರಿಚಯ, ಅಶ್ಲೀಲ ಫೋಟೋ ಇಟ್ಟುಕೊಂಡು ಬೆಂಗಳೂರು ಯುವತಿಗೆ ಬೆದರಿಕೆ: ಹಣ, ಚಿನ್ನ ಸುಲಿಗೆ ಮಾಡಿದ್ದ ಯುವಕನ ವಿರುದ್ದ ಕೇಸ್!

Share
ಬೆಂಗಳೂರು
Share

ಬೆಂಗಳೂರು: ಬೆಂಗಳೂರಿನ ಯುವತಿಯೊಬ್ಬಳಿಗೆ ಇನ್‌ಸ್ಟಾಗ್ರಾಮ್‌ ಮೂಲಕ ಪರಿಚಯವಾದ ಅನ್ಫಾಲ್ ಎಂಬ ವ್ಯಕ್ತಿ, ಆಕೆಯ ಖಾಸಗಿ ಫೋಟೋಗಳನ್ನು ಬಳಸಿ ಬೆದರಿಕೆ ಹಾಕಿ, ಹಣ ಹಾಗೂ ಚಿನ್ನಾಭರಣ ವಸೂಲಿ ಮಾಡಿ, ಆಕೆಗೆ ಮಾನಸಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ:

2024 ರಲ್ಲಿ ಯುವತಿ ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಇನ್‌ಸ್ಟಾಗ್ರಾಮ್‌ನಲ್ಲಿ ಅನ್ಫಾಲ್‌ನ ಪರಿಚಯವಾಗಿತ್ತು. ಆತ ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದು, ಮಣಿಪಾಲ್ ಬಳಿಯ ಹೋಟೆಲ್‌ ಒಂದಕ್ಕೆ ಕರೆದೊಯ್ದು, ಆಕೆಯ ಅನುಮತಿಯಿಲ್ಲದೆ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡಿದ್ದನು.

ಬ್ಲಾಕ್‌ಮೇಲ್ ಮತ್ತು ಸುಲಿಗೆ:

ಈ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ, ಫೋನ್ ಪೇಮೂಲಕ ಹಣ ಪಡಿತರಲು ಪ್ರಾರಂಭಿಸಿದನು. ಏಪ್ರಿಲ್ 2026 ರಲ್ಲಿ ಮತ್ತೆ ಹೋಟೆಲ್‌ಗೆ ಕರೆಸಿ ಬೆದರಿಕೆ ಹಾಕಿದಾಗ, ಯುವತಿಯ ಬಳಿ ಹಣವಿಲ್ಲದಿದ್ದ ಕಾರಣ ಆಕೆಯ ಕತ್ತಿನಲ್ಲಿದ್ದ 10 ರಿಂದ 12 ಗ್ರಾಂ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡಿದ್ದನು.

ಕಿರುಕುಳ ಮತ್ತು ಸ್ವಯಂ ಹಾನಿ:

ಯುವತಿ ಆತನ ಸಂಖ್ಯೆಯನ್ನು ಬ್ಲಾಕ್ ಮಾಡಿದಾಗ, ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದನು. ದೀರ್ಘಾವಧಿಯ ವಾಟ್ಸಾಪ್ ವೀಡಿಯೊ ಕರೆಗಳ ಮೂಲಕ ಆಕೆಗೆ ಮಾನಸಿಕ ಕಿರುಕುಳ ನೀಡಿದ್ದ. ತನಗೆ ತಾನೇ ಗಾಯ ಮಾಡಿಕೊಳ್ಳುವಂತೆ ನಾಟಕವಾಡಿದ್ದ. ಆತನ ಕೊಲೆ ಬೆದರಿಕೆಗೆ ಹೆದರಿದ ಯುವತಿ ಬ್ಲೇಡ್‌ನಿಂದ ತನ್ನ ಎದೆಯ ಮೇಲೆ “ಅನ್ಫಾಲ್” ಎಂದು ಬರೆಸಿಕೊಂಡಿದ್ದಳು.

ಪೊಲೀಸ್ ದೂರು:

ಸೆಪ್ಟೆಂಬರ್ 4, 2026 ರಂದು ಯುವತಿಯ ಪೋಷಕರು ಆಕೆಯನ್ನು ವಿಚಾರಿಸಿದಾಗ ಸಂಪೂರ್ಣ ವಿಷಯ ತಿಳಿದುಬಂದಿದೆ. ಸೆಪ್ಟೆಂಬರ್ 8 ರಂದು ಯುವತಿಯ ತಂದೆ ನೀಡಿದ ದೂರಿನನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 66(E) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles