ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ 38 ವರ್ಷದ ಭಾರತೀಯ ಮೂಲದ ಮಹಿಳೆ ಶಾಲಿನಿ ಠಾಕೂರ್ ಅವರನ್ನು ಅವರ ಕೆಲಸದ ಸ್ಥಳದ ಹೊರಗಡೆ ರೋಹಿತ್ (22) ಎಂಬ ಯುವಕ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಹಲವು ತಿಂಗಳುಗಳಿಂದ ಆಕೆಗೆ ನಿರಂತರವಾಗಿ ನೀಡುತ್ತಿದ್ದ ಸ್ಟಾಕಿಂಗ್ ಮತ್ತು ಕಿರುಕುಳದ ನಂತರ ಈ ಭೀಕರ ಘಟನೆ ನಡೆದಿದೆ.
ಸ್ಟಾಕಿಂಗ್ ಹಾಗೂ ಕಿರುಕುಳ: ಆರೋಪಿ ರೋಹಿತ್, ಶಾಲಿನಿ ಅವರ ಕಾರಿನ ಅಡಿಯಲ್ಲಿ ಆಪಲ್ ಏರ್‌ಟ್ಯಾಗ್ ಅಳವಡಿಸಿ ಆಕೆಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದನು. ಕಾರಿನ ಟೈರ್‌ಗಳ ಗಾಳಿ ತೆಗೆಯುವುದು, ಆಕೆಯ ಮನೆಗೆ ಕದ್ದು ಪ್ರವೇಶಿಸುವುದು ಹಾಗೂ ನಿರಂತರವಾಗಿ ಬೆನ್ನಟ್ಟುವುದು ಮಾಡುತ್ತಿದ್ದನು.
ನ್ಯಾಯಾಲಯದ ನಿರ್ಬಂಧಾಜ್ಞೆ : ಮೇ ತಿಂಗಳಿನಲ್ಲಿ ಶಾಲಿನಿ ಆರೋಪಿಯ ವಿರುದ್ಧ ಕೋರ್ಟ್‌ನಿಂದ ‘ರೆಸ್ಟ್ರೈನಿಂಗ್ ಆರ್ಡರ್’ ಪಡೆದುಕೊಂಡಿದ್ದರು. ಆದರೂ ಜುಲೈನಲ್ಲಿ ಆರೋಪಿ ಈ ನಿಯಮವನ್ನು ಉಲ್ಲಂಘಿಸಿದ್ದರೂ ಪೊಲೀಸರು ಆತನನ್ನು ಬಂಧಿಸಿರಲಿಲ್ಲ.
ಕೊಲೆ ಮತ್ತು ಆತ್ಮಹತ್ಯೆ: ಸ್ಯಾಕ್ರಮೆಂಟೋದ ರೆಸ್ಟೋರೆಂಟ್ ಬಳಿ ಶಾಲಿನಿ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ನಂತರ ಪೊಲೀಸರು ಆತನ ವಾಹನವನ್ನು ಚೇಸ್ ಮಾಡಿದಾಗ, ಹೈವೇ 50 ರಲ್ಲಿ ತನ್ನ ಕಾರಿನಲ್ಲೇ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.





Leave a comment