Home ದಾವಣಗೆರೆ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಮಹಿಳೆ ಶಾಲಿನಿ ಠಾಕೂರ್ ಭೀಕರ ಹತ್ಯೆ: ಹೈವೇಯಲ್ಲಿ ಆರೋಪಿ ಆತ್ಮಹತ್ಯೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಮಹಿಳೆ ಶಾಲಿನಿ ಠಾಕೂರ್ ಭೀಕರ ಹತ್ಯೆ: ಹೈವೇಯಲ್ಲಿ ಆರೋಪಿ ಆತ್ಮಹತ್ಯೆ!

Share
ಕ್ಯಾಲಿಫೋರ್ನಿಯಾ
Share

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾಕ್ರಮೆಂಟೊ ನಗರದಲ್ಲಿ ಭೀಕರ ಘಟನೆಯೊಂದು ನಡೆದಿದೆ. 38 ವರ್ಷದ ಭಾರತೀಯ ಮೂಲದ ಮಹಿಳೆ ಶಾಲಿನಿ ಠಾಕೂರ್ ಅವರನ್ನು ಅವರ ಕೆಲಸದ ಸ್ಥಳದ ಹೊರಗಡೆ ಹಂತಕನೊಬ್ಬ ಬೆನ್ನಟ್ಟಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ 22 ವರ್ಷದ ಆರೋಪಿ ರೋಹಿತ್ ನಂತರ ಪೋಲಿಸರು ಬೆನ್ನಟ್ಟಿದಾಗ ಹೈವೇಯಲ್ಲಿ ತನ್ನ ಕಾರಿನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ಹಿನ್ನೆಲೆ ಮತ್ತು ಕಿರುಕುಳ 

ಶಾಲಿನಿ ಠಾಕೂರ್ ಅವರು ಕಾರ್ಯನಿರ್ವಹಿಸುತ್ತಿದ್ದ ರೆಸ್ಟೋರೆಂಟ್‌ಗೆ ‘ಡೋರ್‌ಡ್ಯಾಶ್’ ಮೂಲಕ ಡೆಲಿವರಿ ಮಾಡಲು ಬರುತ್ತಿದ್ದ ರೋಹಿತ್‌ನ ಪರಿಚಯವಾಗಿತ್ತು. ಸೆಪ್ಟೆಂಬರ್ 2025 ರಿಂದ ಆರೋಪಿ ಶಾಲಿನಿಗೆ ನಿರಂತರವಾಗಿ ಹಿಂಸೆ ಹಾಗೂ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಆಕೆಯ ಕಾರಿಗೆ ರಹಸ್ಯವಾಗಿ ಆಪಲ್ ಏರ್‌ಟ್ಯಾಗ್ ಅಳವಡಿಸಿ ಚಲನವಲನಗಳನ್ನು ಟ್ರ್ಯಾಕ್ ಮಾಡುವುದು, ಕಾರಿನ ಟೈರ್‌ಗಳ ಗಾಳಿ ತೆಗೆಯುವುದು, ಮತ್ತು ಬಲವಂತವಾಗಿ ಮದುವೆಯಾಗುವಂತೆ ಒತ್ತಾಯಿಸುವುದು ಆತನ ಕೃತ್ಯವಾಗಿತ್ತು. ಒಂದೊಮ್ಮೆ ಶಾಲಿನಿ ಮಲಗಿದ್ದಾಗ ಆಕೆಯ ಫ್ಲ್ಯಾಟ್‌ನ ನಕಲಿ ಕೀ ಬಳಸಿ ಮನೆ ಪ್ರವೇಶಿಸಿದ್ದನೆಂದು ವರದಿಯಾಗಿದೆ.

ರಕ್ಷಣಾ ಆದೇಶ ಉಲ್ಲಂಘನೆ:

ಆರೋಪಿಯ ಕಿರುಕುಳ ಸಹಿಸಲಾರದೆ ಶಾಲಿನಿ ನ್ಯಾಯಾಲಯದಿಂದ ರಕ್ಷಣಾ ಆದೇಶವನ್ನು ಪಡೆದುಕೊಂಡಿದ್ದರು. ಮೇ 2026 ರಲ್ಲಿ ಈ ನೋಟಿಸ್ ಆರೋಪಿಗೆ ತಲುಪಿದ್ದರೂ, ಆತ ಅದನ್ನು ಉಲ್ಲಂಘಿಸಿ ಜುಲೈನಲ್ಲಿ ಆಕೆಯ ಮನೆಯ ಮುಂದೆ ತರಕಾರಿಗಳನ್ನು ಇಟ್ಟು ಕಿರುಕುಳ ಮುಂದುವರಿಸಿದ್ದ.

ದಾಳಿ ಮತ್ತು ಸಾವು:

ಮಂಗಳವಾರ ಮಧ್ಯಾಹ್ನ ಸ್ಯಾಕ್ರಮೆಂಟೊದ ಪನೇರಾ ಬ್ರೆಡ್  ರೆಸ್ಟೋರೆಂಟ್ ಬಳಿ ಶಾಲಿನಿ ಕಾರಿನಿಂದ ಇಳಿಯುತ್ತಿದ್ದಂತೆ ಕಾಯುತ್ತಿದ್ದ ರೋಹಿತ್ ಆಕೆಯನ್ನು ತಡೆದು ಜಗಳ ತೆಗೆದಿದ್ದಾನೆ. ಶಾಲಿನಿ ಓಡಿಹೋಗಲುತ್ನಿಸಿದಾಗ, ಆಕೆಯನ್ನು ಬೆನ್ನಟ್ಟಿ ಹತ್ತಿರದಿಂದ ಹಲವು ಬಾರಿ ಗುಂಡು ಹಾರಿಸಿದ್ದಾನೆ. ಸ್ಥಳದಲ್ಲೇ ಶಾಲಿನಿ ಕೊನೆಯುಸಿರೆಳೆದಿದ್ದಾರೆ.

ಆರೋಪಿಯ ಅಂತ್ಯ:

ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆಯ ಮೂಲಕ ಪೋಲಿಸರು ಆರೋಪಿಯ ಕಾರನ್ನು ಹೈವೇ 50 ರಲ್ಲಿ ಪತ್ತೆಹಚ್ಚಿದರು. ಪೋಲಿಸರು ಆತನನ್ನು ಸುತ್ತುವರಿದಾಗ, ಆರೋಪಿ ರೋಹಿತ್ ತನಗೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ತನಿಖಾಧಿಕಾರಿಗಳ ಪ್ರಕಾರ ಆರೋಪಿ ಅನಧಿಕೃತವಾಗಿ ಅಮೆರಿಕದಲ್ಲಿ ನೆಲೆಸಿದ್ದ ವ್ಯಕ್ತಿಯಾಗಿದ್ದ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles