ದಾವಣಗೆರೆ: ಪೂರ್ವ ವಲಯದ ನೂತನ ಪೊಲೀಸ್ ಮಹಾ ನಿರೀಕ್ಷಕರಾಗಿ ಎನ್. ಸತೀಶ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್. ಟಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದು, ನೂತನ ಐಜಿಪಿ ಅವರಿಗೆ ಶುಭಾಶಯ ಕೋರಿದರು.
ಖಾಲಿಯಿದ್ದ ದಾವಣಗೆರೆ ಪೂರ್ವ ವಲಯದ ಐಜಿಪಿ ಹುದ್ದೆಗೆ 2003ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾದ ಎನ್. ಸತೀಶ್ ಕುಮಾರ್ ಅವರನ್ನು ಮುಂದಿನ ಆದೇಶದವರೆಗೆ ನಿಯೋಜನೆಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಸೂಚನೆ ಹೊರಡಿಸಿದೆ.
ಕರ್ನಾಟಕ ಕೆಡರ್ನ 2003ರ ಬ್ಯಾಚ್ನ ಹಿರಿಯ ಐಪಿಎಸ್ ಅಧಿಕಾರಿ ಎನ್. ಸತೀಶ್ ಕುಮಾರ್ (IPS ID: 20031044). ಪ್ರಸ್ತುತ ಬೆಂಗಳೂರಿನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಐಜಿಪಿ, ಹೆಚ್ಕ್ಯೂ-1 ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮೂಲತಃ ತಮಿಳುನಾಡಿನವರಾದ ಇವರು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯ ಮೂಲಕ ನೇರ ಆಯ್ಕೆಯಾಗಿ 22 ಡಿಸೆಂಬರ್ 2003ರಂದು ಐಪಿಎಸ್ ಸೇವೆಗೆ ಸೇರ್ಪಡೆಯಾದರು.
ಸೇವಾ ಪಥ ಮತ್ತು ಪ್ರಮುಖ ಹುದ್ದೆಗಳು:
ತಮ್ಮ ಸುದೀರ್ಘ 23 ವರ್ಷಗಳ ಪೊಲೀಸ್ ಸೇವೆಯಲ್ಲಿ ಎನ್. ಸತೀಶ್ ಕುಮಾರ್ ಅವರು ರಾಜ್ಯದ ಹಲವು ಪ್ರಮುಖ ಹಾಗೂ ಸೂಕ್ಷ್ಮ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ:
ಆರಂಭಿಕ ಸೇವೆ ಹಾಗೂ ಕಮಿಷನರ್ ಹುದ್ದೆ:
ಬೀದರ್ ಮತ್ತು ಕಲ್ಬುರ್ಗಿ ಜಿಲ್ಲೆಗಳಲ್ಲಿ ಸೂಪರಿಂಡೆಂಟ್ ಆಫ್ ಪೊಲೀಸ್ ಆಗಿ, ಬೆಂಗಳೂರು ನಗರದಲ್ಲಿ ಡಿಸಿಪಿ (ಆಡಳಿತ) ಹಾಗೂ ಮಂಗಳೂರು ನಗರ ಮತ್ತು ಕಲ್ಬುರ್ಗಿ ನಗರಗಳ ಪೊಲೀಸ್ ಕಮಿಷನರ್ ಆಗಿ ಕರ್ತವ್ಯ
ನಿರ್ವಹಿಸಿದ್ದಾರೆ.
ಡಿಐಜಿಪಿ ಮತ್ತು ಐಜಿಪಿ ಬಡ್ತಿ:
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (KSRP) ಯಲ್ಲಿ ಡಿಐಜಿಪಿ (L13A) ಆಗಿ ಸೇವೆ ಸಲ್ಲಿಸಿದ ಇವರು, ಬಳಿಕ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (IGP – L14) ಆಗಿ ಬಡ್ತಿ ಪಡೆದರು.
ವಿವಿಧ ವಲಯಗಳ ಜವಾಬ್ದಾರಿ:
ಬೆಳಗಾವಿ ಉತ್ತರ ವಲಯದ ಐಜಿಪಿ ಆಗಿ ಹಾಗೂ ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ (ACP West) ಕಾರ್ಯನಿರ್ವಹಿಸಿದ್ದಾರೆ.
ಜುಲೈ 14, 2025 ರಿಂದ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಐಜಿಪಿ, ಹೆಚ್ಕ್ಯೂ-1 ಆಗಿ ಕರ್ತವ್ಯ ನಿರ್ವಹಿಸಿದ್ದರು.
ಅನುಭವೀ ಅಧಿಕಾರಿಯಾಗಿರುವ ಇವರು ಕೇಂದ್ರ ಸರ್ಕಾರದ ಇನ್ಸ್ಪೆಕ್ಟರ್ ಜನರಲ್ (IG) ಮಟ್ಟದ ಹುದ್ದೆಗಳಿಗೂ ಅರ್ಹತೆ (Empanelled) ಪಡೆದುಕೊಂಡಿದ್ದರು.





Leave a comment